HEALTH TIPS

ಆರ್ಥಿಕ ಸಮೀಕ್ಷೆ: ಹಣಕಾಸು ವರ್ಷ 2021-22ರಲ್ಲಿ ಶೇ.11 ಬೆಳವಣಿಗೆ ನಿರೀಕ್ಷೆ

      ನವದೆಹಲಿ: ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.7 ರಷ್ಟು ಮಟ್ಟಕ್ಕೆ ಕುಗ್ಗಬಹುದು, ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಶೇ.11 ರಷ್ಟು ಪ್ರಗತಿ ಕಾಣಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಹೇಳಿದೆ.

     ಹಣಕಾಸು ವರ್ಷ 2020-21ರಲ್ಲಿ ಮುಖ್ಯವಾಗಿ ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ನಂತರದ ದೇಶಾದ್ಯಂತದ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಆರ್ಥಿಕ ಬೆಳವಣಿಗೆ ಕುಸಿತ ದಾಖಲಿಸಿದೆ.

     ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುನ್ಸೂಚನೆಗಳಿಗೆ ಅನುಗುಣವಾಗಿ ಕೇಂದ್ರ ಬಜೆಟ್ ಗೆ ಎರಡು ದಿನಗಳ ಮುನ್ನ ಆರ್ಥಿಕ ಸಮೀಕ್ಷೆ ಬಹಿರಂಗವಾಗಿದೆ. ಇದು ಮಾರ್ಚ್ 31 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 7.5 ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ.

      ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚೆಗೆ 2020-21ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ದರವನ್ನು ಶೇಕಡಾ 8 ಕ್ಕೆ ಇಳಿಸಿದೆ. 2022-23ರಲ್ಲಿ ಶೇಕಡಾ 6.8 ಕ್ಕೆ ಇಳಿಯುವ ಮೊದಲು 2021-22ರಲ್ಲಿ ಶೇಕಡಾ 11.5 ರಷ್ಟು ಬೆಳವಣಿಗೆಯ ನಿರೀಕ್ಷೆ ಮಾಡಲಾಗಿದೆ. ಹಾಗೆಯೇ ಎರಡೂ ವರ್ಷಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯ ಗುರುತನ್ನು ಮರಳಿ ಪಡೆಯಲಿದೆ.

     ಜೂನ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಿಡಿಪಿ ಶೇಕಡಾ 23.9 ರಷ್ಟು ಕುಗ್ಗಿತು ಮತ್ತು ಸೆಪ್ಟೆಂಬರ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 7.5 ರಷ್ಟು ದಾಖಲಾಗಿದೆ. ಹಣದುಬ್ಬರ ದರದ ಪ್ರಮಾಣ ಶೇ 5ರಂತೆ ತೆಗೆದುಕೊಳ್ಳಲಾಗಿದ್ದು, ಶೇ 4ರಿಂದ 6 ರವರೆಗಿನ ಮಧ್ಯದ ಬಿಂದುವಿನಲ್ಲಿ ಇರಲಿದೆ.

     "ವರ್ಷದ ಮಧ್ಯಭಾಗದಲ್ಲಿ ದೀರ್ಘಾವಧಿಯವರೆಗೆ ಪೂರೈಕೆಯನ್ನು ಉತ್ತೇಜಿಸಲು ಮತ್ತು ಉತ್ಪಾದಕ ಸಾಮರ್ಥ್ಯಗಳಿಗೆ ದೀರ್ಘಕಾಲೀನ ಹಾನಿಯನ್ನು ತಪ್ಪಿಸಲು ರಚನಾತ್ಮಕ ಸುಧಾರಣೆಗಳನ್ನು ಘೋಷಿಸಿದ ಏಕೈಕ ದೇಶ ಭಾರತ" ಎಂದು ಸಮೀಕ್ಷೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries