ಕಾಸರಗೋಡು: ಇತ್ತೀಚಿನ ದಿನಗಳಲ್ಲಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸ್ತ್ರೀತ್ವಕ್ಕೆ ಅಪಾಮನ ನಡೆಸುವ ಕ್ರಮ ಅತ್ಯಧಶಿಕಗೊಳ್ಳುತ್ತಿದೆ. ಇದನ್ನು ಯಾವ ಕಾರಣಕ್ಕೂ ಸಹಿಸಲಾಗದು ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಷಾಹಿದಾ ಕಮಾಲ್ ಅವರು ಅಭಿಪ್ರಾಯಪಟ್ಟರು.
ಕಾಸರಗೊಡು ಜಿಲ್ಲಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಆಯೋಗದ ಅದಾಲತ್ ನಂತರ ಅವರು ಮಾತನಾಡಿದರು.
ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣ ಮತ್ತು ಸೈಬರ್ ಕಾನೂನು ಪ್ರಬಲೀಕರಣಗೊಳಿಸಬೇಕಾದುದು ಈ ಕಾಲದ ಅನಿವಾರ್ಯತೆಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನು ಸಮಾಜದ ಮುಂದೆ ಕೀಳುಮಟ್ಟದಲ್ಲಿ ಚಿತ್ರಿಸುವ ಮೂಲಕ ಅವರನ್ನು ಮಾನಸಿಕವಾಗಿಯೂ ಬೇಟೆಯಾಡುವ ಮನೋಭಾವ ಇಂಥಾ ಕೃತ್ಯಗಳಿಗೆ ಕಾರಣ ಎಂದವರು ತಿಳಿಸಿದರು.
ಸಿಸ್ಟರ್ ಅಭಯಾ ಕೇಸಿನ ತೀರ್ಪು ಸ್ವಾಗತಾರ್ಹ , ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ನಡೆಸಲಾದ ಎದಿರೇಟು ಇದಾಗಿದೆ. ಅಪರಧಿಗಳು ಇಂದಲ್ಲ, ನಾಳೆ ಶಿಕ್ಷೆಗೊಳಗಾಗುತ್ತಾರೆ ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ ಎಂದವರು ನುಡಿದರು.
37 ದೂರುಗಳ ಪರಿಶೀಲನೆ: 12 ಕೇಸುಗಳಲ್ಲಿ ತೀರ್ಪು:
ಸೋಮವಾರ ನಡೆದ ಮಹಿಳಾ ಆಯೋಗದ ಅದಾಲತ್ ನಲ್ಲಿ 37 ದೂರುಗಳ ಪರಿಶೀಲನೆ ನಡೆಸಲಾಗಿದ್ದು, 12 ದೂರುಗಳಿಗೆ ತೀರ್ಪು ನೀಡಲಾಗಿದೆ. 4 ದೂರುಗಳಲಲಿ ವಿವಿಧ ಇಲಾಖೆಗಳ ವರದಿ ಆಗ್ರಹಿಸಲಾಗಿದ್ದು, ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು.
ಲಾಕ್ ಡೌನ್ ಗಿಂತ ಹಿಂದೆ ಲಭಿಸಿದ್ದ ದೂರಗಳೇ ಪರಿಶೀಲನೆಯಲ್ಲಿ ಅಧಿಕವಾಗಿದ್ದುವು. ಲಾಕ್ ಡೌನ್ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪರಿಶೀಲನೆಗೆ ಅರ್ಹವಾದ ಯಾವುದೇ ದೂರುಗಳು ಲಭಿಸಿಲ್ಲ ಎಂದು ಮಹಿಳಾ ಆಯೋಗದ ಸದಸ್ಯರಾದ ಇ.ಎಂ.ರಾಧಾ, ಷಾಹಿಮಾ ಕಮಾಲ್ ತಿಳಿಸಿದರು. ಲಾಕ್ ಡೌನ್ ಅವಧಿಯಲ್ಲಿ ಲಭಿಸಿದ್ದ ಕೆಲವು ದೂರುಗಳನ್ನು ಆಯಾ ಪೆÇಲೀಸ್ ಠಾಣೆಗಳ ಹೌಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿರುವುದಾಗಿ ಮಹಿಳಾ ಆಯೋಗ ತಿಳಿಸಿದೆ.
ಅದಾಲತ್ ನಲ್ಲಿ ಪರಿಶೀಲಿಸಲಾದ ದೂರುಗಳಲ್ಲಿ ಬಹುತೇಕ ಕುಟುಂಬ ಕಲಹ, ನೌಕರಿ ಸಂಸ್ಥೇಗಳಲ್ಲಿನ ಸಮಸ್ಯೆ, ಆರ್ಥಿಕ ಸಮಸ್ಯೆ ಇತ್ಯಾದಿಗಳಿಗೆ ಸಂಬಂಧಿಸಿದ್ದುವು. ಪತ್ರಿಕೆಯೊಂದರಲ್ಲಿ ಮಹಿಳೆಯೊಬ್ಬರು ವಿರುದ್ಧ ಅಪಮಾನಕಾರಿ ಸುದ್ದಿ ಪ್ರಕಟಗೊಂಡಿರುವ ಬಗ್ಗೆ ದೂರು ಲಭಿಸಿದ್ದು, ಮಹಿಳೆಯರ ವಿರುದ್ಧ ಇಂಥಾ ಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟ ಪಡಿಸಿದೆ. ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆ ಒಬ್ಬರ ವಿರುದ್ಧ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನಡೆಸಿದ್ದ ಸೈಬರ್ ದೌರ್ಜನ್ಯ ಸಂಬಂಧ ಲಭಿಸಿರುವ ದೂರನ್ನು ಮುಂದಿನ ಅದಾಲತ್ ನಲ್ಲಿ ಪರಿಸೀಲಿಸಲಾಗುವುದು ಎಂದು ತಿಳಿಸಿದರು.
ಅದಾಲತ್ ಸದಸ್ಯೆಯರಾದ ಷಾಹಿದಾ ಕಮಾಲ್, , ಇ.ಎಂ.ರಾಧಾ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯಿತು. ಕಾಸರಗೋಡು ಮಹಿಳಾ ಘಟಕದ ಎಸ್.ಐ. ಸಿ.ಭಾನುಮತಿ, ನ್ಯಾಯವಾದಿಗಳಾದ ಎ.ಪಿ.ಉಷಾ, ರೇಣುಕಾದೇವಿ, ಸೀನಿಯರ್ ಸಿ.ಪಿ.ಒ.ಪಿ.ಶೀಲಾ, ಸಿ.ಪಿ.ಒ. ಜಯಶ್ರೀ, ಸದಸ್ಯೆ ರಮ್ಯಾ ಚಟುವಟಿಕೆ ನಡೆಸಿದರು. ಸೆ.29ರಂದೂ ಅದಾಲತ್ ನಡೆಯಲಿದೆ.





