ತಿರುವನಂತಪುರ: ಯುಕೆಯಲ್ಲಿ ಸ್ಥಳೀಯವಾಗಿ ಮಾರ್ಪಡಿಸಲ್ಪಟ್ಟ ಕೊರೋನಾ ವೈರಸ್ ಇರುವಿಕೆ ಪತ್ತೆಯಾದ ಬಳಿಕ ಯುಕೆ ಯಿಂದ ಕೇರಳಕ್ಕೆ ಬಂದ 18 ಜನರಲ್ಲಿ ಕೋವಿಡ್ ದೃಢಪಟ್ಟಿರುವ ಆತಂಕಕಾರಿ ವರ್ತಮಾನ ವರದಿಯಾಗಿದೆ. ಲಂಡನ್ ನಿಂದ ಆಗಮಿಸಿದ್ದವರಲ್ಲಿ ಹೊಸ ವೈರಸ್ ಹೊಂದಿದ್ದಾರೆಯೇ ಎಂದು ನಿರ್ಧರಿಸಲು ವಿಶೇಷ ಪರೀಕ್ಷೆಗಳನ್ನು ನಡೆಸಿ ದೃಢಪಡಿಸಲಾಗಿದೆ.
ಕೇರಳಕ್ಕೆ ಆಗಮಿಸಿದ 14 ಜನರ ಮಾದರಿಗಳನ್ನು ವಿವರವಾದ ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಇಂದು ಮತ್ತೆ ನಾಲ್ಕು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು.
ಇಗ್ಲೆಂಡ್ ನಲ್ಲಿ ದೃಢೀಕರಿಸಲ್ಪಟ್ಟ ಸ್ಥಳೀಯವಾಗಿ ಮಾರ್ಪಡಿಸಿದ ಕರೋನಾ ವೈರಸ್ ವಿವಿಧ ದೇಶಗಳಿಗೆ ಹರಡುತ್ತಿದೆ. ಇದರ ಬೆನ್ನಲ್ಲೇ ಕೇರಳದಲ್ಲಿ ತಪಾಸಣೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಲಾಗಿದೆ. ಯುರೋಪಿಯನ್ ದೇಶಗಳಾದ ಕೆನಡಾ, ಜಪಾನ್, ಆಸ್ಟ್ರೇಲಿಯಾ ಮತ್ತು ಲೆಬನಾನ್‍ಗಳಲ್ಲಿ ಈ ವೈರಸ್ ದೃಢಪಟ್ಟಿದೆ. ಅಂದಿನಿಂದ ಈ ವೈರಸ್ ಫ್ರಾನ್ಸ್, ಡೆನ್ಮಾರ್ಕ್, ಸ್ಪೇನ್, ಸ್ವೀಡನ್, ನೆದಲ್ಯಾರ್ಂಡ್ಸ್, ಜರ್ಮನಿ ಮತ್ತು ಇಟಲಿಯಲ್ಲಿ ಕಂಡುಬಂದಿದೆ. ಈ ಪರಿಸ್ಥಿತಿಯಲ್ಲಿ ಭಾರತದಲ್ಲಿಯೂ ನಿಬಂಧನೆಗಳನ್ನು ಬಿಗಿಗೊಳಿಸಲಾಗುತ್ತಿದೆ.
ಯುಕೆಯಲ್ಲಿ ಸ್ಥಳೀಯವಾಗಿ ಮಾರ್ಪಡಿಸಿದ ಕರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ದೇಶದ ವಿಶೇಷ ಮಾನದಂಡಗಳನ್ನು ಜನವರಿ 31 ರವರೆಗೆ ವಿಸ್ತರಿಸಿದೆ.
ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದರೂ, ಯುಕೆಯಲ್ಲಿ ಆತಂಕಕಾರಿ ಪರಿಸ್ಥಿತಿ ಮುಂದುವರೆದಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಮೇಲ್ವಿಚಾರಣೆ ಮತ್ತು ಮುನ್ನೆಚ್ಚರಿಕೆ ಅಗತ್ಯ. ಪ್ರದೇಶಗಳನ್ನು ಪರಸ್ಪರ ವಲಯಗಳಾಗಿ ವಿಂಗಡಿಸುವುದನ್ನು ಮುಂದುವರಿಸಲಾಗುತ್ತದೆ. ನಿಗದಿತ ಪ್ರದೇಶಗಳಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಮುಂದುವರಿಸಬೇಕು ಮತ್ತು ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಹೇಳಿದೆ.





