ಕಾಸರಗೋಡು: ಪೆರಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ಲೋಕೋಪಯೋಗಿ ಇಲಾಖೆಯ ನೂತನ ವಿಶ್ರಾಂತಿ ಗೃಹ ನಿರ್ಮಾಣ ಪ್ರವೃತ್ತಿ ಆರಂಭಗೊಂಡಿದೆ. ಶನಿವಾರ ಈ ಸಂಬಂಧ ನಡೆದ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಅವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಈ ವಿಶ್ರಾಂತಿಗೃಹದ ನಿರ್ಮಾಣ ದೊಡ್ಡ ಕೊಡುಗೆಯಾಗಲಿದೆ. 2.89 ಕೊಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಿರುವ ಈ ಕಟ್ಟಡ 18 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದವರು ತಿಳಿಸಿದರು.
8370 ಚದರ ಅಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ ಅತ್ಯಾದುನಿಕ ಸೌಲಭ್ಯಗಳೊಂದಿಗೆ ವಿಐಪಿ ಸೂಟ್ ಗಳು, ಹವಾನಿಯಂತ್ರಿತ ಮತ್ತು ಅಲ್ಲದೇ ಇರುವ ಕೊಠಡಿಗಳು, ಸ್ವಾಗತ ಕೊಠಡಿ, ಸಭಾಂಗಣ, ವಾಹನ ನಿಲುಗಡೆ ಸೌಲಭ್ಯ ಇತ್ಯಾದಿ ಇರುವುವು.
ಸಭೆಯಲ್ಲಿ ಶಾಸಕ ಕೆ.ಕುಂಞÂ್ಞ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶಾರದಾ ಎಸ್.ನಾಯರ್, ಸದಸ್ಯೆ ಸುಮಾ ಕುಂಞÂ್ಞ ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.




