HEALTH TIPS

ಉತ್ತರಾಖಂಡ ಹಿಮಸ್ಫೋಟ: 19 ಮೃತದೇಹ ವಶಕ್ಕೆ, 48 ಗಂಟೆ ಕಾಲ ಪರಿಹಾರ ಕಾರ್ಯ ಮುಂದುವರಿಕೆ- ಎನ್‌ಡಿಆರ್‌ಎಫ್

          ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ಘಟನಾ ಸ್ಥಳದ ಸಮೀಪದಲ್ಲಿ ಕನಿಷ್ಠ 19 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಘಟನೆಯಲ್ಲಿ 200 ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ಸೋಮವಾರ ಪ್ರವಾಹದ ನಂತರದ ರಕ್ಷಣಾ ಕಾರ್ಯಾಚರಣೆಯನ್ನು 48 ಗಂಟೆಗಳ ಕಾಲ ಮುಂದುವರಿಸಬಹುದು ಎಂದು ತಿಳಿಸಿದೆ.

          ಘಟನಾ ಸ್ಥಳದಲ್ಲಿ ಸಮಸ್ಯೆ ಇದೆ, ಏಕೆಂದರೆ ಇದು ದುರ್ಗಮ ಭೂಪ್ರದೇಶವಾಗಿದೆ. ರಸ್ತೆಯ ಮೂಲಕ ಕೇವಲ ಎರಡು ತಂಡಗಳು ಜೋಶಿಮಠವನ್ನು ತಲುಪಲು ಸಾಧ್ಯವಾಯಿತು, ಉಳಿದ ತಂಡಗಳನ್ನು ವಿಮಾನದಲ್ಲಿ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ 24-48 ಗಂಟೆಗಳು ಬೇಕಾಗಬಹುದು" ಎನ್‍ಡಿಆರ್‍ಎಫ್‍ನ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್  ಎಎನ್‍ಐಗೆ ತಿಳಿಸಿದರು. ಎನ್‍ಡಿಆರ್‍ಎಫ್ ತಂಡಗಳ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸ್ವಾತಿ ಭಧೋರಿಯಾ ತಿಳಿಸಿದ್ದಾರೆ.

     "ವಿವಿಧ ಸಾಧನಗಳನ್ನು ತಂದಿರುವ ಎನ್‍ಡಿಆರ್‍ಎಫ್ ತಂಡಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ, ಇದರಿಂದಾಗಿ ನಾವು ಕಂದಕದಲ್ಲಿ ಸಿಲುಕಿರುವ ಜನರನ್ನು ತಲುಪಬಹುದು" ಎಂದು ಅವರು ಎಎನ್‍ಐಗೆ ತಿಳಿಸಿದರು. ಸೇತುವೆ ಒಡೆದ ಪರಿಣಾಮ ಹಾನಿಗೊಳಗಾದ ಗ್ರಾಮಗಳನ್ನೂ ರಕ್ಷಣಾ ತಂಡಗಳು ತಲುಪಲಿವೆ. "ಸೇತುವೆ ಒಡೆದು ಹೋದ ಕಾರಣ ಹಾನಿಗೊಳಗಾದ 13 ಗ್ರಾಮಗಳಲ್ಲಿ ನಾವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅವರಿಗೆ ಆಹಾರ ಮತ್ತು ವೈದ್ಯಕೀಯ ನೆರವು ನೀಡುತ್ತೇವೆ" ಎಂದು ಭಧೋರಿಯಾ ಹೇಳಿದರು.

          ಏತನ್ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಸ್ಥಿತಿಯನ್ನು ಆಗಾಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೆÇೀಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾವು ಸಂಪರ್ಕ ಕೇಂದ್ರದಿಂದ ನಿರಂತರವಾಗಿ ನಿರ್ದೇಶನಗಳನ್ನು ಸ್ವೀಕರಿಸುತ್ತಿದ್ದೇವೆ. ಗೃಹ ಸಚಿವ ಅಮಿತ್ ಶಾ ಅವರು ಪ್ರತಿ ಅರ್ಧಗಂಟೆಗೊಮ್ಮೆ  ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ" ಎಂದು ಪೆÇೀಖ್ರಿಯಾಲ್ ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries