ಕಾಸರಗೋಡು: ಕಣ್ಣೂರು ವಿಭಾಗೀಯ ಕಸ್ಟಂಮ್ಸ್ ತಂಡ ಇಂದು ಕಾಸರಗೋಡಿನಲ್ಲಿ ನಡೆಸಿದ ದಾಳಿಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಒಡವೆಗಳನ್ನು ವಶಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕಿಲೋ ಗಟ್ಟಲೆ ಚಿನ್ನ ವಶಪಡಿಸಿರುವ ಅಧಿಕೃತರು ಇಬ್ಬರು ಹೊರ ರಾಜ್ಯ ನಿವಾಸಿಗಳ ಸಹಿತ ಹಲವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ದಾಳಿಯ ಬಗ್ಗೆ ಪ್ರಸ್ತುತ ಯಾವುದೇ ವಿವರಗಳನ್ನು ನೀಡಲು ಕಸ್ಟಂಮ್ಸ್ ನಿರಾಕರಿಸಿದ್ದು,ಕಣ್ಣೂರಿನಿಂದ ಉನ್ನತ ಅಧಿಕಾರಿಗಳು ಆಗಮಿಸಿದ ಬಳಿವಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ.