HEALTH TIPS

ಈ ವರ್ಷ ಸಾರ್ವಜನಿಕ ಶಾಲೆಗಳಲ್ಲಿ 1.75 ಲಕ್ಷ ಹೊಸ ವಿದ್ಯಾರ್ಥಿಗಳ ದಾಖಲಾತಿ- ನಾಲ್ಕು ವರ್ಷಗಳಲ್ಲಿ 6.8 ಲಕ್ಷ ಹೆಚ್ಚು ವಿದ್ಯಾರ್ಥಿಗಳ ಆಗಮನ

                    

        ತಿರುವನಂತಪುರ: 2021 ರ ಶೈಕ್ಷಣಿಕ ವರ್ಷಕ್ಕೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ 1.75 ಲಕ್ಷ ಹೊಸ ವಿದ್ಯಾರ್ಥಿಗಳನ್ನು ಪ್ರವೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ವರ್ಷದ ಮಕ್ಕಳ ಜನಗಣತಿಯ ಹಿನ್ನೆಲೆಯ ಪ್ರಾಥಮಿಕ ಮೌಲ್ಯಮಾಪನವಾಗಿದೆ.

         ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಾಲ್ಕು ವರ್ಷಗಳಲ್ಲಿ 6.8 ಲಕ್ಷ ಮಕ್ಕಳು ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಈ ವರ್ಷ, ಒಂದನೇ ತರಗತಿಗೆ ಮಾತ್ರ 8,170 ವಿದ್ಯಾರ್ಥಿಗಳನ್ನು ಪ್ರವೇಶಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಹೆಚ್ಚಿದೆ. ಐದನೇ ತರಗತಿಯ ಪ್ರವೇಶಾತಿಯು ಅತಿ ಹೆಚ್ಚಿದ್ದು  ಹಿಂದಿನ ವರ್ಷಕ್ಕಿಂತ 43,789 ಹೆಚ್ಚು ಮಂದಿ ದಾಖಲಾತಿ ಹೊಂದಿದ್ದಾರೆ. ಎಂಟನೇ ತರಗತಿಯಲ್ಲಿ ಹೆಚ್ಚುವರಿ 35,606 ವಿದ್ಯಾರ್ಥಿಗಳು ದಾಖಲಾತಿ ಪಡೆದಿರುವರು. 

        ಹೆಚ್ಚುವರಿಯಾಗಿ 1,75,074 ಮಕ್ಕಳನ್ನು ಸರ್ಕಾರಿ/ ಅನುದಾನಿತ ಶಾಲೆಗೆ ಈ ವರ್ಷ ದಾಖಲಿಸಲಾಗಿದೆ. ಪ್ರಸ್ತುತ 33,75,304 ಲಕ್ಷ ಮಕ್ಕಳು ದಾಖಲಾಗಿದ್ದಾರೆ. ಹಿಂದಿನ ವರ್ಷಕ್ಕಿಂತ ಒಟ್ಟು ಮಕ್ಕಳ ಸಂಖ್ಯೆ 47,760 ಹೆಚ್ಚಾಗಿದೆ. ಇದೇ ಸಂದರ್ಭ ಅನುದಾನ ರಹಿತ ಶಾಲೆಗಳಲ್ಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 91,510 ರಷ್ಟು ಕುಸಿದಿದೆ.

         ಕೈಟ್ ಸಿದ್ಧಪಡಿಸಿದ 'ಸಂಪೂರ್ಣ' ಶಾಲಾ ನಿರ್ವಹಣಾ ಪೆÇೀರ್ಟಲ್ ಮೂಲಕ ಡಿಸೆಂಬರ್ 28 ರ ಅಂಕಿ ಅಂಶಗಳು ಇವು. ಈ ವರ್ಷ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಾಗ ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

        ಇಂತಹ ಆಶ್ಚರ್ಯಕರ ಬದಲಾವಣೆಗೆ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ಅಭಿವೃದ್ದಿಗೊಳಿಸಿರುವುದು ಮತ್ತು ಸಾಮಾನ್ಯ ಶಿಕ್ಷಣ ಸಂರಕ್ಷಣಾ ಯಜ್ಞಕ್ಕೆ ಚಾಲನೆಯ ಭಾಗವಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದ ಪರಿಣಾಮವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ಸಾರ್ವಜನಿಕ ಶಾಲೆಗಳು ಈಗ ವಿಶ್ವ ದರ್ಜೆಯ ಡಿಜಿಟಲ್ ಸೌಲಭ್ಯಗಳನ್ನು ಹೊಂದಿವೆ. ಸಮಾಜದ ಅತ್ಯಂತ ಬಡ ಮಗು ಕೂಡ ವಿಶ್ವ ದರ್ಜೆಯ ಶಿಕ್ಷಣ ಪಡೆಯಬೇಕು ಎಂಬ ಸಾಮಾಜಿಕ ದೃಷ್ಟಿಯ ಭಾಗವಾಗಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನವನ್ನು ಪ್ರಾರಂಭಿಸಲಾಯಿತು.

     ಸಾರ್ವಜನಿಕ ಶಿಕ್ಷಣ ಯಜ್ಞಕ್ಕೆ ಸಾರ್ವಜನಿಕರು, ಪೋಷಕರು ಮತ್ತು ಶಿಕ್ಷಕರಿಂದ ಆಂತರಿಕ ಬೆಂಬಲ ದೊರಕಿತು. ಕೇರಳದಲ್ಲಿ ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಪರಿವರ್ತನೆಗೆ ಸರ್ಕಾರ ಚಾಲನೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries