HEALTH TIPS

ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ, ಹೊಸ ಇತಿಹಾಸ ನಿರ್ಮಾಣ

        ವಾಶಿಂಗ್ಟನ್:ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ ಎಲ್ಲರ ಹುಬ್ಬೇರಿತ್ತು.
ಹಿರಿಯ ಡೆಮಾಕ್ರೆಟಿಕ್ ಸೆನೆಟರ್ ಎನಿಸಿಕೊಂಡಿದ್ದರೂ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾದವರು ವಿರಳ. 2016ರಲ್ಲಿ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಭಾರಿ ಪೈಪೋಟಿ ನೀಡಿದರೂ ಸೋಲು ಕಾಣಬೇಕಾಯಿತು.
       ಆದರೆ 2020ರಲ್ಲಿ ಟ್ರಂಪ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ, ಅಧ್ಯಕ್ಷ ಸ್ಥಾನಕ್ಕೆ ಬೈಡನ್ ಏರಲು ನೆರವಾಗಿದ್ದು ಕಮಲಾ ಹ್ಯಾರೀಸ್. ಆರಂಭದಲ್ಲಿ ನಾಮ ನಿರ್ದೇಶನದಿಂದ ಹಿಂದೆ ಸರಿಯಲು ಮುಂದಾಗಿದ್ದ ಸೆನೆಟರ್ ಕಮ್ ವಕೀಲೆಯನ್ನು ಹುರಿದುಂಬಿಸಿ ತಮ್ಮ ಜೊತೆಗೆ ರೇಸ್ ನಲ್ಲಿರುವಂತೆ ಬೈಡನ್ ಮಾಡಿದ್ದು ಇಂದು ಫಲ ನೀಡಿದೆ.
      ಕಮಲಾ ಹ್ಯಾರೀಸ್ ಅವರು ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಈ ಹುದ್ದೆಗೆ ಏರಿದ ಮೊದಲ ಮಹಿಳೆ, ಮೊದಲ ಭಾರತೀಯ ಮೂಲದ ಮಹಿಳೆ, ಮೊದಲ ಕಪ್ಪು ವರ್ಣೀಯ ಮಹಿಳೆ, ಮೊದಲ ದಕ್ಷಿಣ ಏಷ್ಯಾ ಮೂಲದ ಮಹಿಳೆ ಎನಿಸಿಕೊಂಡಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
     ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ, ಹೊಸ ಇತಿಹಾಸ ನಿರ್ಮಾಣ:

      ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ ಎಲ್ಲರ ಹುಬ್ಬೇರಿತ್ತು.

      ಹಿರಿಯ ಡೆಮಾಕ್ರೆಟಿಕ್ ಸೆನೆಟರ್ ಎನಿಸಿಕೊಂಡಿದ್ದರೂ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾದವರು ವಿರಳ. 2016ರಲ್ಲಿ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಭಾರಿ ಪೈಪೋಟಿ ನೀಡಿದರೂ ಸೋಲು ಕಾಣಬೇಕಾಯಿತು.

ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಮಹಿಳೆ: ಯಾರು ಈ ಕಮಲಾ ಹ್ಯಾರಿಸ್?.     ಆದರೆ 2020ರಲ್ಲಿ ಟ್ರಂಪ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ, ಅಧ್ಯಕ್ಷ ಸ್ಥಾನಕ್ಕೆ ಬೈಡನ್ ಏರಲು ನೆರವಾಗಿದ್ದು ಕಮಲಾ ಹ್ಯಾರೀಸ್. ಆರಂಭದಲ್ಲಿ ನಾಮ ನಿರ್ದೇಶನದಿಂದ ಹಿಂದೆ ಸರಿಯಲು ಮುಂದಾಗಿದ್ದ ಸೆನೆಟರ್ ಕಮ್ ವಕೀಲೆಯನ್ನು ಹುರಿದುಂಬಿಸಿ ತಮ್ಮ ಜೊತೆಗೆ ರೇಸ್ ನಲ್ಲಿರುವಂತೆ ಬೈಡನ್ ಮಾಡಿದ್ದು ಇಂದು ಫಲ ನೀಡಿದೆ.
        ಕಮಲಾ ಹ್ಯಾರೀಸ್ ಅವರು ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಈ ಹುದ್ದೆಗೆ ಏರಿದ ಮೊದಲ ಮಹಿಳೆ, ಮೊದಲ ಭಾರತೀಯ ಮೂಲದ ಮಹಿಳೆ, ಮೊದಲ ಕಪ್ಪು ವರ್ಣೀಯ ಮಹಿಳೆ, ಮೊದಲ ದಕ್ಷಿಣ ಏಷ್ಯಾ ಮೂಲದ ಮಹಿಳೆ ಎನಿಸಿಕೊಂಡಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

     ಎರಡು ದಶಕಗಳಿಂದ ಡೆಮಾಕ್ರಾಟಿಕ್ಸ್ ಪರ ಕಾರ್ಯ ನಿರ್ವಹಿಸಿರುವ ಕಮಲಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲೆಯ ಅಟರ್ನಿ ಹಾಗೂ ಕ್ಯಾಲಿಫೋರ್ನಿಯಾದ ಅಟರ್ನಿ ಜನರಲ್ ಆಗಿ ವೃತ್ತಿ ನಿಭಾಯಿಸಿ ನಂತರ ಯುಎಸ್ ಸೆನೆಟರ್ ಆದವರು. ಈಗ ಅಮೆರಿಕದಲ್ಲಿ ಚಾಲ್ತಿಯಲ್ಲಿರುವ black lives matter ಧ್ಯೇಯಕ್ಕೆ ತಕ್ಕಂತೆ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಮೇರಿ ಮೆಕ್ ಲೋಯಿಡ್ ಬೆಥುನೆ, ನಾಗರಿಕ ಹೋರಾಟಗಾರರಾದ ಫ್ಯಾನಿ ಲೋ ಹ್ಯಾಮರ್, ಶಿರ್ಲೆ ಶಿಶೋಲ್ ಅವರ ಮಾರ್ಗದಲ್ಲೇ ಸಾಗಿ ಇಂದು ಉನ್ನತ ಹುದ್ದೆಗೇರಿದ್ದಾರೆ.

ಕಮಲಾ ಹ್ಯಾರಿಸ್ ವೃತ್ತಿಯಲ್ಲಿ ವಕೀಲೆ

       ಕಮಲಾ ಹ್ಯಾರಿಸ್ ವೃತ್ತಿಯಲ್ಲಿ ವಕೀಲೆ. ಆದರೂ ರಾಜಕಾರಣದ ಬಗ್ಗೆ ಅವರಿಗಿರುವ ಜ್ಞಾನ ಹಾಗೂ ಹುಮ್ಮಸ್ಸು ಕಮಲಾ ಅವರನ್ನು ಪಕ್ಷಾತೀತ ಧೋರಣೆಯಿಂದ ನೋಡುವಂತೆ ಮಾಡಿದೆ. ಅಟಾರ್ನಿ ಜನರಲ್‌ ಆಗಿ ಮಹತ್ವದ ಹುದ್ದೆ ನಿಭಾಯಿಸಿರುವ ಕಮಲಾ ದೇವಿ ಹ್ಯಾರಿಸ್ ಸದ್ಯ ಕ್ಯಾಲಿಫೋರ್ನಿಯಾದ ಅಮೆರಿಕನ್ ಸೆನೆಟರ್. ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ, ಬಡತನದ ವಿರುದ್ಧ ಕಮಲಾ ಹ್ಯಾರಿಸ್ ದಶಕಗಳ ಕಾಲ ಹೋರಾಟ ನಡೆಸಿದವರು. ಇದೇ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವತಃ ಬೈಡೆನ್ ಕೂಡ ಕಮಲಾ ಅವರ ಸಮಾಜಸೇವೆಯನ್ನು ಹಾಡಿ ಹೊಗಳಿದ್ದಾರೆ.

ಅನುದಾನದ ಕೊರತೆ ಕಾರಣದಿಂದ ಹಿಂದೆ ಸರಿದಿದ್ದರು

     2020ರ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನಕ್ಕಾಗಿ ಕಮಲಾ ಹ್ಯಾರಿಸ್ ಮುಂಚೂಣಿಯಲ್ಲಿ ಪ್ರಚಾರ ನಡೆಸಿದ್ದರು. ಆದರೆ ಕೆಲವು ದಿನಗಳ ಬಳಿಕ 2019ರ ಡಿ. 3ರಂದು ಅನುದಾನದ ಕೊರತೆ ಕಾರಣದಿಂದ ಪ್ರಚಾರ ಕಾರ್ಯ ಮೊಟಕುಗೊಳಿಸಿದ್ದರು.

    ಡೆಮಾಕ್ರಟಿಕ್‌ನ ಆರಂಭದ ಪ್ರಚಾರ ಕಾರ್ಯಗಳಲ್ಲಿ ಅತ್ಯುತ್ತಮ ದರ್ಜೆಯ ಸ್ಪರ್ಧಿಗಳಲ್ಲಿ ಕಮಲಾ ಒಬ್ಬರೆನಿಸಿದ್ದರು. ಓಕ್ಲಾಂಡ್‌ನಲ್ಲಿ ನಡೆದ ಮೊದಲ ಪ್ರಚಾರ ಸಭೆಯಲ್ಲಿ ಸುಮಾರು 20,000 ಜನರನ್ನು ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ ಅವರ ಪ್ರಚಾರ ಪ್ರಾರಂಭದ ಭರವಸೆಗಳು ಮಸುಕಾಗಿದ್ದವು. ಅವರ ಹಿನ್ನೆಲೆ ಬಗ್ಗೆ ಅನೇಕರು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಮತದಾರರನ್ನು ಸೆಳೆಯಲು ಅಚಲ ಸಂದೇಶಗಳನ್ನು ರವಾನಿಸುವಲ್ಲಿ ಅವರು ವಿಫಲರಾಗಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries