ಹಿಮಾಚಲ : ಹಿಮಾಚಲ ಪ್ರದೇಶದಲ್ಲಿ ಇಂದು ಮಧ್ಯಾಹ್ನ 3.49ಕ್ಕೆ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 3.2 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಭಾರತೀಯ ಮೆಟ್ರೊಲಾಜಿಕಲ್ ಡಿಪಾರ್ಟ್ ಮೆಂಟ್ (ಐಎಂಡಿ) ಪ್ರಕಾರ, ಭೂಕಂಪದ ಕೇಂದ್ರ ಬಿಂದು ಹಿಮಾಚಲ ಪ್ರದೇಶದ ಬಿಲಾಸ್ ಪುರ್ ನಲ್ಲಿದೆ ಎಂದು ಹೇಳಲಾಗಿದೆ.
ಭೂಕಂಪದ ಆಳವನ್ನು 10ಕಿ.ಮೀ ಎಂದು ಅಳೆಯಲಾಗಿತ್ತು. ಎರಡು ದಿನಗಳ ಹಿಂದೆ ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ತಡರಾತ್ರಿ ತಜಿಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ದೆಹಲಿ-ಎನ್ ಸಿಆರ್ ಮತ್ತು ಉತ್ತರಾಖಂಡದಲ್ಲಿ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪದ ಅನುಭವವಾಗಿದೆ.