ಬದಿಯಡ್ಕ: ಕುಂಬಳೆ ಫಿರ್ಕಾ ಬಂಟರ ಸಂಗದ ಕಾರ್ಯಕಾರೀ ಸಮಿತಿಯ ಸಭೆ ಬದಿಯಡ್ಕದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ನಡೆಯಿತು.
ಕುಂಬಳೆ ಫಿರ್ಕಾದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಜಿಲ್ಲಾಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘದ ಉನ್ನತಿಗೆ ಪ್ರತಿಯೊಬ್ಬ ಸಮಾಜ ಬಾಂಧವರೂ ರಾಜಕೀಯ ರಹಿತರಾಗಿ ಸಹಕರಿಸಬೇಕು. ಯಾವುದೇ ಭಿನ್ನತೆಗಳಿಗೆ ಆಸ್ಪದವೀಯದೆ ಹಿರಿಯರು ನೀಡಿರುವ ಮಾರ್ಗದರ್ಶಿ ಮೇಲ್ಪಂಕ್ತಿಯೊಂದಿಗೆ ಮುನ್ನಡೆಯಬೇಕು ಎಂದು ಕರೆನೀಡಿದರು.
ಜಿಲ್ಲಾ ಉಪಾಧ್ಯಕ್ಷ ಪಿ.ಜಿ.ಚಂದ್ರಹಾಸ ರೈ, ಕೋಶಾಧಿಕಾರಿ ಚಿದಾನಂದ ಆಳ್ವ, ಕ್ಯಾಂಪ್ಕೋದ ಮಾಜಿ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು.
ವಿವಿಧ ಪಂಚಾಯತಿ ಘಟಕಗಳ ಪ್ರತಿನಿಧಿಗಳಾದ ಮನಮೋಹನ ರೈ ಪಿಂಡಗ, ನಾರಾಯಣ ಆಳ್ವ ಎಣ್ಮಕಜೆ, ಸಂತೋಷ್ ರೈ ಬಜದಗುತ್ತು, ಕೃಷ್ಣ ಪ್ರಸಾದ್ ರೈ, ಸುಜಾತಾ ರೈ, ಪಿ.ಕೆ.ಶೆಟ್ಟಿ, ಹರ್ಷಕುಮಾರ್ ರೈ ಉಪಸ್ಥಿತರಿದ್ದರು. ಫಿರ್ಕಾ ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ ಸ್ವಾಗತಿಸಿ, ಬದಿಯಡ್ಕ ಘಟಕದ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ವಂದಿಸಿದರು.





