HEALTH TIPS

ಎನ್​ಎಸ್​ಯುಐಗೆ ಗುಡ್​ ಬೈ ಹೇಳಿದ ರಾಹುಲ್​ ಗಾಂಧಿ ಆಪ್ತೆ! ಪಕ್ಷದಲ್ಲಿ ಬದಲಾವಣೆ ಅಗತ್ಯತೆಯಿದೆ ಎಂದ ನಾಯಕಿ

       ನವದೆಹಲಿ: ಕಾಂಗ್ರೆಸ್​ ನಾಯಕರೊಂದಿಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರದಂದು ಮಾತುಕತೆ ನಡೆಸಿರುವ ಬೆನ್ನಲ್ಲೇ ಪಕ್ಷದ ಯುವ ಘಟಕದ ಮುಖ್ಯಸ್ಥೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳಿಗೆ ಸಾಕಷ್ಟು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.

            ಎನ್​ಎಸ್​ಯುಐನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ರುಚಿ ಗುಪ್ತಾ ರಾಜೀನಾಮೆ ನೀಡಿರುವ ನಾಯಕಿ. ಈಕೆ ರಾಹುಲ್​ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರಾಗಿದ್ದಾರೆ. ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳಿಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ ನಿರಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಹುಲ್​ ಜೀ ಮತ್ತು ಸೋನಿಯಾ ಜೀಗೆ ಧನ್ಯವಾದಗಳು ಎಂದು ರುಚಿ ಗುಪ್ತಾ ಹೇಳಿದ್ದಾರೆ.

        ಪಕ್ಷದ ಅಧ್ಯಕ್ಷರನ್ನಾಗಿ ರಾಹುಲ್​ ಗಾಂಧಿಯವರನ್ನು ಆಯ್ಕೆ ಮಾಡುವ ಬಗ್ಗೆ ಮಾತನಾಡಿರುವ ಅವರು, 'ಪಕ್ಷಕ್ಕೆ ಸೂಕ್ತ ನಾಯಕತ್ವದ ಅವಶ್ಯಕತೆ ಇದೆ. ಕಾಂಗ್ರೆಸ್, ಪಕ್ಷದ ಮತ್ತು ಸಂಘಟನೆಯ ಸಮಸ್ಯೆಗಳನ್ನು ಬಗೆಹರಿಸಬೇಕು. ತಳಮಟ್ಟದ ಸಂಪರ್ಕವನ್ನು ಸರಿಪಡಿಸಿಕೊಳ್ಳಬೇಕು ಮತ್ತು ಬಲವಾದ ಉನ್ನತ-ನಾಯಕತ್ವವನ್ನು ಸ್ಥಾಪಿಸಬೇಕಾಗಿದೆ. ರಾಹುಲ್​ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವುದು ಉತ್ತಮ ಆಯ್ಕೆಯಾಗಿದೆ' ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries