HEALTH TIPS

ಕುಟುಂಬ ಪಿಂಚಣಿ ₹ 1.25 ಲಕ್ಷಕ್ಕೆ ಏರಿಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

         ನವದೆಹಲಿ: ತಿಂಗಳಿಗೆ ₹ 45 ಸಾವಿರ ನಿಗದಿಪಡಿಸಲಾಗಿದ್ದ ಕುಟುಂಬ ಪಿಂಚಣಿಯನ್ನು ₹ 1.25 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

         ಈ ಪಿಂಚಣಿ ಸುಧಾರಣೆಯು ಮೃತ ನೌಕರರ ಕುಟುಂಬ ಸದಸ್ಯರಿಗೆ ಸಾಕಷ್ಟು ಆರ್ಥಿಕ ಭದ್ರತೆ ನೀಡಲಿದೆ. ಜತೆಗೆ ಅವರ ಜೀವನಮಟ್ಟವನ್ನೂ ಉತ್ತಮಪಡಿಸಲಿದೆ ಎಂದು ಅವರು ಹೇಳಿದ್ದಾರೆ.

ಒಂದು ಮಗು ತನ್ನ ಹೆತ್ತವರ ಮರಣದ ನಂತರ ಎರಡು ಕುಟುಂಬ ಪಿಂಚಣಿ ಪಡೆಯಲು ಅರ್ಹತೆ ಹೊಂದಿದ್ದರೆ ಆ ಮಗು ಪಡೆಯುವ ಮೊತ್ತವನ್ನು ಈಗ ತಿಂಗಳಿಗೆ ₹ 1,25,000ರವರೆಗೆ ಸೀಮಿತಗೊಳಿಸಲಾಗಿದೆ. ಇದು ಈ ಹಿಂದಿನ ಮಿತಿಗಿಂತ ಎರಡೂವರೆ ಪಟ್ಟು ಹೆಚ್ಚು ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವರೂ ಆದ ಸಿಂಗ್ ಹೇಳಿದ್ದಾರೆ.

        ಕೇಂದ್ರ ನಾಗರಿಕ ಸೇವೆಗಳ (ಸಿಸಿಎಸ್‌) (ಪಿಂಚಣಿ) ನಿಯಮಗಳು 1972ರ ನಿಯಮ 54ರ ಉಪ-ನಿಯಮ (11)ರ ಪ್ರಕಾರ, ಪತ್ನಿ ಮತ್ತು ಪತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಅವರ ಮರಣದ ನಂತರ ಮಗು ಎರಡು ಕುಟುಂಬ ಪಿಂಚಣಿ ಪಡೆಯಲು ಅರ್ಹವಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries