HEALTH TIPS

ರಾಜ್ಯದಲ್ಲಿ 3272 ಮಂದಿಗೆ ಕೋವಿಡ್ ಸೋಂಕು-4705 ಮಂದಿ ಗುಣಮುಖ

        ತಿರುವನಂತಪುರ:ರಾಜ್ಯದಲ್ಲಿ ಇಂದು  3272 ಜನರಿಗೆ ಕೋವಿಡ್ ಸೋಂಕು  ಖಚಿತಪಡಿಸಲಾಗಿದೆ. ಮಲಪ್ಪುರಂ 541, ಕೋಝಿಕ್ಕೋಡ್ 383, ತ್ರಿಶೂರ್ 304, ಕೊಲ್ಲಂ 292, ಆಲಪ್ಪುಳ 287, ಎರ್ನಾಕುಳಂ 278, ತಿರುವನಂತಪುರ 255, ಕೊಟ್ಟಾಯಂ 202, ಪಾಲಕ್ಕಾಡ್ 202, ಕಣ್ಣೂರು 154, ಇಡುಕ್ಕಿ 146, ಪತ್ತನಂತಿಟ್ಟು 121,ವಯನಾಡ್ 63,ಕಾಸರಗೋಡು 44 ಎಂಬಂತೆ ಸೋಂಕು ದ್ರಢಪಡಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ 33,758 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.69 ಶೇ.ರಷ್ಟಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 66,42,364 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಇಂದು  ಕೋವಿಡ್ ನಿಂದ   23 ಮಂದಿ ಸಾವನ್ನಪ್ಪಿದ್ದಾರೆ.
        ಕೋವಿಡ್ ಸಾವುಗಳ ಮಾಹಿತಿ:    ತಿರುವನಂತಪುರ ಕರಿಮಾಂಗಾಡ್ಲ ನ ಲಲಿತಮ್ಮ (71), ಅನಯಾರದ ವಿಶ್ವ (72), ಚಿರೈಂಕೀಳಿಯ ಗೋಪಿನಾಥನ್ ನಾಯರ್ (75), ಪೆಟ್ಟಾದ ಉದಯ ಟಿ ನಾಯರ್ (59), ವಿಲಕ್ಕುಡಿಯ ಪೊಡಿಪ್ಪೆನು (80), ಪಾಂಡಿತ್ತಿಟ್ಟದ ಪಾಪಚ್ಚನ್(75),ಆಲಪ್ಪುಳ ಚೇರ್ತಲದ ಭಾಸ್ಕರನ್ (80), ಕಳವೂರಿನ ಜೋಸೆಫ್ (78), ಮಹಮ್ಮದ ಅಮ್ಮಿನಿ (83), ಕೋಟ್ಟಯಂ ವೈಕಂನ ರಾಜನ್ (65), ಕುಡಮಲೂರಿನ ಪಿಪಿ ಗೋಪಿ (72) , ತ್ರಿಶೂರ್ ವೈದ್ಯಕೀಯ ಕಾಲೇಜಿನ ಶಂಕರನ್ (84) ,ತಳಿಕ್ಕುಳಂನ ಉಣ್ಣಿಕ್ರಷ್ಣನ್(60),  ಪದಿಯಾಯಿರಂನ ಶಂಕರನ್ ಕುಟ್ಟಿ (75),ಇರಿಞಲುಕುಡದ ರಾಘವನ್(88),ಮಲಪ್ಪುರಂ ನೀಲಂಬೂರಿನ ಅಯಿಷಕುಟ್ಟಿ(75),ಅಮರಂಬಲದ ಕುಂಞತು(72),ವಡತ್ತರದ ಉಣ್ಣಿಮೊಯ್ದೀನ್(78) , ಕೋಝಿಕ್ಕೋಡ್ ಪುದಿಯಂಗಾಡಿಯ ವಾಸುದೇವನ್(69),ಕೊಡಂಬೇರಿಯ ಕುಂಞಲಿ85), ಪಂತೀರಂಕಾವು ಮೂಲದ ಇಸ್ಮಾಯಿಲ್ (70), ಕರುವಾಂಪಾಯಿಲ್ನ ಆಯಿಶಮ್ಮ (84)  ಫೆರೂಕ್ ಕಾಲೇಜಿನ ಶ್ರೀನಿವಾಸನ್ (72) ಎಂಬವರು ಕೋವಿಡ್ ಬಾಧಿಸಿ ಕೊನೆಯುಸಿರೆಳೆದವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 2,441 ಕ್ಕೆ ಏರಿಕೆಯಾಗಿದೆ. 
       ಇಂದು, ಸೋಂಕು ಪತ್ತೆಯಾದವರಲ್ಲಿ 49 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2859 ಜನರಿಗೆ ಸೋಂಕು ತಗುಲಿತು. 328 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 514, ಕೋಝಿಕ್ಕೋಡ್ 362, ತ್ರಿಶೂರ್ 295, ಕೊಲ್ಲಂ 287, ಆಲಪ್ಪುಳ 277, ಎರ್ನಾಕುಳಂ 203, ತಿರುವನಂತಪುರ 179, ಕೊಟ್ಟಾಯಂ 199, ಪಾಲಕ್ಕಾಡ್ 93, ಕಣ್ಣೂರು 117, ಇಡುಕ್ಕಿ 137, ಪತ್ತನಂತಿಟ್ಟು 99, ವಯನಾಡ್ಸಂ 58, ಕಾಸರಗೋಡು 39 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
        ಮೂವತ್ತಾರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 10, ಎರ್ನಾಕುಳಂ 7, ಕೋಝಿಕ್ಕೋಡ್ 6, ತಿರುವನಂತಪುರ 4, ಪಾಲಕ್ಕಾಡ್ 3, ತ್ರಿಶೂರ್ 2, ಪತ್ತನಂತಿಟ್ಟು, ಕೊಟ್ಟಾಯಂ, ಇಡಕ್ಕಿ ಮತ್ತು ವಯನಾಡ್ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಇಂದು ಸೋಂಕು ಬಾಧಿಸಿದೆ.
       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4705 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 297, ಕೊಲ್ಲಂ 329, ಪತ್ತನಂತಿಟ್ಟು 171, ಆಲಪ್ಪುಳ 312, ಕೊಟ್ಟಾಯಂ 354, ಇಡುಕ್ಕಿ 119, ಎರ್ನಾಕುಲಂ 354, ತ್ರಿಶೂರ್ 563, ಪಾಲಕ್ಕಾಡ್ 323, ಮಲಪ್ಪುರಂ 864, ಕೋಝಿಕ್ಕೋಡ್ 571, ವಯನಾಡ್ 150, ಕನಣ್ಣೂರು 234 ,ಕಾಸರಗೋಡು 64 ಎಂಬಂತೆ  ಫಲಿತಾಂಶಗಳು ನೆಗೆಟಿವ್ ಆಗಿದೆ. ಇದರೊಂದಿಗೆ 59,467 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 5,77,616 ಜನರನ್ನು ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.
     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,09,887 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,95,304 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 14,583 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1353 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
      ಇಂದು 3 ಹೊಸ ಹಾಟ್‌ಸ್ಪಾಟ್‌ಗಳಿವೆ. ಹೊಸ ಹಾಟ್‌ಸ್ಪಾಟ್‌ಗಳೆಂದರೆ ಆಲಪ್ಪುಳ ಜಿಲ್ಲೆಯ ತಮರಕುಲಂ (ಕಂಟೋನ್ಮೆಂಟ್ ವಲಯ ಉಪ ವಾರ್ಡ್( 4), ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೇರಿ (11) ಮತ್ತು ಕೊಟ್ಟಾಯಂ ಜಿಲ್ಲೆಯ ವೆಲ್ಲವೂರ್ (9). ಪ ಇದರೊಂದಿಗೆ ಒಟ್ಟು 448 ಹಾಟ್‌ಸ್ಪಾಟ್‌ಗಳಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries