ಪೆರ್ಲ:ತಮಿಳ್ನಾಡು ಗಡಿ ಕೇರಳದ ಇಡುಕ್ಕಿ ಜಿಲ್ಲೆಯ ಕುಮಳಿಯಿಂದ ಎರ್ನಾಕುಳಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳನ್ನು ಸಂಪರ್ಕಿಸುವ ಕೆ.ಎಸ್.ಆರ್.ಟಿ.ಸಿ. ಸೂಪರ್ ಫಾಸ್ಟ್ ಬಸ್ ಗೆ ಸೋಮವಾರ ಕುಮಳಿಯಿಂದ ಸಂಚಾರ ಆರಂಭಿಸಿದ್ದು ಮಂಗಳವಾರ ಮಧ್ಯಾಹ್ನ ಪೆರ್ಲ ತಲಪಿದಾಗ ಎಣ್ಮಕಜೆ ಪಂಚಾಯಿತಿ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಘಟಕ ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಎಣ್ಕಕಜೆ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಬಸ್ ಚಾಲಕ, ವ್ಯಾಪಾರಿ ಸಮಿತಿ ಅಧ್ಯಕ್ಷ ಬಿ.ಕೃಷ್ಣ ಪೈ ರಹದಾರಿ ಅನುಮತಿಸಿದ ರಹದಾರಿ ನಿರ್ದೇಶಕ ಕುಮಾರನ್ ಅವರಿಗೆ ಮತ್ತು ವ್ಯಾಪಾರಿ ಸಮಿತಿ ಮಾಜಿ ಅಧ್ಯಕ್ಷ ಬಿ.ಅಬ್ದುಲ್ ರಹಿಮಾನ್ ಬಸ್ ನಿರ್ವಾಹಕರಿಗೆ ಶಾಲು ಹೊದೆಸಿ ಸ್ವಾಗತಿಸಿದರು.
ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್ ಅಡ್ಕಸ್ಥಳ ಸ್ವರ್ಗ ವಾರ್ಡ್ ಸದಸ್ಯ ರಾಮಚಂದ್ರ ಎಂ., ಮಾಜಿ ಸದಸ್ಯೆ ಆಯಿಷಾ ಎ.ಎ., ಮಾಜಿ ಬ್ಲಾಕ್ ಪಂಚಾಯಿತಿ ಸದಸ್ಯ ರಾಮಕೃಷ್ಣ ರೈ ಕುದ್ವ, ವ್ಯಾಪಾರಿ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಕೆ ಎಸ್ ಆರ್ ಟಿಸಿಯ ಈ ಸೇವೆ ಪ್ರವಾಸಿಗರು ಮತ್ತು ವಲಸಿಗರಿಗೆ ಪ್ರಯೋಜನವಾಗುವುದಲ್ಲದೆ ಬೆಳಗ್ಗೆ 6 ಗಂಟೆಗೆ ಬದಿಯಡ್ಕ ತಲಪುವ ಹಿನ್ನೆಲೆಯಲ್ಲಿ ಕರ್ನಾಟಕದ ವಿಟ್ಲ, ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ, ಧರ್ಮಸ್ಥಳ, ಕಡಬ, ಸುಬ್ರಹ್ಮಣ್ಯ, ಕೊಲ್ಲೂರು ಮೊದಲಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲು ಸುಲಭ ಸಾಧ್ಯವಾಗಲಿದೆ.
ಕುಮಳಿಯಿಂದ ಕಟ್ಟಪ್ಪನ, ಇಡುಕ್ಕಿ, ಚೆರುತೋಣಿ, ನೇರ್ಯಮಂಗಲಂ, ಕೋತಮಂಗಲಂ, ಅಂಗಮಾಲಿ, ತ್ರಿಶೂರ್, ಕೋಝಿಕ್ಕೋಡ್, ಕಣ್ಣೂರು, ಆಲಕ್ಕೋಡ್, ಚೆರುಪುಯ, ವಳ್ಳರಿಕುಂಡು, ಒಡಯಂಚಾಲ್, ಚುಳ್ಳಿಕ್ಕರ, ಕುಟ್ಟಿಕ್ಕೋಲ್, ಬೋವಿಕ್ಕಾನ, ಮುಳ್ಳೇರಿಯ, ಬದಿಯಡ್ಕ ದಾರಿಯಾಗಿ ಪೆರ್ಲ ತಲಪಲಿದ್ದು ಮಲಬಾರ್ ಪ್ರದೇಶದವರಿಗೆ ಪ್ರಯೋಜನ ಲಭಿಸಲಿದೆ.
ಕುಮುಳಿಯಿಂದ ಮಧ್ಯಾಹ್ನ 1ಗಂಟೆಗೆ ಯಾನ ಆರಂಭಿಸುವ ಬಸ್ 2 ಗಂಟೆಗೆ ಕಟ್ಟಪ್ಪನ, ಸಂಜೆ 5ಕ್ಕೆ ಕೋತಮಂಗಲಂ, ರಾತ್ರಿ 07.10ಕ್ಕೆ ತ್ರಿಶೂರ್, 10.30ಕ್ಕೆ ಅ ಕೋಝಿಕ್ಕೋಡ್, 1.15ಕ್ಕೆ ಕಣ್ಣೂರು, 3ಗಂಟೆಗೆ ಚೆರುಪುಯ ಹಾಗೂ ಬೆಳಗ್ಗೆ 6.10 ಕ್ಕೆ ಪೆರ್ಲ ತಲುಪಲಿದೆ.
ಪೆರ್ಲದಿಂದ ಸಂಜೆ 5.30ಕ್ಕೆ ನಿರ್ಗಮಿಸಿ, ರಾತ್ರಿ 8.30ಕ್ಕೆ ಚೆರುಪುಳ(ನಿಖರವಾಗಿಲ್ಲ), ರಾತ್ರಿ 10.20ಕ್ಕೆ ಕಣ್ಣೂರು, ಮುಂಜಾನೆ 5ಕ್ಕೆ ತ್ರಿಶೂರ್, ಬೆಳಗ್ಗೆ 7ಕ್ಕೆ ಕೋತಮಂಗಲಂ 9ಕ್ಕೆ ಚೆರುಪುಯ, 10ಕ್ಕೆ ಕಟ್ಟಪ್ಪನ ಹಾಗೂ10.45ಕ್ಕೆ ಕುಮಳಿ ತಲುಪಲಿದೆ.






