HEALTH TIPS

ಕೋವಿಡ್-19 ಸೋಂಕಿಗೆ ಲಸಿಕೆ: ಇಂದಿನಿಂದ ಡ್ರೈ ರನ್ ಪ್ರಾಯೋಗಿಕ ಕಾರ್ಯಕ್ರಮ

      ನವದೆಹಲಿ: ಕೋವಿಡ್ -19 ಸೋಂಕಿಗೆ ಲಸಿಕೆ ನೀಡುವ ಪ್ರಾಯೋಗಿಕ ಕಾರ್ಯಕ್ರಮ - ಡ್ರೈ ರನ್ ಶನಿವಾರದಿಂದ ದೇಶಾದ್ಯಂತ ಆರಂಭವಾಗಲಿದ್ದು, ಪೂರ್ವ ಸಿದ್ಧತೆ ನಡೆಯುವ ನಡೆಯುವ ಸ್ಥಳಗಳಲ್ಲಿ ಸೂಕ್ತ ಸಿದ್ಧತೆ ಕೈಗೊಳ್ಳಲಾಗಿದೆ.

      ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಿನ್ನೆ ಈ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು. ಲಸಿಕೆ ನೀಡುವ ಕಾರ್ಯಕ್ರಮ ಸುಗಮವಾಗಿ ನಡೆಯಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಚಿವಾಲಯದ ಉನ್ನತ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದಿನಿಂದ ಡ್ರೈ ರನ್ ನಡೆಯುತ್ತಿದ್ದು, ಪ್ರತಿಯೊಂದು ರಾಜ್ಯದಲ್ಲಿ ಕನಿಷ್ಠ 3 ಕಡೆಗಳಲ್ಲಿ ಪ್ರಾಯೋಗಿಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದೆ. ಡ್ರೈ-ರನ್ ನಡೆಸುವ ತಳಮಟ್ಟದ ತಂಡಗಳಿಂದ ಸಾಧ್ಯವಿರುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ದೂರವಾಣಿ ಕಾರ್ಯನಿರ್ವಾಹಕರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ, ಕಾರ್ಯಕ್ರಮ ಹಮ್ಮಿಕೊಂಡಿರುವ ಸ್ಥಳಗಳ ಭೌತಿಕ ಪರಿಶೀಲನೆಗಾಗಿ ಬ್ಲಾಕ್ ಮಟ್ಟದ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     ಡ್ರೈ ರನ್ ನಲ್ಲಿ ಲಸಿಕೆ ಪಡೆಯುವವರ ಮಾಹಿತಿಯನ್ನು ಈಗಾಗಲೇ ಕೋವಿನ್ ಅರ್ಜಿಯಲ್ಲಿ ದಾಖಲಿಸಲಾಗಿದೆ.  ಎಲ್ಲ  ಜನಸಮೂಹ ಪಾಲ್ಗೊಳ್ಳುವ ಕಾರ್ಯಕ್ರಮ ಚುನಾವಣೆಯಂತೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಬೇಕಿದೆ. ಪರಸ್ಪರ ತಿಳುವಳಿಕೆ ಮೂಡಿಸುವಲ್ಲಿ ಸೂಕ್ತ ಸಮನ್ವಯ ಅಗತ್ಯವಾಗಿದೆ. ಇದರಿಂದ ಮುಂದಿನ ದಿನಗಳ ಲಸಿಕೆ ನೀಡುವ ಅಭಿಯಾನ ಯಾವುದೇ ಅಡ್ಡಿಗಳಿಲ್ಲದೆ ಮುಂದುವರೆಯುತ್ತದೆ. ಲಸಿಕೆ ನೀಡುವ ಸ್ಥಳಗಳು, ಶೈತ್ಯ ಸರಪಳಿ ಕೇಂದ್ರಗಳು, ಲಸಿಕೆ ಸಾಗಣೆಯ ಸಮಯದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಅಗತ್ಯವಾಗಿದೆ ಎಂದು ಆರೋಗ್ಯ ಸಚಿವ ಡಾ ಹರ್ಷವರ್ಧನ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries