ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ರಾಜ್ಯ ಚುನಾವಣೆ ಆಯೋಗದ ನಿರೀಕ್ಷಕ ನರಸಿಂಹುಗಾರಿ ಟಿ.ಎನ್.ರೆಡ್ಡಿ ಅವರು ಸೋಮವಾರ ಸಂಜೆ ಕಾಸರಗೋಡು ಜಿಲ್ಲೆಗೆ ಆಗಮಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ಜತೆ ಮತಗಟ್ಟೆಗಳಿಗೆ ಅವರು ಭೇಟಿ ನೀಡಿದರು.
ಅವರು ತಿರುವನಂತಪುರಂ ಕೋ-ಆಪರೇಟಿವ್ ಸೊಸೈಟಿಸ್ ರೆಜಿಸ್ತ್ರಾರ್ ಆಗಿದ್ದಾರೆ. ಕಾಸರಗೋಡು ಸಿ.ಪಿ.ಸಿ.ಆರ್.ಐ. ಅತಿಥಿಮಂದಿರದಲ್ಲಿ ಚುನಾವಣೆ ಸಂಬಂಧ ಅವರ ಕಚೇರಿ ಚಟುವಟಿಕೆ ನಡೆಸಲಿದೆ.
ಸಮಸ್ಯಾತ್ಮಕ ಬೂತ್ ಗಳಿಗೆ ಭೇಟಿ
ಜಿಲ್ಲೆಯ ಕ್ರಿಟಿಕಲ್, ವಲ್ನರಬಲ್ ವಿಭಾಗಗಳಿಗೆ ಸೇರಿರುವ ಸಮಸ್ಯಾತ್ಮಕ ಮತಗಟ್ಟೆಗಳಿಗೆ ಅವರು ಭೇಟಿ ನೀಡಿದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ನ ಮಂಗಲ್ಪಾಡಿ ಗ್ರಾಮ ಪಂಚಾಯತ್ ನ ಮುಟ್ಟಂ ಕುನ್ನಿಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಿಂದ ಬೂತ್ ಗಳ ತಪಾಸಣೆಯನ್ನು ಅವರು ಆರಂಭಿಸಿದರು. ಮಂಗಲ್ಪಾಡಿ ಸರಕಾರಿ ಎಚ್.ಡಬ್ಲ್ಯೂ.ಎಲ್.ಪಿ.ಶಾಲೆ, ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುರ್ಚಿಪಳ್ಳ ಸರಕಾರಿ ಹಿಂದೂಸ್ತಾನಿ ಹಿರಿಯ ಪ್ರಾಥಮಿಕ ಸಾಲೆ, ಸಹಿತ ಮತಗಟ್ಟೆಗಳಿಗೆ ಅವರು ಭೇಟಿ ನೀಡಿದರು. ಕೆಲವು ಮತಗಟ್ಟೆಗಳಲ್ಲಿ ವಿಶೇಷಚೇತನರಿಗಿರುವ ರಾಂಪ್ ಸಹಿತ ಸಛೌಲಭ್ಯಗಳ ಕೊರತೆಯನ್ನು ತಕ್ಷಣ ನೀಗಿಸುವಂತೆ ತಂಡ ಆದೇಶ ನೀಡಿದೆ. ಕೋವಿಡ್ ಸುರಕ್ಷಾ ಅಂಗವಾಗಿ ಮುಂಜಾಗರೂಕ ಕ್ರಮಗಳನ್ನು ಚುರುಕುಗೊಳಿಸುವಂತೆ ಅವರು ಆದೇಶ ನೀಡಿದ್ದಾರೆ.





