ಕೊಚ್ಚಿ: ಮಲಬಾರ್ ಗಲಭೆಯ ಹಿನ್ನೆಲೆಯಲ್ಲಿ ಅಲಿ ಅಕ್ಬರ್ ಅವರ '1921 ನದಿಯಿಂದ ನದಿಗೆ'(ರಿವರ್ ಟು ರಿವರ್) ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು 20 ರಂದು ಪ್ರಾರಂಭವಾಗಲಿದೆ. ಚಿತ್ರದ ಶೂಟಿಂಗ್ ಮೂರು ವೇಳಾಪಟ್ಟಿಗಳಲ್ಲಿ ಪೂರ್ಣಗೊಳ್ಳಲಿದ್ದು, ಮೊದಲ ವೇಳಾಪಟ್ಟಿಯ ಸ್ಥಳ ವಯನಾಡ ಎಂದು ಅಲಿ ಅಕ್ಬರ್ ಹೇಳಿದ್ದಾರೆ.
ಸ್ವಿಚ್ ಆನ್ ಮತ್ತು ಹಾಡು ಬಿಡುಗಡೆ ಫೆಬ್ರವರಿ 2 ರಂದು ಕೋಝಿಕೋಡ್‍ನಲ್ಲಿ ನಡೆಯಲಿದೆ. ನಟರನ್ನು ಸಂಪರ್ಕಿಸಿದಾಗ, ಸಂತಸದಿಂದ ಒಪ್ಪಿಕೊಂಡಿರುವರು. ತಾರಾಗಣದಲ್ಲಿ ಮಲಯಾಳಂನ ಖ್ಯಾತ ನಾಮರು ಒಳಗೊಂಡಿದ್ದಾರೆ. ಮುಂಗಡ ಹಣವನ್ನು ಸಹ ಪಾವತಿಸಲಾಗಿದೆ ಎಂದು ಅಕ್ಬರ್ ಅವರು ಫೇಸ್ಬುಕ್ ಲೈವ್ನಲ್ಲಿ ಹೇಳಿರುವರು.
ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಚಿತ್ರದ ಬ್ಗೆ ಇವಿಷ್ಟು ಮಾಹಿತಿ ನೀಡಿರುವ ಅಕ್ಬರ್ ಅವರು ಚಿತ್ರೀಕರಣಕ್ಕೆ ತೊಡಕುಗಳಾಗದಿರಲಿ ಎಂದು, ಕಾಮೆಂಟ್ ಮಾಡುವುದನ್ನು ತಡೆಯಲು ಹೆಸರನ್ನು ಇನ್ನೂ ಘೋಷಿಸಲಾಗಿಲ್ಲ. ಮೊದಲ ವೇಳಾಪಟ್ಟಿಯ ಖರ್ಚಿಗಿರುವ ಹಣ ತನ್ನಲ್ಲಿದೆ ಎಂದೂ ಬರೆದಿರುವರು. ಕ್ರೌಡ್ ಫಂಡಿಂಗ್ ಮೂಲಕ ಈವರೆಗೆ ಪಡೆದ ಮೊತ್ತವು 1 ಕೋಟಿ ರೂ. ಶೂಟಿಂಗ್‍ಗೆ ಬೇಕಾದ ಎಲ್ಲಾ ಉಪಕರಣಗಳು ಸಿದ್ಧವಾಗಿವೆ ಎಂದು ಹೇಳಿದರು.
ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮುಂದುವರಿಯಲು ತನಗೆ ಸಾಧ್ಯವಿದೆ. ಚಿತ್ರೀಕರಣ ಪ್ರಾರಂಭವಾಗುವುದೇ ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದರು. 151 ದೃಶ್ಯಗಳೊಂದಿಗೆ ದೊಡ್ಡ ಚಲನಚಿತ್ರವನ್ನು ಸಿದ್ಧಪಡಿಸುತ್ತಿದ್ದೇನೆ. ಪ್ರತಿ ತಿಂಗಳು ಸರ್ಕಾರಕ್ಕೆ ನಿಖರವಾದ ಅಂಕಿಅಂಶಗಳನ್ನು ನೀಡುವೆನು ಎಂದು ಅಕ್ಬರ್ ತಿಳಿಸಿದ್ದಾರೆ.
ಹಿಂದೂ ವಿರೋಧಿ ಕಥಾನಕದ ಮೇಲೆ ಚಲನಚಿತ್ರ ನಿರ್ಮಾಣವನ್ನು ಅಡ್ಡಿಪಡಿಸಲು ಹಲವಾರು ಪ್ರಯತ್ನಗಳು ನಡೆದಿವೆ. ಆದರೆ ಇಷ್ಟು ದೂರ ಅವೆಲ್ಲವನ್ನು ಮೆಟ್ಟಿನಿಲ್ಲಲು ಸಾಧ್ಯವಾಯಿತು. "ಇನ್ನು ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಅಕ್ಬರ್ ಹೇಳಿಕೊಂಡಿರುವರು.


