HEALTH TIPS

ಮಂಗಳ ಗ್ರಹದ ಈ ಹೊಸ ಚಿತ್ರ ನೋಡಿದ್ದೀರಾ ?!

         ಅಬು ದಾಭಿ: ಮಂಗಳ ಗ್ರಹದಲ್ಲಿ ಜೀವಿಗಳ ಅಸ್ತಿತ್ವ ಇತ್ತಾ ಎಂಬ ಮಾನವರ ಅನ್ವೇಷಣೆಗೆ ಈಗ ಮತ್ತಷ್ಟು ಇಂಬು ಸಿಕ್ಕಿದೆ. ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಇತ್ತೀಚೆಗೆ ಹಾರಿಬಿಟ್ಟಿರುವ 'ಹೋಪ್ ಪ್ರೋಬ್'​ ಅಧ್ಯಯನ ಸಾಟಲೈಟ್ ಇದೀಗ ಮಂಗಳ ಗ್ರಹದ ತನ್ನ ಮೊದಲ ಚಿತ್ರಣವನ್ನು ಜಗತ್ತಿಗೆ ಶೇರ್ ಮಾಡಿದೆ.


          ಎಮಿರಾತಿ ಇಂಜಿನಿಯರ್​ಗಳು ನಿರ್ಮಿಸಿರುವ 'ಅಮಲ್​' ಅಥವಾ 'ಹೋಪ್' ಪ್ರೋಬ್​ಅನ್ನು 2020ರ ಜುಲೈ 20 ರಂದು ಜಪಾನಿನ ತಾನೆಗಶಿಮದಿಂದ ಲಾಂಚ್ ಮಾಡಲಾಗಿತ್ತು. ಮಂಗಳ ಗ್ರಹದ ಆರ್ಬಿಟ್​ಅನ್ನು ಫೆಬ್ರವರಿ 9 ರಂದು ಇದು ಯಶಸ್ವಿಯಾಗಿ ಪ್ರವೇಶಿಸಿತ್ತು. ಇಂದು(ಫೆಬ್ರವರಿ 14) ಈ ಹೋಪ್ ಪ್ರೋಬ್​ನ ಮೊದಲ ಚಿತ್ರವನ್ನು, ಯುಎಇ ಸೇನಾ ಪಡೆಗಳ ಡೆಪ್ಯುಟಿ ಸುಪ್ರೀಂ ಕಮಾಂಡರ್ ಆಗಿರುವ ಅಬು ದಾಭಿ ರಾಜಕುಮಾರ ಶೇಖ್ ಮೊದಮದ್ ಬಿನ್ ಜಯೆದ್​ ಅಲ್ ನಹ್ಯನ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

          ಫೆಬ್ರವರಿ 10 ರಂದು ತೆಗೆಯಲಾಗಿರುವ ಈ ಚಿತ್ರದಲ್ಲಿ ಸೂರ್ಯನ ಬೆಳಕು ಮಂಗಳ ಗ್ರಹದ ಮೇಲೆ ಆಗಷ್ಟೇ ಬೀಳುತ್ತಿರುವುದನ್ನು ಕಾಣಬಹುದು. ಗ್ರಹದ ಉತ್ತರ ಧೃವವನ್ನೂ ಅಲ್ಲಿನ ಅತಿದೊಡ್ಡ ಅಗ್ನಿಪರ್ವತ ಎನ್ನಲಾದ ಒಲಂಪಸ್ ಮಾನ್ಸ್​ ಅನ್ನೂ ಈ ಚಿತ್ರ ತೋರಿಸುತ್ತದೆ ಎನ್ನಲಾಗಿದೆ.

'ಹೋಪ್ ಪ್ರೋಬ್​ನ ಮೊದಲ ಚಿತ್ರದ ಪ್ರಸಾರವು ನಮ್ಮ ಇತಿಹಾಸದಲ್ಲಿ ವಿಶೇಷ ಕ್ಷಣವಾಗಿದೆ. ಇದು ಬಾಹ್ಯಾಕಾಶದ ಪರಿಶೋಧನೆಯಲ್ಲಿ ತೊಡಗಿರುವ ಮುಂದುವರಿದ ರಾಷ್ಟ್ರಗಳ ಸಾಲನ್ನು ಯುಎಇ ಸೇರಿರುವುದರ ಸೂಚನೆ. ಈ ಮಿಷನ್​ನಿಂದ ಮಂಗಳ ಗ್ರಹದ ಬಗ್ಗೆ ಹೊಸ ಆವಿಷ್ಕಾರಗಳು ನಡೆದು ಮಾನವ ಜನಾಂಗಕ್ಕೆ ಉಪಯೋಗವಾಗಲಿದೆ ಎಂದು ನಾವು ಆಶಿಸುತ್ತೇವೆ' ಎಂದು ಶೇಖ್ ಮೊಹಮದ್ ಟ್ವೀಟ್ ಮಾಡಿದ್ದಾರೆ.

      ಒಂದು ದೊಡ್ಡ ಕಾರಿನ ಗಾತ್ರವಿರುವ ಈ ಹೋಪ್ ಪ್ರೋಬ್​, ಮಂಗಳ ಗ್ರಹದ ಇಕ್ವೇಟಾರ್ ಅನ್ನು ಸುತ್ತಲಿದ್ದು, ಪ್ರತಿ ಒಂಭತ್ತು ದಿನಗಳಿಗೊಮ್ಮೆ ಗ್ರಹದ ಪೂರ್ಣ ಚಿತ್ರಣವನ್ನು ಪಡೆಯಲಿದೆ. ಮೂರು ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳನ್ನು ಬಳಸಿ, ಗ್ರಹದ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಒಂದು ಸಾವಿರ ಜಿಬಿಗೂ ಹೆಚ್ಚು ಡೇಟಾವನ್ನು ಸಂಗ್ರಹಿಸುವ ಯೋಜನೆ ಇದ್ದು, ಈ ಮಾಹಿತಿಯನ್ನು ಜಗತ್ತಿನ 200 ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳಿಗೆ ಉಚಿತವಾಗಿ ಶೇರ್ ಮಾಡಲಾಗುವುದು ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries