HEALTH TIPS

ಫಾ. ಸ್ಟೇನ್ ಸ್ವಾಮಿ ಬಿಡುಗಡೆ ಒತ್ತಾಯಿಸಿ ಕೆಥೋಲಿಕ್ ಸಭಾದಿಂದ ಮೌನ ಪ್ರತಿಭಟನೆ

           ಕುಂಬಳೆ: ಯು ಎ ಪಿ ಎ    ಕಾಯ್ದೆಯಡಿ ಬಂಧಿತರಾಗಿರುವ ಫಾ. ಸ್ಟ್ಯಾನ್ ಸ್ವಾಮಿ ಬಿಡುಗಡೆಗೆ ಒತ್ತಾಯಿಸಿ ಕಥೊಲಿಕ್ ಸಭಾದ ನೇತೃತ್ವದಲ್ಲಿ ಮೌನ ಪ್ರತಿಭಟನೆ ನ ಸೀತಾಂಗೋಳಿ ಹಾಗೂ ಉಪ್ಪಳ ಜಂಕ್ಷನ್ ನಲ್ಲಿ ನಡೆಯಿತು.

         ಕಾಸರಗೋಡು ಪ್ರಾಂತ್ಯದ  ಕಥೊಲಿಕ್ ಸಭಾದ ಅಧ್ಯಕ್ಷ ವಿಲ್ಫ್ರೆಡ್ ಮನೋಹರ್ ಕ್ರಾಸ್ಟಾ, ಪ್ರತಿಭಟನೆಯ ನೇತೃತ್ವ ವಹಿಸಿದ್ದು, ''ಫಾ. ಸ್ಟ್ಯಾನ್ ಸ್ವಾಮಿ ಜಾಖರ್ಂಡ್ ಮತ್ತು ಬಿಹಾರದ ಬುಡಕಟ್ಟು ಪ್ರದೇಶಗಳಲ್ಲಿ ಶಿಕ್ಷಣದ ಹರಿಕಾರರಾಗಿದ್ದಾರೆ. ಅವರು ಬಡವರಿಗಾಗಿ ವಾಸಿಸುತ್ತಿದ್ದರು ಮತ್ತು ಬಡವರನ್ನು ಸಮಾಜದ ಮುಂಚೂಣಿಗೆ ತರಲು ಶ್ರಮಿಸಿದರು. ದಲಿತರು ಮತ್ತು ಇತರ ಹಿಂದುಳಿದ ಸಮುದಾಯಗಳ ಶೋಷಣೆಯ ವಿರುದ್ಧ ಅವರು ಧ್ವನಿ ಎತ್ತಿದರು. ಶಿಕ್ಷಣತಜ್ಞರಾಗಿ ಅವರು ಬಡವರಿಗೆ ಶಿಕ್ಷಣವನ್ನು ಒದಗಿಸಿದರು. ಹಳ್ಳಿಗಳಿಗೆ ಹೊಸ ಆಯಾಮವನ್ನು ನೀಡಿದರು. ಫಾ. ಸ್ಟ್ಯಾನ್ ಅವರು ಹಿಂದುಳಿದ ಬುಡಕಟ್ಟು ಜನಾಂಗದವರ ಉನ್ನತಿಗೆ ವಿರುದ್ಧವಾದವರೊಂದಿಗೆ ಕೈ ಜೋಡಿಸಲು ಮುಂದಾಗಲಿಲ್ಲ.  ಈ ಹಿನ್ನೆಲೆ ಅವರು ಭೀಮಾ-ಕೊರೆಗಾಂವ್ ಗಲಭೆಯಲ್ಲಿ ಇದ್ದಾರೆ, ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ, ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರನ್ನು ಸರ್ಕಾರ ಬಂಧಿಸಿದೆ. ಪೋಲೀಸರು ಅವರ ವಿರುದ್ಧ ಯಾವುದೇ ಪುರಾವೆಗಳನ್ನು ಒಟ್ಟುಗೂಡಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ಇನ್ನೂ, ಅವರನ್ನು ಜೈಲಿನಲ್ಲಿರಿಸಲಾಗಿದೆ. ಇದು ಖಂಡನೀಯ ಮತ್ತು ಸರ್ಕಾರದ ಇಂತಹ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ವಿರೋಧಿಸುವ ಹಕ್ಕು ನಮಗಿದೆ'' ಎಂದು ಹೇಳಿದರು. 

         ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಚಿಂತಕ ಹಾಗೂ  ಶಿಕ್ಷಣ ತಜ್ಞ ಸುಧೀರ್ ಮಾಸ್ತರ್ ಅವರು, "ಭಾರತದ ಉತ್ತರ ಭಾಗಗಳಲ್ಲಿ ಸಾವಿರಾರು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡಿದ ಫಾ. ಸ್ಟ್ಯಾನ್ ಸ್ವಾಮಿ ಬಂಧನದ ಹಿಂದಿನ ಕಾರಣವನ್ನು ತಿಳಿಯಲು ನಾವು ಇಲ್ಲಿ ಒಟ್ಟುಗೂಡಿದ್ದೇವೆ. ತಮಿಳುನಾಡಿನಲ್ಲಿ ಜನಿಸಿದ ಫಾ. ಸ್ಟ್ಯಾನ್ ಸ್ವಾಮಿ ಅವರು ಕರ್ನಾಟಕ, ಬಿಹಾರ ಜಾಖರ್ಂಡ್‍ನ ಕೆಲವು ಭಾಗಗಳಲ್ಲಿ ಧಾರ್ಮಿಕ ಮಿಷನರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೂರು ತಿಂಗಳ ಹಿಂದೆ ಎನ್‍ಐಎ ಅವರನ್ನು ರಾಂಚಿ ಬಳಿಯ ಹಳ್ಳಿಯಿಂದ ಬಂಧಿಸಿತ್ತು. ಇದು ಫಾ. ಸ್ಟ್ಯಾನ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ತಿಳಿದಿರುವ ನಮಗೆಲ್ಲರಿಗೂ ಆಘಾತವನ್ನುಂಟು ಮಾಡಿದೆ. ಅವರು ಯಾವಾಗಲೂ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಅವರು ವಿದ್ಯಾವಂತ ಭಾರತದ ಕನಸು ಕಂಡವರು. ಹಳ್ಳಿಗಳ ಅಭಿವೃದ್ಧಿಗಾಗಿ  ಶ್ರಮಿಸಿದವರು. ಈಗ, ಸರ್ಕಾರವು ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ಜೈಲಿನಲ್ಲಿರಿಸಿದೆ'' ಎಂದು ಆರೋಪಿಸಿದರು. 

      ''ಫಾ. ಸ್ಟ್ಯಾನ್ ಸ್ವಾಮಿ ಮತ್ತು ಇತರ ಬುದ್ಧಿಜೀವಿಗಳ ಬಂಧನ ಸಂವಿಧಾನ ಹಾಗೂ ನಮ್ಮ 'ಅಶೋಕ ಸ್ತಂಭ'ದಲ್ಲಿ ಬರೆಯಲಾದ 'ಸತ್ಯಮೇವ ಜಯತೇ' ಪದಕ್ಕೆ ವಿರುದ್ಧವಾದುದ್ದು. ಇವರನ್ನು ಬಂಧಿಸುವ ಮೂಲಕ ಸರ್ಕಾರವು ಎಲ್ಲಾ ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ಸಾಮಾಜಿಕ ಸುಧಾರಣೆಗಳಲ್ಲಿ ಭಾಗಿಯಾಗಿರುವವರಿಗೆ ಎಚ್ಚರಿಕೆ ನೀಡಲು ಬಯಸಿದೆ. ಪ್ರಜಾಪ್ರಭುತ್ವ ದೇಶದಲ್ಲಿ, ಇದು ಸ್ವೀಕಾರಾರ್ಹವಲ್ಲ ಮತ್ತು ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ಫಾ. ಸ್ಟ್ಯಾನ್ ಸ್ವಾಮಿ ಮತ್ತು ಇತರರಿಗೆ ಬೆಂಬಲ ಸೂಚಿಸಿ ಇಲ್ಲಿಗೆ ಬಂದ ಜನರಿಗೆ ನಾವು ಋಣಿಗಳು. ಇದು ಪ್ರಾರಂಭ, ನಾವು ಇಲ್ಲಿಗೆ ಹೋರಾಟ ಕೊನೆಗೊಳಿಸುವುದಿಲ್ಲ. ಮುಂಬರುವ ದಿನಗಳಲ್ಲಿ ನಾವು ಬಿಡುಗಡೆಯಾಗುವವರೆಗೂ ಪ್ರತಿಭಟನೆ ನಡೆಸುತ್ತೇವೆ'' ಎಂದು ಅವರು ಹೇಳಿದರು.


        ಫಾ. ಜಾನ್ ವಾಸ್, ಫಾ. ಜೆ ಬಿ ಕ್ರಾಸ್ತಾ ಹಾಗೂ ನೂರಾರು ಬೆಂಬಲಿಗರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಾಜು ಸ್ಟೀಫನ್ ಕುಂಬಳೆ, ಕಥೊಲಿಕ್ ಸಭಾದ ನಾಮನಿರ್ದೇಶಿತ ಅಧ್ಯಕ್ಷ ಫಾ. ಫ್ರಾನ್ಸಿಸ್, ವೃತ್ತ ಪೋಲೀಸ್ ಇನ್ಸ್‍ಪೆಕ್ಟರ್ ಬಾಬು ಥಾಮಸ್, ಯೇಸು ಪ್ರಸಾದ್, ರಾಜ್ ಕುಮಾರ್ ಅವರು ಉಪ್ಪಳದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. 

      ಕಾಯ್ದೆಯಡಿ ಬಂದಿಸಲ್ಪಟ್ಟ ಸಾಮಾಜಿಕ ಕಾರ್ಯಕರ್ತ 84 ವರ್ಷ ಪ್ರಾಯದ ಫಾ. ಸ್ಟೇನ್ ಸ್ಟೇನ್ ಸ್ವಾಮಿಯವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಕಥೊಲಿಕ್ ಸಭಾ ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಉಪ್ಪಳ ಹಾಗೂ ಸೀತಾಂಗೋಳಿ ಪೇಟೆಯಲ್ಲಿ ಮೌನ ಪ್ರತಿಭಟನೆ ನಡೆಯಿತು. ಉಪ್ಪಳದಲ್ಲಿ ನಡೆದ ಪ್ರತಿಭಟನೆಯನ್ನು ನಿವೃತ್ತ ಪೋಲಿಸ್ ಅಧಿಕಾರಿ ಬಾಬು ಥೋಮಸ್ ಉದ್ಘಾಟಿಸಿ ಮಾತನಾಡಿ ಧಮನಿತರ ಪರ ಧ್ವನಿ ಎತ್ತುವವರನ್ನು ದೇಶದ್ರೋಹಿಗಳನ್ನಾಗಿ ಬಿಂಬಿಸುವ ಸ್ಥಿತಿ ಇಂದು ನಡೆಯುತ್ತಿದೆ ಎಂದು ತಿಳಿಸಿದರು. ಸೀತಾಂಗೋಳಿಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ಅಧ್ಯಾಪಕ ಸುಧೀರ್ ಮಾಸ್ತರ್ ಮಾತನಾಡಿ ಫಾ. ಸ್ಟೇನ್ ಸ್ವಾಮಿ ಮಾಡಿದ ತಪ್ಪಾದರೂ ಏನು? ಆದಿವಾಸಿಗಳೊಂದಿಗೆ ಬೆರೆದದ್ದು, ಅವರ ಹಕ್ಕುಗಳಿಗಾಗಿ ಹೋರಾಡಿದ್ದು ತಪ್ಪೇ? ಸತ್ಯವು ಎಂದೂ ಸೋಲದು ಎಂದು ತಿಳಿಸಿದರು. ಉಪ್ಪಳದಲ್ಲಿ ನಡೆದ ಪ್ರತಿಭಟನೆಗೆ ರಾಜು ಸ್ಟೀಫನ್  ಕುಂಬಳೆ  ಹಾಗೂ ಸೀತಾಂಗೋಳಿಯಲ್ಲಿ ನಡೆದ ಪ್ರತಿಭಟನೆಗೆ ವಿಲ್ಫ್ರೆಡ್ ಮನೋಹರ್ ನೇತೃತ್ವ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries