ತಿರುವನಂತಪುರ: ರಾಜ್ಯದ ತ್ರಿಸ್ಥರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೂರು ಹಂತಗಳಲ್ಲಾಗಿ ನಡೆದ ಚುನಾವಣೆಯ ಫಲಿತಾಂಸಗಳು ಇಂದು ಎಣಿಕೆಗಳೊಂದಿಗೆ ಘೋಷಣೆಯಾಗಲಿದೆ. ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಎಣಿಕೆ ಪ್ರಕ್ರಿಯೆಯ ಮೊದಲ ಫಲಿತಾಂಶ ಪ್ರಕಟಣೆ ಬೆಳಿಗ್ಗೆ 8.30 ರಿಂದ ಲಭ್ಯವಾಗಲಿದೆ. ಮತ ಎಣಿಕೆ ಬೆಳಿಗ್ಗೆ 8 ರಿಂದ 244 ಕೇಂದ್ರಗಳಲ್ಲಿ ನಡೆಯಲಿದೆ. ಮತಗಳ ಎಣಿಕೆಯು ಕೋವಿಡ್ ನಿಬಂಧನೆಗಳಿಗೆ ಅನುಸಾರ ಈವರೆಗೆ ಕಂಡು ಕೇಳಿ ಅರಿಯದ ರೀತಿಯಲ್ಲಿ ನಡೆಯಲಿದೆ.
2.5 ಲಕ್ಷ ಅಂಚೆ ಮತಗಳನ್ನು ಮೊದಲು ಎಣಿಸಲಾಗುವುದು. ಸೇವಾ ಮತಗಳ ಜೊತೆಗೆ, ಕೋವಿಡ್ ಸಂತ್ರಸ್ತರಿಗೆ ವಿಶೇಷ ಅಂಚೆ ಮತಗಳೂ ಇವೆ. ಮೂರು ಹಂತದ ಪಂಚಾಯಿತಿ ವ್ಯವಸ್ಥೆಗಳಲ್ಲಿ ನಗರಸಭೆಗಳು, ಕಾರ್ಪೋರೇಶನ್, ಮತ್ತು ಬ್ಲಾಕ್ ವ್ಯಾಪ್ತಿಯ ಕೇಂದ್ರಗಳಲ್ಲಿ ಎಣಿಕೆ ನಡೆಯಲಿದೆ.
ಗ್ರಾಮ ಪಂಚಾಯಿತಿಗಳು, ಬ್ಲಾಕ್ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಅಂಚೆ ಮತಗಳನ್ನು ಆಯ್ಕೆದಾರರು ಎಣಿಕೆ ಮಾಡುತ್ತಾರೆ. ನಗರಸಭೆಗಳು ಮತ್ತು ಕಾರ್ಪೋರೇಶನ್ ಗಳ ಪ್ರತಿ ಮತಗಟ್ಟೆ ಅನುಸಾರ ಪ್ರತ್ಯೇಕ ಎಣಿಕೆ ಸಭಾಂಗಣಗಳನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಪಂಚಾಯತ್ ಫಲಿತಾಂಶ ಬರಲಿದೆ. ಮೊದಲು ಅಂಚೆ ಮತಪತ್ರ ಸಂಖ್ಯೆ. ಪೂರ್ಣ ಫಲಿತಾಂಶಗಳು ಮಧ್ಯಾಹ್ನದ ವೇಳೆಗೆ ರಾಜ್ಯ ಚುನಾವಣಾ ಆಯುಕ್ತರು ಘೋಶಿಸುವರು. ಎಣಿಕೆ ಕೋಷ್ಟಕಗಳು ಎಂಟು ಮತಗಟ್ಟೆಗಳಿಗೆ ತಲಾ ಒಂದು ಟೇಬಲ್ ಆಗಿರುತ್ತದೆ. ಒಂದು ವಾರ್ಡ್‍ನ ಎಲ್ಲಾ ಮತಗಟ್ಟೆಗಳ ಮತ ಎಣಿಕೆ ಒಂದೇ ಕೋಷ್ಟಕದಲ್ಲಿ ನಡೆಯಲಿದೆ.


