HEALTH TIPS

ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಭಾಗವತ ಸಪ್ತಾಹ ಸಂಪನ್ನl ಭಾಗವತ ಶ್ರವಣದಿಂದ ಅಂತರಂಗ ಶುದ್ಧಿ, ಭಕ್ತಿಮಾರ್ಗವೇ ಶ್ರೇಷ್ಠ: ಎಡನೀರು ಶ್ರೀ


ಬದಿಯಡ್ಕ
:
ಕಲಿಯುಗದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಮಾರ್ಗವೇ ಅತ್ಯಂತ ಸರಳ ಹಾಗೂ ಶ್ರೇಷ್ಠ ಸಾಧನವಾಗಿದೆ. ಭಾಗವತ ಶ್ರವಣದಿಂದ ಮನುಷ್ಯನ ಅಂತರಂಗ ಶುದ್ಧಿಯಾಗಿ ಬದುಕಿನಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.



ಅವರು ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಕಳೆದ ಏಳು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಿದ 'ಶ್ರೀಮದ್ಭಾಗವತ ಸಪ್ತಾಹ ಜ್ಞಾನಯಜ್ಞ'ದ ಸಮಾರೋಪ ಸಮಾರಂಭದ ಕೊನೆಯ ದಿನ ಶನಿವಾರದಂದು ಪಾಲ್ಗೊಂಡು ಆಶೀರ್ವಚನ ನೀಡಿ ಮಾತನಾಡಿದರು.

ಇಂದಿನ ಒತ್ತಡದ ಜೀವನಶೈಲಿಯಲ್ಲಿ ಇಂತಹ ಧಾರ್ಮಿಕ ಆಚರಣೆಗಳು, ಪುರಾಣ ಶ್ರವಣ ಹಾಗೂ ಸತ್ಸಂಗಗಳು ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅತ್ಯಂತ ಪೂರಕವಾಗಿವೆ. ಭಕ್ತರು ನಿತ್ಯವೂ ಭಗವಂತನ ನಾಮಸ್ಮರಣೆಯೊಂದಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಧಾರ್ಮಿಕ ಕಾರ್ಯಕ್ರಮಗಳಿಂದ ಲಭಿಸುವ ಆಧ್ಯಾತ್ಮಿಕ ಲಾಭವನ್ನು ಸಮಾಜವು ಪಡೆದುಕೊಳ್ಳಬೇಕು. ಬಹಳಷ್ಟು ಸಂದೇಶಗಳನ್ನೊಳಗೊಂಡ ಕಥೆಗಳು ಭಾಗವತದಿಂದ ಲಭಿಸುತ್ತದೆ ಎಂದರು.


ಸಪ್ತಾಹದ ಅಂಗವಾಗಿ ಏಳು ದಿನಗಳ ಕಾಲ ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ವಿವಿಧ ವೈದಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು, ಭಾಗವತ ಪಾರಾಯಣ ಹಾಗೂ ಪ್ರವಚನಗಳು ಜರುಗಿದವು. ಸಮಾರೋಪದ ದಿನದಂದು ಶ್ರೀಗಳಿಗೆ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಪ್ತಾಹದ ಯಶಸ್ಸಿಗೆ ಶ್ರಮಿಸಿದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಅರ್ಚಕ ವೃಂದ ಹಾಗೂ ಭಕ್ತರಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಸಭೆಯಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಪ್ರಮುಖರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು. ಯಜ್ಞಾಚಾರ್ಯ ಬ್ರಹ್ಮಶ್ರೀ ನಾರಾಯಣ ಮೂರ್ತಿ ಗುರುಪುರಂ ಹಾಗೂ ವೈದಿಕ ವೃಂದವನ್ನು ಗೌರವಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries