ತಿರುವನಂತಪುರ: ರಾಜ್ಯದಲ್ಲಿ ಇಂದು 6334 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 771, ಮಲಪ್ಪುರಂ 657, ಕೊಟ್ಟಾಯಂ 647, ಕೊಲ್ಲಂ 628, ಕೋಝಿಕ್ಕೋಡ್ 579, ಪತ್ತನಂತಿಟ್ಟು 534, ತಿರುವನಂತಪುರ 468, ತ್ರಿಶೂರ್ 468, ಆಲಪ್ಪುಳ 415, ಇಡುಕ್ಕಿ 302, ಕಣ್ಣೂರು 299, ಪಾಲಕ್ಕಾಡ್ 238, ಕಾಸರಗೋಡು 87 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಜೊತೆಗೆ ಇತ್ತೀಚೆಗೆ ಯುಕೆಯಿಂದ ಬಂದ 66 ಜನರಲ್ಲಿ ಕೋವಿಡ್ ಈವರೆಗೆ ಖಚಿತಪಡಿಸಲಾಗಿದೆ. ಅವರ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎನ್‍ಐವಿ ಪುಣೆಗೆ ಕಳುಹಿಸಲಾಗಿದೆ. ಒಟ್ಟು 9 ಜನರಿಗೆ ರೂಪಾಂತರಿತ ಸೋಂಕು ಇರುವುದು ಪತ್ತೆಯಾಗಿದೆ. ಇದೇ ವೇಳೆ 66 ರಲ್ಲಿ, 41 ಮಂದಿಯ ಪರಿಶೋಧನಾ ವರದಿ ನಕಾರಾತ್ಮಕವಾಗಿದೆ.
ಕಳೆದ 24 ಗಂಟೆಗಳಲ್ಲಿ 61,279 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.10.34 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 90,90,900 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 21 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3,545 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 93 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5658 ಜನರಿಗೆ ಸೋಂಕು ತಗುಲಿತು. 517 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 730, ಮಲಪ್ಪುರಂ 604, ಕೊಟ್ಟಾಯಂ 587, ಕೊಲ್ಲಂ 625, ಕೋಝಿಕೋಡ್ 559, ಪತ್ತನಂತಿಟ್ಟು 473, ತಿರುವನಂತಪುರ 312, ತ್ರಿಶೂರ್ 458, ಆಲಪ್ಪುಳ 404, ಇಡುಕ್ಕಿ 284, ಕಣ್ಣೂರು 226, ಪಾಲಕ್ಕಾಡ್ 89, ವಯನಾಡ್ 232, ಕಾಸರಗೋಡು 75 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಇಂದು 66 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 15, ಎರ್ನಾಕುಳಂ 12, ಪತ್ತನಂತಿಟ್ಟು 11, ಮಲಪ್ಪುರಂ 6, ಕೋಝಿಕ್ಕೋಡ್ 5, ತಿರುವನಂತಪುರ, ಪಾಲಕ್ಕಾಡ್ ತಲಾ 4, ವಯನಾಡ್ 3, ಕೊಲ್ಲಂ, ಆಲಪ್ಪುಳ, ಕೊಟ್ಟಾಯಂ, ಇಡುಕಿ, ತ್ರಿಶೂರ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6229 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 333, ಕೊಲ್ಲಂ 1023, ಪತ್ತನಂತಿಟ್ಟು 798, ಆಲಪ್ಪುಳ 398, ಕೊಟ್ಟಾಯಂ 697, ಇಡುಕ್ಕಿ 129, ಎರ್ನಾಕುಳಂ 713, ತ್ರಿಶೂರ್ 402, ಪಾಲಕ್ಕಾಡ್ 123, ಮಲಪ್ಪುರಂ 572, ಕೋಝಿಕೋಡ್ 525, ವಯನಾಡ್ 235 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 69,771 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 7,96,986 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,09,828 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,98,107 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 11,721 ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1,482 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. ಪತ್ತನಂತಿಟ್ಟು ಜಿಲ್ಲೆಯ ಕೊಯಿಪ್ರಮ್ (ಕಂಟೈನ್‍ಮೆಂಟ್ ಸಬ್ ವಾರ್ಡ್ 10), ಚೆನ್ನೀರ್ಕಾರ (ಉಪ ವಾರ್ಡ್‍ಗಳು 2, 3, 5) ಮತ್ತು ಮೆಳಿವೇಲಿ (ಸಬ್ ವಾರ್ಡ್‍ಗಳು 2, 13, 12) ಹೊಸ ಹಾಟ್‍ಸ್ಪಾಟ್‍ಗಳಾಗಿವೆ.
2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ, ಪ್ರಸ್ತುತ ಒಟ್ಟು 406 ಹಾಟ್‍ಸ್ಪಾಟ್‍ಗಳಿವೆ.





