ಕಾಸರಗೋಡು: ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಬಳಿಕ ವಿವಿಧ ನಗರ ಸಭೆಗಳ ಆಡಳಿತ ಸಮಿತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಿನ್ನೆ ನಡೆಯಿತು.
ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವಿ.ಎಂ.ಮುನೀರ್ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷೆಯಾಗಿ ಷಂಸೀನಾ ಫಿರೋಝ್ ಆಯ್ಕೆಗೊಂಡಿದ್ದಾರೆ.
ನಗರಸಭೆ ಮಂಡಳಿಯ 38 ಸದಸ್ಯರಲ್ಲಿ ಮೂವರು ಮತದಾನದಿಂದ ಹೊರತುಗೊಂಡಿದ್ದರು. ವಿ.ಎಂ.ಮುನೀರ್ ಅವರು ಖಾಸೀಲೇನ್ ವಾರ್ಡ್ ನ ಸದಸ್ಯರಾಗಿ ಗೆದ್ದವರು. ಅವರಿಗೆ 21 ಮತಗಳು ಲಭಿಸಿವೆ. ಬಿಜೆಪಿತ ಸವಿತಾ ಅವರಿಗೆ 14 ಮತಗಳು ಬಂದಿದ್ದುವು. ಚುನಾವಣೆ ಅಧಿಕಾರಿ ಕೆ.ಸಜಿತ್ ಕುಮಾರ್ ಸತ್ಯಪ್ರತಿಜ್ಞೆ ಹೇಳಿಕೊಟ್ಟರು.
ಉಪಾಧ್ಯಕ್ಷೆಯಾಗಿ ಅಡ್ಕತ್ತಬೈಲು ಮೂರನೇ ವಾರ್ಡ್ ನಿಂದ ಸದಸ್ಯರಾದ ಷಂಸೀನಾ ಫೀರೋಝ್ ಆಯ್ಕೆಗೊಂಡಿದ್ದಾರೆ. ಅವೆರಿಗೆ 21 ಮತಗಳು ಲಭಿಸಿವೆ. ಬಿಜೆಪಿಯ ಶ್ರೀಲತಾ ಅವರಿಗೆ 14 ಮತಗಳು ಲಭಿಸಿವೆ. ಮೂವರು ಸದಸ್ಯರು ಮತದಾನದಿಂದ ಹೊರತುಗೊಂಡಿದ್ದರು. ನಗರಸಭೆ ಅಧ್ಯಕ್ಷ ಇವರಿಗೆ ಸತ್ಯ ಪ್ರತಿಜ್ಞೆ ತಿಳಿಸಿಕೊಟ್ಟರು.
ನೀಲೇಶ್ವರ ನಗರಸಭೆ : ಅಧ್ಯಕ್ಷೆ ಟಿ.ವಿ. ಶಾಂತಾ: ಉಪಾಧ್ಯಕ್ಷ ಪಿ,.ಪಿ.ಮುಹಮ್ಮದ್ ರಾಫಿ
ನೀಲೇಶ್ವರ ನಗರಸಭೆಯ ಅಧ್ಯಕ್ಷೆಯಾಗಿ ಟಿ.ವಿ.ಶಾಂತಾ ಅವರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪಿ.ಪಿ.ಮುಹಮ್ಮದ್ ರಾಫಿ ನೇಮಕಗೊಂಡಿದ್ದಾರೆ.
ನಗರಸಭೆ ಸದಸ್ಯರಲ್ಲಿ ಇಬ್ಬರು ಮತದಾನದಿಂದ ಹೊರತುಗೊಂಡಿದ್ದರು. ಡಿ.ವಿ.ಶಾಂತಾ ಅವರಿಗೆ 21 ಮತಗಳು, ಪ್ರತಿಸ್ಪರ್ಧಿ ಪಿ.ಬಿಂದು ಅವರಿಗೆ 9 ಮತಗಳು ಲಭಿಸಿವೆ. ನಗರಸಭೆಗೆ ಮುನ್ನ ನೀಲೇಶ್ವರ ಪಂಚಾಯತ್ ಆಗಿದ್ದ ವೇಳೆ ಟಿ.ವಿ.ಶಾಂತಾ ಅವರು ಅಧ್ಯಕ್ಷೆಯಾಗಿದ್ದವರು. ಈಗ 13ನೇ ಡಿವಿಝನ್ ಕುಂuಟಿಜeಜಿiಟಿeಜಪುಳಕ್ಕಲ್ ನಲ್ಲಿ ಗೆದ್ದವರು. ಚುನಾವಣೆ ಅಧಿಕಾರಿ ಸೂಸನ್ ಬೆಂಜಮಿನ್ ಅವರು ಸತ್ಯಪ್ರತಿಜ್ಞೆ ತಿಳಿಸಿಕೊಟ್ಟರು.
5ನೇ ಡಿವಿಝನ್ ಚೆರಪ್ರಂ ನಲ್ಲಿ ಸದಸ್ಯರಾಗಿರುವ ಪಿ.ಪಿ.ಮುಹಮ್ಮದ್ ರಾಫಿ ಅವರು ಕಳೆದ ಆಡಳಿತೆ ಸಮಿತಿಯಲ್ಲಿ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದರು.
ಕಾಞಂಗಾಡ್ ನಗರಸಭೆ : ಕೆ.ವಿ.ಸುಜಾತಾ ಅಧ್ಯಕ್ಷೆ: ಬಿಲ್ ಟೆಕ್ ಅಬ್ದುಲ್ಲ ಉಪಾಧ್ಯಕ್ಷ
ಕಾಞಂಗಾಡ್ ನಗರಸಭೆಯ ಅಧ್ಯಕ್ಷೆಯಾಗಿ ಕೆ.ವಿ.ಸುಜಾತಾ ನೆಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಬಿಲ್ ಟೆಕ್ ಅಬ್ದುಲ್ಲ ಆಯ್ಕೆಗೊಂಡಿದ್ದಾರೆ.
4ನೇ ವಾರ್ಡ್ ಅತಿಯಾಂಬೂರು ನಲ್ಲಿ ಸದಸ್ಯೆಯಾಗಿರುವ ಕೆ.ವಿ.ಸುಜಾತಾ ಅವರಿಗೆ 26 ಮತಗಳು ಲಭಿಸಿದ್ದುವು. ಚುನಾವಣೆ ಅಧಿಕಾರಿ ಕೆ.ಪ್ರದೀಪನ್ ಸತ್ಯಪ್ರತಿಜ್ಞೆ ಹೇಳಿಕೊಟ್ಟರು. 31ನೇ ವಾರ್ಡ್ ಸದಸ್ಯರಾಗಿರುವ ಬಿಲ್ ಟೆಕ್ ಅಬ್ದುಲ್ಲ ಅವರಿಗೆ 24 ಮತಗಳು ಲಭಿಸಿದ್ದುವು.





