ಬದಿಯಡ್ಕ: ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ನಾವೆಲ್ಲ ತೊಡಗಿಕೊಂಡು ಶ್ರೀ ರಾಮಚಂದ್ರನ ಸೇವೆಯನ್ನು ಮಾಡಬೇಕೆಂದು ವಿಶ್ವಹಿಂದೂ ಪರಿಷತ್ ನ ಕಾಸರಗೋಡು ಜಿಲ್ಲಾ ಮಾತೃಶಕ್ತಿ ಪ್ರಮುಖ್ ಮೀರಾ ಆಳ್ವ ಹೇಳಿದರು.
ಪೆÇಡಿಪಳ್ಳದಲ್ಲಿ ನಡೆದ ಅಯೋಧ್ಯೆ ಶ್ರೀ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಕುಂಬ್ಡಾಜೆ ಪಂಚಾಯತಿ ಮಟ್ಟದ ಸಮಾವೇಶವದಲ್ಲಿ ಪ್ರಧಾನ ಭಾಷಣ ಮಾಡಿ ಅವರು ಮಾತನಾಡಿದರು.
ಹಿಂದೂಗಳ ನಿರಂತರವಾದ 500 ವರ್ಷಗಳ ಹೋರಾಟದ ಫಲ ಸಾಕಾರಗೊಳ್ಳುತ್ತಿರುವುದು ಸಂತಸ ತಂದಿದೆ. ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಕಾರ್ಯದಲ್ಲಿ ನಾವು ಸೇರಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಸಮಾವೇಶವನ್ನು ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಬ್ರಾಯ ಭಟ್ ಉಬ್ರಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಬೌದ್ದಿಕ್ ಪ್ರಮುಖ್ ವಿಶ್ವನಾಥ ಮಾಸ್ತರ್ ರವರು ಸಮಾರೋಪ ಭಾಷಣ ಮಾಡಿದರು.
ಸಮಾವೇಶದಲ್ಲಿ ನೂತನ ಪಂಚಾಯತಿ ಸಮಿತಿಯನ್ನು ರೂಪೀಕರಿಸಲಾಯಿತು. ಬದಿಯಡ್ಕ ತಾಲೂಕು ಸಂಚಾಲಕ ಹರಿಪ್ರಸಾದ್ ರೈ ಪುತ್ರಕಳ ಸಮಿತಿಯನ್ನು ಘೋಷಣೆ ಮಾಡಿದರು. ಸಂಚಾಲಕರಾಗಿ ಬಿ. ರಾಜೇಶ್ ಶೆಟ್ಟಿ ಬಲೆಕ್ಕಳ, ಸಹ ಸಂಚಾಲಕರಾಗಿ ನರಸಿಂಹ ಭಟ್ ಕಳಯತ್ತೋಡಿ, ರವೀಂದ್ರ ರೈ ಗೋಸಾಡ, ಗಂಗಾಧರ ರೈ ಮಠದಮೂಲೆ, ಸುಬ್ರಾಯ ಭಟ್ ಉಬ್ರಂಗಳ, ರಾಜೇಂದ್ರ ಮವ್ವಾರು, ವ್ಯವಸ್ಥಾ ಪ್ರಮುಖರಾಗಿ ಶಶಿಧರ ತೆಕ್ಕೇಮೂಲೆ, ಸಹ ವ್ಯವಸ್ಥಾ ಪ್ರಮುಖರಾಗಿ ರಾಮಚಂದ್ರ ಮಾಸ್ತರ್ ಉಪ್ಪಂಗಳ, ರಮೇಶ್ ಶರ್ಮ ಕುರುಮುಜ್ಜಿ, ಸಾಹಿತ್ಯ ಪ್ರಮುಖರಾಗಿ ರಾಜೇಶ್ ಕೆ ಪೆÇಡಿಪಳ್ಳ, ಸಹ ಪ್ರಮುಖರಾಗಿ ಉದಯ ಚೂರಿಕ್ಕೋಡು, ರಾಮಕೃಷ್ಣ ಪಾಲೆಕ್ಕಾರ್, ಪ್ರಮೋದ್ ಭಂಡಾರಿ, ಮಾತೃ ಸಮಿತಿಯ ಪದಾಧಿಕಾರಿಗಳಾಗಿ ನಳಿನಿ ಕೃಷ್ಣ ಮಲ್ಲಮೂಲೆ, ಯಶೋದಾ ಎನ್ ಬೇಂದ್ರೋಡು, ಶೈಲಜಾ ಭಟ್ ನಡುಮನೆ, ಕಾವ್ಯಶ್ರೀ ಕಜೆಮಲೆ, ಸುನಿತಾ ಜೆ ರೈ ಅವರನ್ನು ಆರಿಸಲಾಯಿತು.





