ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ನಿರ್ಮಿಸಲಾಗಿರುವ 46 ಬೃಹತ್ ಯೋಜನೆಗಳು ಜನವರಿ 30 ರಿಂದ ಉದ್ಘಾಟನೆಗೊಳ್ಳಲಿದೆ. ಇದರಲ್ಲಿ ನದಿ ಪುನರುಜ್ಜೀವನ ಯೋಜನೆಗಳು ಮತ್ತು ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಪರಿಹಾರ ಒದಗಿಸಲು ರಬ್ಬರ್ ಚೆಕ್ ಡ್ಯಾಂ ನಿರ್ಮಾಣವಾಗಿದೆ.
14 ಯೋಜನೆಗಳನ್ನು ಉದ್ಘಾಟಿಸಲಾಗುವುದು. 32 ಯೋಜನೆಗಳ ನಿರ್ಮಾಣ ಪ್ರಾರಂಭವಾಗಲಿದೆ. ಒಟ್ಟು 113.3 ಕೋಟಿ ಮೌಲ್ಯದ ಜಲ ಸಂರಕ್ಷಣಾ ಯೋಜನೆಗಳು ಫಲಪ್ರದವಾಗುತ್ತಿವೆ. ದೇಶದಲ್ಲಿ ಅಂತರ್ಜಲ ಕ್ಷೀಣಿಸುವಿಕೆಗೆ ಕೆಂಪು ಪಟ್ಟಿಯಲ್ಲಿರುವ ಕಾಸರಗೋಡು, ಮಂಜೇಶ್ವರ, ಕಾರಡ್ಕ ಬ್ಲಾಕ್ ಗಳಲ್ಲಿನ ಅಂತರ್ಜಲ ಮಟ್ಟವನ್ನು ಎರಡು ವರ್ಷಗಳಲ್ಲಿ ಹೆಚ್ಚಿಸಲು ಈ ಯೋಜನೆಗೆ ಸಾಧ್ಯವಾಗಿದೆ. ಬೇಸಿಗೆಯಲ್ಲಿ, ಸ್ಥಳೀಯ ಸಂಸ್ಥೆಗಳು ಟ್ಯಾಂಕರ್ ಲಾರಿಗಳಿಂದ ಕೋಟ್ಯಂತರ ರೂ. ಮೌಲ್ಯದ ಕುಡಿಯುವ ನೀರನ್ನು ಪೂರೈಸುವ ಪರಿಸ್ಥಿತಿಯೂ ಬದಲಾಗಲಿದೆ. ದಕ್ಷಿಣ ಭಾರತದ ಬಿದಿರಿನ ರಾಜಧಾನಿಯಾಗಿ ಕಾಸರಗೋಡನ್ನು ಮಾರ್ಪಡಿಸುವ ಉದ್ದೇಶದಿಂದ, ಮೂರು ಲಕ್ಷ ಬಿದಿರಿನ ಸಸಿಗಳನ್ನು ನೆಡಲಾಗುತ್ತದೆ ಮತ್ತು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ನಿರ್ವಹಿಸಲಾಗುತ್ತಿದೆ.
11.39 ಕೋಟಿ ಮೌಲ್ಯದ 14 ಜಲ ಸಂರಕ್ಷಣಾ ಯೋಜನೆಗಳು ಉದ್ಘಾಟನೆಗೆ ಸಿದ್ಧ:
60 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಕಾರಡ್ಕ- ಮುಚ್ಚಿಲೋಟು ವಿಸಿಬಿ, 75 ಲಕ್ಷ ರೂ.ಗಳ ವೆಚ್ಚದಲ್ಲಿ ವರ್ಕಾಡಿ ಪೊಯ್ಯೆಯ ನೆಲ್ಕಳ ವಿಸಿಬಿ, 55 ಲಕ್ಷ ರೂ ವೆಚ್ಚದಲ್ಲಿ ಬೆಳ್ಳೂರು ಮಟ್ಟಿಕೇರಿ ಪೆರ್ವತ್ತೋಡಿ ವಿಸಿಬಿ ಮತ್ತು 99.90 ಲಕ್ಷ ರೂ.ಗಳ ವೆಚ್ಚದಲ್ಲಿ ಮಂಜೇಶ್ವರ ಪಾಪಿಲಾ-ಮಚ್ಚಂಪಾಡಿ ವಿಸಿಬಿ ನಿರ್ಮಿಸಲಾಗಿದೆ. ಮುಳಿಯಾರ್ ಕಲ್ಲುಂಕಂಡದ ವಿಸಿಬಿ 1 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ, ಪಾಣತ್ತೂರು ನದಿಗೆ ಅಡ್ಡಲಾಗಿರುವ ಕಳ್ಳಾರ್ ಪೂಕಾಯಂ ಚೆಕ್ ಡ್ಯಾಮ್, 80 ಲಕ್ಷ ರೂ.ವ್ಯಯಿಸಿ ನಿರ್ಮಿಸಿದ ಪೈವಳಿಕೆ ಪಂಚಾಯತಿಯ ನೂತಿಲ-ಪಯ್ಯರಕೋಡಿ ವಿಸಿಬಿ, 99 ಲಕ್ಷ ರೂ.ವ್ಯಯಿಸಿ ನಿರ್ಮಿಸಿದ ಸುವರ್ಣಗಿರಿ ತೋಡು-ಮಂಗಲ್ಪಾಡಿ ಬಯಲು ವಿಸಿಬಿ, 99.90 ಲಕ್ಷ ರೂ.ವ್ಯಯಿಸಿ ನಿರ್ಮಿಸಿದ ಉದುಮ ಕಣ್ಣಂಕುಳಂ ವಿಸಿಬಿ, 89 ಲಕ್ಷ ರೂ.ವ್ಯಯಿಸಿ ನಿರ್ಮಿಸಿದ ಚಿತ್ತಾರಿಕ್ಕಲ್-ಕರಿಂಪಿಂಚಿರಾ ವಿಸಿಬಿ, 90 ಲಕ್ಷ ರೂ.ವ್ಯಯಿಸಿ ನಿರ್ಮಿಧಸಿದ ಮಡಿಕೈ- ಪೂಕಂಕುತಿರ್ ವಿಸಿಬಿ, ಎರಡು ಕೋಟಿ ರೂ.ವ್ಯಯಿಸಿ ನಿರ್ಮಿಸಿದ ಕೋಕ್ಕೋಟ್ ವಿಸಿಬಿ, 51 ಲಕ್ಷ ರೂ.ವ್ಯಯಿಸಿ ನಿರ್ಮಿಸಿದ ಕುತ್ತಿಕ್ಕೋಲ್-ಉದ್ದಂತ್ತಡ್ಕ ವಿಸಿಬಿ, 50 ಲಕ್ಷ ರೂ.ವ್ಯಯಿಸಿ ನಿರ್ಮಿಸಿದ ತಿಮಿರಿ-ಪಾಲತ್ತರ ವಿಸಿಬಿ ಎಂಬವುಗಳು ಉದ್ಘಾಟನೆಗೆ ಸಜ್ಜಾಗಿದೆ. ಜ.30 ರಂದು ಈ ಯೋಜನೆಗಳು ಲೋಕಾರ್ಪಣೆಗೊಳಿಸಲಾಗುವುದೆಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




