HEALTH TIPS

ಒಂದೇ ಒಂದು ದಿನಕ್ಕೆ ಉತ್ತರಾಖಂಡದ ಮುಖ್ಯಮಂತ್ರಿಯಾಗಲಿದ್ದಾರೆ ಸೃಷ್ಟಿ ಗೋಸ್ವಾಮಿ!

           ಡೆಹರಾಡೂನ್: ಹರಿದ್ವಾರ ಮೂಲದ ಸೃಷ್ಟಿ ಗೋಸ್ವಾಮಿ (19) ಹೆಣ್ಣು ಮಕ್ಕಳ ರಾಷ್ಟ್ರೀಯ ದಿನವಾದ ಜನವರಿ 24 ರಂದು ಒಂದು ದಿನ ಉತ್ತರಾಖಂಡದ ಮುಖ್ಯಮಂತ್ರಿಯಾಗಲಿದ್ದಾರೆ.

      ರಾಜ್ಯದ ಬೇಸಿಗೆ ರಾಜಧಾನಿಯಾದ ಗೈರ್‌ಸೈನ್‌ನಿಂದ ಆಡಳಿತ ನಡೆಸಲಿದ್ದು, ರಾಜ್ಯ ಸರ್ಕಾರವು ನಡೆಸುವ ವಿವಿಧ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.

     ಮೂರನೇ ವರ್ಷದ ಬಿಎಸ್‌ಸಿ ಪದವಿ ಅಭ್ಯಸಿಸುತ್ತಿರುವ ಗೋಸ್ವಾಮಿ ತಮಗೆ ಸಿಕ್ಕ ಅವಕಾಶದ ಬಗ್ಗೆ ಮಾತನಾಡುತ್ತಾ, 'ಇದು ನಿಜವೇ ಎಂದು ನಾನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಅದರಲ್ಲೇ ತುಂಬಾ ಮುಳುಗಿಹೋಗಿದ್ದೇನೆ. ಆದರೆ ಅದೇ ವೇಳೆ, ಜನರ ಕಲ್ಯಾಣಕ್ಕಾಗಿ ಯುವಜನರು ಆಡಳಿತದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಸಾಬೀತುಪಡಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ.' ಎಂದಿದ್ದಾರೆ.

       ಅಂದು ಅಟಲ್ ಆಯುಷ್ಮಾನ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಪ್ರವಾಸೋದ್ಯಮ ಇಲಾಖೆಯ ಹೋಂಸ್ಟೇ ಯೋಜನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ಅವರು ಪರಿಶೀಲಿಸಲಿದ್ದಾರೆ.

ಗೋಸ್ವಾಮಿ ಅವರು 2018 ರಿಂದ ಬಾಲ ವಿಧಾನಸಭೆಯ (ಮಕ್ಕಳ ರಾಜ್ಯ ವಿಧಾನಸಭೆ) ಮುಖ್ಯಮಂತ್ರಿ ಆಗಿದ್ದಾರೆ.

       ಅವರು ಸಿಎಂ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಮೊದಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ವಿವರವಾದ ಮಾಹಿತಿಯನ್ನು ನೀಡುತ್ತಾರೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಉತ್ತರಾಖಂಡ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

      ಆಯೋಗದ ಅಧ್ಯಕ್ಷೆ ಉಷಾ ನೇಗಿ ಮಾತನಾಡಿ, 'ಈ ಬಗ್ಗೆ ಈಗಾಗಲೇ ಗೈರ್‌ಸೈನ್‌ನಲ್ಲಿರುವ ರಾಜ್ಯ ವಿಧಾನಸಭಾ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೃಷ್ಟಿ ಗೋಸ್ವಾಮಿ ನಮ್ಮೊಂದಿಗೆ ಸ್ವಲ್ಪ ಸಮಯದವರೆಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮರ್ಥ್ಯಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ' ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries