HEALTH TIPS

ದೆಹಲಿ ಪೊಲೀಸ್ ನೋಟಿಸ್ ಗೆ ಭಯ ಪಡುವುದಿಲ್ಲ, ಪ್ರತಿಭಟನೆ ಅಂತ್ಯಗೊಳಿಸಲು ಸರ್ಕಾರದ ಯತ್ನ: ಸಂಯುಕ್ತ ಕಿಸಾನ್ ಮೋರ್ಚಾ

          ನವದೆಹಲಿ: ಪ್ರತಿಭಟನೆಗಳನ್ನು ಅಂತ್ಯಗೊಳಿಸುವಂತೆ ರೈತ ಸಂಘಟನೆಗಳಿಗೆ ಸರ್ಕಾರ ಎಚ್ಚರಿಕೆ ನೀಡಿರುವಂತೆಯೇ ಇತ್ತ ದೆಹಲಿ ಪೆÇಲೀಸರು ನೀಡಿರುವ ನೋಟಿಸ್ ಗೆ ನಾವು ಹೆದರುವುದಿಲ್ಲ. ನಮ್ಮ ಪ್ರತಿಭಟನೆ ಅಂತ್ಯಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ನಾಪು ಅದಕ್ಕೆ ಅವಕಾಶ  ನೀಡುವುದಿಲ್ಲ. ಸ್ಥಳದಿಂದ ಕದಲುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್‍ನ ವಕ್ತಾರ ರಾಕೇಶ್ ಟಿಕೈತ್ ಸ್ಪಷ್ಟಪಡಿಸಿದ್ದಾರೆ.

     ಇದೇ ವೇಳೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಿಸಾನ್ ಮೋರ್ಚಾ, ಜನವರಿ 26ರಂದು ನಡೆದ ಹಿಂಸಾಚಾರವನ್ನು ಸರ್ಕಾರ ರೈತರ ಮೇಲೆ ಹೊರಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಸಕಲ ಪ್ರಯತ್ನ ಮಾಡುತ್ತಿದೆ. ಪೆÇಲೀಸರು ಸಹ ತಮ್ಮ ಬಲ ಪ್ರಯೋಗ ಮಾಡಿ  ಪ್ರತಿಭಟನಾ ನಿರತರನ್ನು ಚದುರಿಸುತ್ತಿದ್ದಾರೆ. ಇದು ನಿಜಕ್ಕೂ ಸರಿಯಲ್ಲ. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬದಲು ಸರ್ಕಾರ ಅಮಾಯಕ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೆÇಲೀಸರು  ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ರೈತ ಮುಖಂಡರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದ್ದು, ರೈತ ಸಮೂಹವನ್ನು ಬೇರ್ಪಡಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಟಿಕೈತ್  ಹೇಳಿದ್ದಾರೆ.

      ರೈತರ ಆಂದೋಲನವನ್ನು ಅಪಖ್ಯಾತಿಗೊಳಿಸುವ ಸರ್ಕಾರದ ಪ್ರಯತ್ನಗಳು ಮುಂದುವರೆದಿದ್ದು, ಎಲ್ಲಾ ಗಡಿಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಇದು ಸರ್ಕಾರಕ್ಕೆ ರೈತರ ಕುರಿತು ಇರುವ ಭಯವನ್ನು ತೋರಿಸುತ್ತಿದೆ. ರೈತರ ಶಾಂತಿಯುತ ಆಂದೋಲನವನ್ನು ಮತ್ತೆ ಮತ್ತೆ  'ಹಿಂಸಾತ್ಮಕ' ಎಂದು ತೋರಿಸಲು ಸರ್ಕಾರ ಬಯಸುತ್ತಿದೆ, ಆದರೆ ಚಳುವಳಿ ಶಾಂತಿಯುತವಾಗಿಯೇ ನಡೆಯಲಿದೆ. ಸರ್ಕಾರದ ಯಾವುದೇ ನಡೆಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

     ಗುರುವಾರ ದೆಹಲಿ ಪೆÇಲೀಸರು ರೈತ ಸಂಘಟನೆಗಳ ಮುಖಂಡರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ದೆಹಲಿ ಹಿಂಸಾಚಾರದಲ್ಲಿನ ಪಾತ್ರದ ಸಂಬಂಧ ಪೆÇಲೀಸರು ಈ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಇತ್ತ ಉತ್ತರ ಪ್ರದೇಶದ ಪಾಗಪಾತ್‍ನಲ್ಲಿ ಇಂದು ರೈತರ  ಪ್ರತಿಭಟನೆ ಅಂತ್ಯಗೊಂಡಿದ್ದು, ಕಳೆದ ವರ್ಷ ಡಿಸೆಂಬರ್ 19ರಿಂದ ಇಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. 'ಪೆÇಲೀಸ್ ಬಲವನ್ನು ಬಳಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಲಾಗಿದೆ' ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ಆದರೆ, ಮಾತುಕತೆಯ ಮೂಲಕ ರೈತರನ್ನು  ಬುಧವಾರ ರಾತ್ರಿ ಮನೆಗಳಿಗೆ ಕಳುಹಿಸಲಾಗಿದೆ ಎಂದು ಪೆÇಲೀಸರು ಹೇಳಿರುವುದಾಗಿ ವರದಿಯಾಗಿದೆ.

      ಇದೇ ವೇಳೆ ಗಾಜಿಪುರ ಗಡಿಭಾಗದಲ್ಲಿ ರೈತರಿಗೆ ಸಿಆರ್‍ಪಿಸಿ ಸೆಕ್ಷನ್ 133ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗಾಜಿಯಾಬಾದ್‍ನ ಎಡಿಎಂ ಶೈಲೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.  

          ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಪೆರೇಡ್, ಟ್ರ್ಯಾಕ್ಟರ್ ???ಯಾಲಿಯ ಸಂದರ್ಭದಲ್ಲಿ ಹಲವು ಮಂದಿ ಕೆಂಪು ಕೋಟೆಗೆ ನುಗ್ಗಿದ್ದು ಹಾಗೂ ಪೆÇಲೀಸರ ಜೊತೆಗೆ ಘರ್ಷಣೆಗೆ ಇಳಿದ ಪರಿಣಾಮ ರೈತರ ಪ್ರತಿಭಟನೆಯ ಸ್ವರೂಪವೇ ಬದಲಾಯಿತು. ಒಬ್ಬ ರೈತ ಸಾವಿಗೀಡಾದರೆ, ಸುಮಾರು  400 ಪೆÇಲೀಸರು ಗಾಯಗೊಂಡಿರುವುದು ವರದಿಯಾಗಿದೆ. ಕೆಂಪು ಕೋಟೆಯ ಗೋಪುರಗಳಲ್ಲಿ ಅನ್ಯ ಧ್ವಜಗಳನ್ನು ಹಾರಿಸಿದ್ದು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡಲಾಗಿದೆ. ದೆಹಲಿಯಲ್ಲಿ ಪೆÇಲೀಸರು ರೈತ ಮುಖಂಡರ ವಿರುದ್ಧ ಲುಕ್‍ಔಟ್ ನೋಟಿಸ್ ಜಾರಿ  ಮಾಡಿದ್ದಾರೆ. 'ಪೆರೇಡ್‍ಗೆ ನಿಗದಿ ಪಡಿಸಿದ್ದ ನಿಗಮಗಳನ್ನು ಪಾಲಿಸದಿರುವುದಕ್ಕಾಗಿ, ನಿಮ್ಮ ವಿರುದ್ಧ ಏಕೆ ಕಾನೂನು ರೀತಿಯ ಕ್ರಮಕೈಗೊಳ್ಳಬಾರದು' ಎಂದು ಮೂರು ದಿನಗಳ ಒಳಗಾಗಿ ಪ್ರತಿಕ್ರಿಯೆ ದಾಖಲಿಸುವಂತೆ ಬಿಕೆಯುನ ವಕ್ತಾರ ರಾಕೇಶ್ ಟಿಕೈಯ್ತ್ ಅವರಿಗೂ ಪೆÇಲೀಸರು  ಸೂಚಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries