ಕಾಸರಗೋಡು: ಕೇರಳ ಸ್ಟೇಟ್ ಕೋ ಆಪರೇಟಿವ್ ಎಂಪ್ಲಾಯೀಸ್ ಸಂಘದ ಸದಸ್ಯತನ ಅಭಿಯಾನವನ್ನು ಸಂಘದ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಎ. ಅವರು ಮುಳ್ಳೇರಿಯ ಪಯಸ್ವಿನಿ ಅಗ್ರಿಕಲ್ಚರಿಸ್ಟ್ ಇಂಪ್ರೂಮೆಂಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿ ಶ್ರೀರಾಮ ಕೆದಿಲ್ಲಾಯ ಅವರಿಗೆ ನೀಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎಂ.ಕೆ.ರಾಘವನ್, ಜತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪ್ಪಾಡಿ, ಸದಸ್ಯರಾಜೇಶ್ ಶೆಟ್ಟಿ ಬಲೆಕ್ಕಳ ಮುಂತಾದವರು ಉಪಸ್ಥಿತರಿದ್ದರು.





