HEALTH TIPS

ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ

            ನವದೆಹಲಿ: ಜಗತ್ತಿನ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೆಲಸದ ಅವಧಿ ಗರಿಷ್ಠ ಪ್ರಮಾಣದಲ್ಲಿದೆ. . ಕಾರ್ಯಾವಧಿ ನಡುವೆ ವಿರಾಮದ ಅವಧಿಯೂ ಅಲ್ಪ, ಕನಿಷ್ಠ ವೇತನದ ಪ್ರಮಾಣವೂ ಕಡಿಮೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ವರದಿಯಲ್ಲಿ ಹೇಳಲಾಗಿದೆ. ಅದು 2020-21ರ ಅವಧಿಯಲ್ಲಿ ಜಗತ್ತಿನ ಯಾವ್ಯಾವ ದೇಶಗಳಲ್ಲಿ, ನೌಕರರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅಧ್ಯಯನ ಮಾಡಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ವಾರಕ್ಕೆ ಕೆಲಸದ ಅವಧಿಯನ್ನು 48 ಗಂಟೆಗಳವರೆಗೆ ವಿಸ್ತರಿಸಬಹುದು. ಈ ದೇಶಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌, ಕತಾರ್‌, ಮಂಗೋಲಿಯ, ಜಾಂಬಿಯ ದೇಶಗಳಲ್ಲಿ ಮಾತ್ರ ಕೆಲಸದ ಅವಧಿ ಜಾಸ್ತಿಯಿದೆ ಎಂದು ಐಎಲ್‌ಒ ವರದಿಯಲ್ಲಿ ಹೇಳಲಾಗಿದೆ.

         ಐಎಲ್‌ಒ ಸಲ್ಲಿಸಿದ “ಕೊರೊನಾ ಅವಧಿಯಲ್ಲಿ ವೇತನ ಮತ್ತು ಕನಿಷ್ಠ ವೇತನ’ ವರದಿಯಲ್ಲಿ ಮೇಲಿನ ಮಾಹಿತಿಗಳು ಅಡಕವಾಗಿವೆ.2019ರಲ್ಲಿ ನಡೆದ ಅಧ್ಯಯನವೊಂದರಲ್ಲೂ ಇಂತಹದ್ದೇ ಮಾಹಿತಿ ಪ್ರಕಟವಾಗಿತ್ತು. ಗ್ರಾಮೀಣ ಮತ್ತು ನಗರ ಭಾಗಗಳೆರಡಲ್ಲೂ ಪುರುಷರು ಮಹಿಳೆಯರಿಗಿಂತ ದೀರ್ಘಾವಧಿ ದುಡಿಯುತ್ತಾರೆ. ಇಬ್ಬರನ್ನೂ ಪರಿಗಣಿಸಿದರೆ ನಗರಪ್ರದೇಶದಲ್ಲಿ ಕೆಲಸದ ಅವಧಿ ಜಾಸ್ತಿ ಎಂದು ಐಎಲ್‌ಒ ವರದಿಯಲ್ಲಿ ಹೇಳಲಾಗಿದೆ.

         ಬೇರೆ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ?: 

    ಚೀನದಲ್ಲಿ ವ್ಯಕ್ತಿಯೊಬ್ಬ ವಾರದಲ್ಲಿ ಸರಾಸರಿ 46 ಗಂಟೆಗಳ ಕಾಲ ದುಡಿಯುತ್ತಾನೆ. ಅಮೆರಿಕದಲ್ಲಿ 37 ಗಂಟೆ, ಇಂಗ್ಲೆಂಡ್‌ ಮತ್ತು ಇಸ್ರೇಲ್‌ನಲ್ಲಿ 36 ಗಂಟೆಗಳ ಕಾಲ ದುಡಿಯುತ್ತಾನೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries