ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಸಂದರ್ಭ ನಕಲಿ ಮತದಾನ ತಡೆಯಲೆತ್ನಿಸಿದ ಪೋಲಿಂಗ್ ಅಧಿಕಾರಿಗೆ ಉದುಮ ಶಾಸಕ ಕೆ.ಕುಞÂರಾಮನ್ ಹಾಗೂ ಚುನಾವಣಾ ಏಜೆಂಟ್‍ಗಳು ಕಾಲು ಕಡಿಯುವುದಾಗಿ ಜೀವ ಬೆದರಿಕೆಯೊಡ್ಡಿದ್ದಾರೆನ್ನಲಾದ ಪ್ರಕರಣದ ಬಗ್ಗೆ ಮತಗಟ್ಟೆಯಲ್ಲಿ ಅಳವಡಿಸಿದ್ದ ವಿಡಿಯೋ ದಾಖಲೆ ತಪಾಸಣೆಗೆ ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶದ ಮೇರೆಗೆ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಒಂದಾದ ಪಾಕ್ಕಂ ಚೇರ್ಕಪ್ಪಾರ ಜಿಎಲ್‍ಪಿ ಶಾಲೆಯ ಮತಗಟ್ಟೆಯಲ್ಲಿ ರಾಜ್ಯಚುನಾವಣಾ ಆಯೋಗದ ಮೇಲ್ನೋಟದಲ್ಲಿ ವೆಬ್‍ಕಾಸ್ಟಿಂಗ್ ವಿಡಿಯೋ ಚಿತ್ರೀಕರಣ ನಡೆಸಲಾಗಿತ್ತು. ಈ ದಾಖಲೆಯನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ಉಸ್ತುವಾರಿಯಲ್ಲಿ ಸಂಗ್ರಹಿಸಿರಿಸಲಾಗಿದೆ. ಚೇರ್ಕಪ್ಪಾರ ಜಿಎಲ್‍ಪಿ ಶಾಲಾ ಮತಗಟ್ಟೆಯ ಚುನಾವಣಾಧಿಕಾರಿಯಾಗಿದ್ದ ಡಾ. ಕೆ.ಎಂ ಶ್ರೀಕುಮಾರ್ ಅವರ ದೂರು ಲಭಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಯಿಂದ ವರದಿ ಕೇಳಿದೆ. ಚುನಾವಣೆ ದಿವಸ ಅಲ್ಲಿ ಏನೇನು ನಡೆದಿದೆ ಎಂಬುದನ್ನು ಆಯೋಗ ಸಮಗ್ರವಾಗಿ ತನಿಖೆ ನಡೆಸಲಿದೆ. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯ ವರದಿ ಲಭಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣಾಧಿಕಾರಿ ಎಂ. ಭಾಸ್ಕರನ್ ತಿಳಿಸಿದ್ದಾರೆ.




