HEALTH TIPS

ಬಿನೀಶ್ ಕೊಡಿಯೇರಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ ಇಡಿ-ಜಾಮೀನಿಗೆ ತಡೆ

          ಬೆಂಗಳೂರು: ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಿನೀಶ್ ಕೊಡಿಯೇರಿ ವಿರುದ್ಧ ಚಾರ್ಜ್‍ಶೀಟ್ ದಾಖಲಿಸಿದೆ. ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಾಥಮಿಕ ಚಾರ್ಜ್‍ಶೀಟ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ. 

         ಬಿನೀಶ್ ಕೊಡಿಯೇರಿಯನ್ನು ಬಂಧಿಸಿದ 60 ದಿನಗಳ ಬಳಿಕ ತನಿಖಾ ತಂಡವು ಚಾರ್ಜ್‍ಶೀಟ್ ಸಲ್ಲಿಸಿದೆ. 60 ದಿನಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಸಲು ವಿಫಲವಾದರೆ ಸಾಮಾನ್ಯ  ಜಾಮೀನು ನೀಡುವುದು ವಾಡಿಕೆಯಾಗಿದೆ. ಇದನ್ನು ತಡೆಹಿಡಿಯಲು ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. 

          ಅಕ್ಟೋಬರ್ 29 ರಂದು ಬಿನೀಶ್ ಅವರನ್ನು ಬಂಧಿಸಲಾಗಿತ್ತು. ಬಿನೀಶ್ ಕೊಡಿಯೇರಿ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಹಿಂದೆ ಚಾರ್ಜ್‍ಶೀಟ್ ನ್ನು ಹಂತಗಳಲ್ಲಿ ಸಲ್ಲಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಸಂಪೂರ್ಣ ಚಾರ್ಜ್‍ಶೀಟ್ ದಾಖಲಿಸಲಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ. 

        ಮನಿ ಲಾಂಡರಿಂಗ್ ಕಾಯ್ದೆಯ ಸೆಕ್ಷನ್ 19 ಎ ಮತ್ತು ಸೆಕ್ಷನ್ 69 ರ ಅಡಿಯಲ್ಲಿ ಚಾರ್ಜ್‍ಶೀಟ್ ದಾಖಲಿಸಲಾಗಿದೆ. ಡ್ರಗ್ ಖರೀದಿಗೆ ಬಿನೀಶ್ ಹಣವನ್ನು ಲಾಂಡರಿಂಗ್ ಮಾಡಿದ್ದಾನೆ ಮತ್ತು ಡ್ರಗ್ ಡೀಲ್ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದನೆಂದು ಚಾರ್ಜ್‍ಶೀಟ್‍ನಲ್ಲಿ ಹೇಳಲಾಗಿದೆ.

         ಈ ಹಿಂದೆ ಬೆಂಗಳೂರು ಸೆಷನ್ಸ್ ನ್ಯಾಯಾಲಯವು ಬಿನೀಶ್ ಕೊಡಿಯೇರಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಜಾರಿ ಇಲಾಖೆಯಿಂದ ನೋಂದಾಯಿಸಲ್ಪಟ್ಟ ಮನಿ ಲಾಂಡರಿಂಗ್ ಪ್ರಕರಣವು ಅಸ್ತಿತ್ವದಲ್ಲಿಲ್ಲ ಎಂಬ ಬಿನೀಶ್ ಕೊಡಿಯೇರಿ ಅವರ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries