HEALTH TIPS

ಚಾವಟಿಗೆ ಹಿಡಿದು ಉಮ್ಮನ್ ಚಾಂಡಿಯೇ ಬರಬೇಕು- ಪಿಜೆ ಜೋಸೆಫ್ ಮತ್ತು ಆರ್‍ಎಸ್‍ಪಿಯಿಂದ ನಾಯಕತ್ವಕ್ಕೆ ಸ್ಪಷ್ಟ ಸಂದೇಶ

                        

         ತಿರುವನಂತಪುರ: ಕಾಂಗ್ರೆಸ್ ನಾಯಕತ್ವದಲ್ಲಿ ಉಮ್ಮನ್ ಚಾಂಡಿ ಸಕ್ರಿಯವಾಗಿರಬೇಕು ಎಂದು ಪಿಜೆ ಜೋಸೆಫ್ ಮತ್ತು ಆರ್‍ಎಸ್‍ಪಿ ಕೇಂದ್ರ ನಾಯಕತ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಸ್ಥಳೀಯ ಚುನಾವಣೆಗಳಲ್ಲಿನ ಹಿನ್ನಡೆಯ ಬಳಿಕ  ಹಿನ್ನಡೆಗಳಿಗೆ ಪರಿಹಾರಗಳನ್ನು ಚರ್ಚಿಸಲು ಬಂದ ಹೈಕಮಾಂಡ್ ಪ್ರತಿನಿಧಿಗಳ ಮುಂದೆ ನಾಯಕರು ಈ ಹೇಳಿಕೆ ನೀಡಿದ್ದಾರೆ.

         ಪಿಜೆ ಜೋಸೆಫ್ ಅವರು ಕಾಂಗ್ರೆಸ್‍ನಲ್ಲಿನ ಒಳ ಜಗಳಗಳಗಳನ್ನು  ತಕ್ಷಣವೇ ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಗುಂಪುಗಾರಿಕೆ ಕೊನೆಗೊಳಿಸಲು ಕೇಂದ್ರವು ಮಧ್ಯಪ್ರವೇಶಿಸಬೇಕು. ಎಲ್ಲರೂ ಒಟ್ಟಾಗಿ ಮುಂದುವರಿಯಬೇಕೆಂದು ಪಿಜೆ ಜೋಸೆಫ್ ಒತ್ತಾಯಿಸಿದರು.

         ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಸ್ಥಾನಗಳ ಹಂಚಿಕೆ ಪೂರ್ಣಗೊಳ್ಳಬೇಕು ಮತ್ತು ಎನ್‍ಸಿಪಿಯನ್ನು ಮುಂಚೂಣಿಗೆ ತರಲು ಪ್ರಯತ್ನಿಸಬೇಕು ಎಂದು ಪಿಜೆ ಜೋಸೆಫ್ ಒತ್ತಾಯಿಸಿದರು. ಏತನ್ಮಧ್ಯೆ, ವಿಧಾನಸಭಾ ಚುನಾವಣೆಯ ಚಾಲನೆಯಲ್ಲಿ ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ ಅವರು ಒಟ್ಟಾಗಿ ಪಕ್ಷವನ್ನು ಮುನ್ನಡೆಸಬೇಕು ಎಂದು ಆರ್.ಎಸ್.ಪಿ ಸೂಚಿಸಿದೆ.

         ಉಮ್ಮನ್ ಚಾಂಡಿ ಮತ್ತು ಚೆನ್ನಿತ್ತಲ ನೇತೃತ್ವದ ಮೈತ್ರಿ ಚುನಾವಣೆಯನ್ನು ಎದುರಿಸಬೇಕು. ಆರೋಪಗಳ ಬಗ್ಗೆ ಪರಾಮರ್ಶೆಗಳನ್ನು ಆ ಬಳಿಕ ಮಾಡೋಣವೆಂದು ಆರ್.ಎಸ್.ಪಿ ಹೇಳಿದೆ. ಎನ್.ಕೆ ಪ್ರೇಮಚಂದ್ರನ್ ಸೇರಿದಂತೆ ನಾಯಕರು ಹೈಕಮಾಂಡ್ ನೊಂದಿಗೆ ಮಾತುಕತೆ ನಡೆಸಿದರು. 

       ಕಾಂಗ್ರೆಸ್ ನೊಳಗಿನ ಸಾಂಸ್ಥಿಕ ಸಮಸ್ಯೆಗಳಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೊಡ್ಡ ಹಿನ್ನಡೆ ಉಂಟಾಗಿದೆ ಎಂದು ಆರ್.ಎಸ್.ಪಿ ಹೇಳಿದೆ. ಉಮ್ಮನ್ ಚಾಂಡಿ ಮುಖ್ಯವಾಹಿನಿಯಿಂದ ದೂರವಿರುವುದು ಪ್ರತಿಕೂಲವಾಗಿದೆ ಎಂದು ಆರ್.ಎಸ್.ಪಿ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries