ಮಂಜೇಶ್ವರ: ಮಂಜೇಶ್ವರದ ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ 14 ನೇ ನೆರವಿನ ಯೋಜನೆ ಮೊತ್ತವನ್ನು
ಪೈವಳಿಕೆ ಗ್ರಾಮ ಪಂಚಾಯತಿಯ ಚಿಪ್ಪಾರು ಅಮ್ಮೆರಿ ನಿವಾಸಿ ದಿ. ಮೋನಪ್ಪ ಪೂಜಾರಿ - ದಿ. ಯಮುನಾ ದಂಪತಿಯ ಮಕ್ಕಳಾದ ಕು. ಶ್ವೇತಾ ಹಾಗೂ ಕು. ಶ್ರೀಲತಾ ರವರಿಗೆ ಮಂಗಳವಾರ ಅಪರಾಹ್ನ ಸ್ವ - ಗೃಹದಲ್ಲಿ ನೀಡಲಾಯಿತು.
ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ ಸದಸ್ಯೆ ಶೋಭಾ ಟೀಚರ್ ಬೆಜ್ಜ ಮೊತ್ತವನ್ನು ಸಹೋದರಿಯರಿಗೆ ವಿತರಿಸಿದರು. ಈ ವೇಳೆ ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ ಸದಸ್ಯರೂ, ಪೈವಳಿಕೆ ಬೋಳಂಗಳ ಅಣ್ಣ - ತಮ್ಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಜಿತ್ ಎಂ.ಸಿ. ಲಾಲ್‍ಭಾಗ್, ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ವರ್ಕಾಡಿ, ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಸದಸ್ಯರಾದ ಜಯ ಪ್ರಶಾಂತ್ ಪಾಲೆಂಗ್ರಿ, ಸುನಿಲ್ ಕುಮಾರ್ ಮುಂಡಿತಡ್ಕ, ಅನಿಲ್ ಕುಮಾರ್ ಕೊಡ್ಲಮೊಗರು, ದೇವದಾಸ್ ಬೆಜ್ಜ ಮೊದಲಾದವರು ಭೇಟಿ ನೀಡಿ ಸಹಾಯ ಹಸ್ತ ವಿತರಿಸಿದ ನಿಯೋಗದಲ್ಲಿದ್ದರು.
ಸಹಾಯ ಹಸ್ತ ವಿತರಿಸಿದ ಕುಟುಂಬವು ಕಡು ಬಡ ಕುಟುಂಬವಾಗಿದ್ದು, ಸಹೋದರಿಯರ ಹೆತ್ತವರಾದ ಮೋನಪ್ಪ ಪೂಜಾರಿ ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿ ಯಮುನಾ ಮನೆಯಲ್ಲಿ ಬೀಡಿ ಕಟ್ಟಿ ಮಕ್ಕಳಿಬ್ಬರನ್ನು ಸಾಕಿ ಸಲಹುತ್ತಿದ್ದರು. ಈ ಮಧ್ಯೆ ಕಳೆದ 6 ವರುಷದ ಹಿಂದೆ ಮನೆ ಬಳಿ ಮರ ಕಡಿಯುವ ವೇಳೆ ವಿದ್ಯುತ್ ಸ್ಪರ್ಶದಿಂದ ಗಂಭೀರ ಗಾಯಗೊಂಡು ನಿಧನರಾದರು. ಈ ವೇಳೆ ಮಕ್ಕಳ ವಿದ್ಯಾಭ್ಯಾಸ, ದಿನ ನಿತ್ಯದ ಖರ್ಚು ವೆಚ್ಚಗಳನ್ನು ಹೊಣೆ ಪತ್ನಿ ಯುಮುನರ ಹೆಗಲಿಗೇರಿತು. ಸಾಧನೆಯಿಂದ ವಿದ್ಯೆ ಕಲಿತ ಇಬ್ಬರು ಮಕ್ಕಳು ತಾಯಿಯ ಹಾರೈಕೆಯಿಂದ ಎಸ್.ಎಸ್.ಎಲ್. ಸಿ ತೇರ್ಗಡೆಯಾದರು. ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಮನೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಾಯಿ ಜೊತೆ ಬೀಡಿ ಕಟ್ಟಿ ಜೀವನ ಸಾಗಿಸಲು ನಿರ್ಧರಿಸಿದರು. ಇತ್ತೀಚೆಗೆ ಕರೊನಾ ಸಮಯವಾದ ಏಪ್ರಿಲ್ ತಿಂಗಳಿನಲ್ಲಿ ಮನೆಯಲ್ಲಿ ಕೆಲಸ ನಿರತರಾಗಿದ್ದ ಯಮುನಾರಿಗೆ ಹೃದಯಾಘಾತವುಂಟಾಗಿ ಸಾವು ಸಂಭವಿಸಿತು. ಈ ವೇಳೆ ಹೃದಯವಂತರು ಅಂತ್ಯಕ್ರಿಯೆಯನ್ನ ನೆರವೇರಿಸಿದರು. ಇದೀಗ ಈ ಇಬ್ಬರು ಹೆಣ್ಮಕ್ಕಳು ಮಾತ್ರ ಈ ಮನೆಯಲ್ಲಿ ವಾಸಿಸುತ್ತಿದ್ದು, ತಂದೆ - ತಾಯಿ ಇಲ್ಲದೇ ತಬ್ಬಲಿಗರಾಗಿದ್ದು, ತಂದೆ - ತಾಯಿಯ ನೆನೆಯುತ್ತಾ ಕಣ್ಣೀರು ಸುರಿಸುತ್ತಿದ್ದಾರೆ. ಇವರಿಬ್ಬರಿಗೆ ಇದೀಗ ಬೀಡಿ ಕಟ್ಟಿ ಸಿಗುವ ಆದಾಯವೇ ಜೀವನದ ಆಧಾರ ಸ್ತ0ಭ. ಇವರ ಪರಿಸ್ಥಿತಿಯನ್ನರಿತು ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ ನೆರವನ್ನು ನೀಡಿದೆ.





