HEALTH TIPS

ಪ್ರತ್ಯೇಕತೆಯಿಲ್ಲ-ಸೇರುವುದೆಲ್ಲವೂ ಒಂದೆಡೆಗೆ!-ದೇವಾಲಯ ಮತ್ತು ಮಸೀದಿಗೆ ಪ್ರವೇಶ ದ್ವಾರವೊಂದೇ!-ನೆಲಮೂಲದ ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಲಿದೆ ಕುಣಿಯ ಅಯಂಪಾರೆ

        ಕಾಸರಗೋಡು :ವೇಶ-ಭೂಷಣ, ಆಹಾರ,ಸಂಸ್ಕøತಿ, ಜೀವನ ಕ್ರಮಗಳು ಪ್ರತ್ಯೇಕವಾಗಿದ್ದರೂ, ಆಗೊಮ್ಮೆ ಈಗೊಮ್ಮೆ ಚಿಕ್ಕಪುಟ್ಟ ವೈಮನಸ್ಸುಗಳು ತಲೆದೋರುವುದು ಹೌದಾದರೂ ಅದಕ್ಕಿಂತಲೂ ಆಚೆ ಆಂತರಂಗಿಕವಾಗಿ ಎಲ್ಲರೂ ಒಂದೆಂಬುದನ್ನು ಸಾಬೀತುಗೊಳಿಸುವ ವಿದ್ಯಮಾನಗಳು ಅಲ್ಲೊಂದು-ಇಲ್ಲೊಂದು ಘಟಿಸುತ್ತಲೇ ಇರುತ್ತವೆ.
       ಕಾಸರಗೋಡಿನಲ್ಲಿ ಅವಳಿ ಕೊಲೆ ಪ್ರಕರಣದ ಮೂಲಕ ಗುರುತಿಸಿಕೊಂಡಿರುವ ಕಲ್ಯಾಟ್ ಸಮೀಪದ ಪುಟ್ಟ ಗ್ರಾಮವೊಂದು ಇದೀಗ ತನ್ನದೇ ವಿಶಿಷ್ಟತೆಯ ಮೂಲಕ ಗಮನ ಸೆಳೆಯಲಿದೆ. ಇಲ್ಲಿಯ ದೇವಾಲಯ ಮತ್ತು ಮಸೀದಿಗೆ ತೆರಳುವ ರಸ್ತೆಗೆ ನಿರ್ಮಿಸುತ್ತಿರುವ ಸ್ವಾಗತ ಗೋಪುರ ಇತರೆಡೆಗಳಿಗಿಂತ ಭಿನ್ನವಾಗಿ ವಿಶಿಷ್ಟವೆನಿಸಲಿದೆ.
       ಪುಲ್ಲೂರ್ ಪೆರಿಯ ಪಂಚಾಯತಿಯ ಎರಡು ಪ್ರತ್ಯೇಕ ಆರಾಧನಾಲಯ ಈ ಮೂಲಕ ಮಾದರಿಯಾಗಲಿದೆ. ಇಲ್ಲಿಯ ಅಯಂಪಾರ ಶ್ರೀಮಹಾವಿಷ್ಣು ದೇವಸ್ಥಾನ ಮತ್ತು ಮೀತಲೆ ಕುಣಿಯದ ಬಿಲಾಲ್ ಮಸೀದಿ ಎರಡೂ ಒಂದೇ ರಸ್ತೆಯಲ್ಲಿದ್ದು ಅವುಗಳಿಗೆ ತೆರಳುವ ಮಾರ್ಗದ ಪ್ರವೇಶ ದ್ವಾರ ಮತೇತರತ್ವ ಸಾರಲಿದೆ!
      ಕಾಸರಗೋಡು-ಕಾಞಂಗಾಡ್ ರಾಷ್ಟ್ರೀಯ ಹೆದ್ದಾರಿ ಬಳಿಯ ಕುಣಿಯ ಅಯಂಪಾರೆ ರಸ್ತೆಯಲ್ಲಿ ಎರಡೂ ಧರ್ಮದವರು ಜಂಟಿಯಾಗಿ ನಿರ್ಮಿಸುತ್ತಿರುವ ಪ್ರವೇಶ ದ್ವಾರ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಪ್ರವೇಶದ್ವಾರದ ಮೂಲಕ ನಡೆದರೆ, ಮೊದಲು ಬಿಲಾಲ್ ಮಸೀದಿಯನ್ನು ತಲುಪುತ್ತೇವೆ. ಒಂದಷ್ಟು ಮುಂದೆ ನಡೆದಾಗ ಶ್ರೀಮಹಾವಿಷ್ಣು ದೇವಾಲಯ ತಲುಪುವೆವು.
    ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಇಲ್ಲಿಯ ಪ್ರವೇಶ ದ್ವಾರವನ್ನು ಕೇರಳೀಯ ದೇವಾಲಯ ಶೈಲಿ ಮತ್ತು ಮಸೀದಿ ಎಂಬೆರಡು ಜಂಟಿ ಶೈಲಿಯ ಮೂಲಕ ನಿರ್ಮಿಸಲಾಗುತ್ತಿದೆ. ದ್ವಾರದ ಬಲ ಸ್ತಂಭದಲ್ಲಿ ಕೇರಳ ದೇವಾಲಯ ಶೈಲಿ ಮತ್ತು ಎಡ ಸ್ತಂಭದಲ್ಲಿ ಮಸೀದಿ ಮಾದರಿ ಇರಲಿದೆ. ಈಗಾಗಲೇ 5 ಲಕ್ಷ ರೂ.ವ್ಯಯಿಸಲಾಗಿದ್ದು ಮುಂದಿನ ಒಂದೆರಡು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಹಿಂದೆ ಈ ರಸ್ತೆಯಲ್ಲಿ ಮಸೀದಿಗೆ ಕಬ್ಬಿಣದ ಕಮಾನು ಇತ್ತು. ಅದರ ಒಂದು ಬದಿಯಲ್ಲಿ ಟೆಂಪಲ್ ರೋಡ್ ಎಂದು ಬರೆಯಲಾಗಿತ್ತು. ಕಳೆದ ವರ್ಷ ದೇವಾಲಯದ ಯುಎಇ ಸಮಿತಿ ಹೊಸ ಗೇಟ್ ನಿರ್ಮಿಸಲು ನಿರ್ಧರಿಸಿತು. ಆದರೆ,ಬಳಿಕ ಮಸೀದಿ ಸಮಿತಿಯೊಂದಿಗೆ ಸಮಾಲೋಚಿಸಿ ನಿರ್ಧಾರವನ್ನು ಬದಲಾಯಿಸಲಾಯಿತು.
      ಹೀಗೆ ಎರಡು ಧರ್ಮಾವಲಂಬಿಗಳ ಆರಾಧನಾಲಯ ಸಮಿತಿಗಳು ದ್ವಾರಗಳ ನಿರ್ಮಾಣಕ್ಕಾಗಿ ಸಂಘಟನಾ ಸಮಿತಿಯನ್ನು ರಚಿಸಿದವು. ಅಬ್ದುಲ್ ಖಾದಿರ್ ಸಾದಿ ಅಧ್ಯಕ್ಷರು ಮತ್ತು ಕೆ ನಾರಾಯಣನ್ ಕನ್ವೀನರ್ ಆಗಿದ್ದಾರೆ. ಅಂತಿಮ ಸ್ಪರ್ಶವನ್ನು ಈಗ ಮಾಡಲಾಗುತ್ತಿದೆ. ಈ ಹಿಂದೆ ಕುಣಿಯದಲ್ಲಿ ನವೀಕರಿಸಿದ ಖಿಲ್ರಿಯಾ ಜುಮಾ ಮಸೀದಿಯ ಉದ್ಘಾಟನೆಯ ಸಂದರ್ಭದಲ್ಲೂ ಧಾರ್ಮಿಕ ಸಾಮರಸ್ಯಗಳಿಂದ ಎರಡು ಗುಂಪುಗಳು ಸಹಕರಿಸಿದ್ದವು. ಧರ್ಮಕ್ಕಾಗಿ ಹೋರಾಡುವವರಿಗೆ ಈ ಮಣ್ಣಿನಲ್ಲಿ ಸ್ಥಾನವಿಲ್ಲ ಎಂದು ಎರಡೂ ಧರ್ಮದ ಇಲ್ಲಿಯ ನೇತಾರರು ಈ ಮೂಲಕ ಮಾರ್ಗದರ್ಶನ ನೀಡಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries