ಬದಿಯಡ್ಕ: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಎಂಟನೆಯ ಸೇವಾ ಕಾರ್ಯವು ಇತ್ತೀಚೆಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಂದಿ ತಿವಿದು ಮೃತಪಟ್ಟ ಬೇಳ ಗ್ರಾಮದ ಮಾನ್ಯ ಸಮೀಪದ ಪುದುಕೋಳಿಯ ದಿ.ಐತಪ್ಪ ನಾಯ್ಕ್ ರವರ ಕುಟುಂಬಕ್ಕೆ ದಿನನಿತ್ಯದ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಭಾನುವಾರ ಜರಗಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ, ಗ್ರಾ.ಪಂ. ಸದಸ್ಯೆ ಸ್ವಪ್ನ, ಸದಸ್ಯ ಶಂಕರ ಡಿ, ಬಾಲಕೃಷ್ಣ ಶೆಟ್ಟಿ ಕಡಾರು, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಯುವ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಹಿರಿಯ ಸಲಹೆಗಾರ ರಾಧಾಕೃಷ್ಣ ಮಾನ್ಯ, ಸಂಸ್ಥಾಪಕ ಅಧ್ಯಕ್ಷ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಉಪಾಧ್ಯಕ್ಷ ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ, ಟೀಮ್ ಮಂಜುಶ್ರೀ ಕುಡ್ಲ ತಂಡದ ಗೌರವಾಧ್ಯಕ್ಷ ಪುಷ್ಪರಾಜ್ ರಾವ್, ಅಧ್ಯಕ್ಷ ಚಂದ್ರೇಶ್ ಮಾನ್ಯ, ಉಪಾಧ್ಯಕ್ಷ ರಮೇಶ್ ಕುಲಾಲ್ ನಾರಾಯಣಮಂಗಲ, ಪ್ರಚಾರ ಸಮಿತಿ ಅಧ್ಯಕ್ಷ ರಜನೀಶ್ ಅಶ್ವ, ಸದಸ್ಯರಾದ ಸಚಿನ್ ಬಜಿರೆ (ವೇಣೂರು), ಮಂಜುನಾಥ ಏಳ್ಕಾನ, ಬಿಜೆಪಿ ಕಾರ್ಯಕರ್ತರಾದ ಗಿರೀಶ್ ಮಾನ್ಯ, ಮಧುಚಂದ್ರ ಮಾನ್ಯ, ವಿವೇಕ್ ಮಾನ್ಯ, ಪ್ರಶಾಂತ್ ಮಾನ್ಯ, ತಿರುಮಲೇಶ್ವರ ಪುದುಕೋಳಿ, ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮುಂತಾದವರು ಉಪಸ್ಥಿತರಿರದ್ದರು.
ಕಾರ್ಯಕ್ರಮಕ್ಕೆ ಧರ್ಮಪಾಲ ಶೆಟ್ಟಿ ಮಂಗಳೂರು, ಸಂಸ್ಥೆಯ ಮಹಾ ಪೆÇೀಷಕರುಗಳಾದ ಕಿಶೋರ್ ಡಿ ಶೆಟ್ಟಿ, ರಾಘವೇಂದ್ರ ರಾವ್ ಶರವು, ಚಂದ್ರಶೇಖರ್(ಪೆÇೀಲಿಸ್ ಅಧಿಕಾರಿಗಳು), ವಿಕ್ರಮ್ ಪೂಜಾರಿ, ನವೀನ್ ಶೆಟ್ಟಿ ಅಳಕೆ, ದೀಪಕ್ ರಾವ್ ಸಂಪೂರ್ಣ ಸಹಕಾರವನ್ನು ನೀಡಿದರು.






