HEALTH TIPS

ಚುನಾವಣೆ: ರಾಜ್ಯದಲ್ಲಿ ಅತಿಸೂಕ್ಷ್ಮ ಪ್ರದೇಶಗಳನ್ನು ನಿಯಂತ್ರಿಸಲು ಕೇಂದ್ರ ಸೇನೆ ಆಗಮನ

                      

          ಕೊಚ್ಚಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲು ಕೇಂದ್ರ ಸೇನೆ ರಾಜ್ಯಕ್ಕೆ ಆಗಮಿಸಿದೆ. ಮೊದಲ ಹಂತದಲ್ಲಿ 30 ಘಟಕಗಳು ಆಗಮಿಸಿವೆ. ವಿವಿಧ ಜಿಲ್ಲೆಗಳಲ್ಲಿ ಪೀಡಿತ ಪ್ರದೇಶಗಳನ್ನು ತಲುಪಲು ರಾಜ್ಯ ಚುನಾವಣಾ ಆಯೋಗವು ಕೇಂದ್ರ ಸೇನೆಯ 125 ಘಟಕಗಳನ್ನು ಕೋರಿತ್ತು. ಅದರಲ್ಲಿ 30 ಘಟಕಗಳು ಈಗ ಬಂದಿವೆ. ಕೇಂದ್ರ ಸೇನೆಯು ಎರ್ನಾಕುಳಂ ಉತ್ತರ ಪರವೂರ್ ಮತ್ತು ಕುನ್ನತ್ತುನಾಡಿನಲ್ಲಿ ಸಾರ್ವಜನಿಕ ಮೆರವಣಿಗೆ ನಡೆಸಿತು.


        ಎಸ್.ಡಿ.ಪಿ.ಐ ಗುಂಪು ನಿನ್ನೆ ರಾತ್ರಿ ಎರ್ನಾಕುಳಂನ ಉತ್ತರ ಪರಾವೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿತ್ತು. ಕೆ. ಸುರೇಂದ್ರನ್ ಅವರ ವಿಜಯ ಮೆರವಣಿಗೆಗೆ ಸಂಬಂಧಿಸಿದಂತೆ ಧ್ವಜವನ್ನು ಹಾರಿಸಿದ ವಿವಾದದಿಂದಾಗಿ ಈ ದಾಳಿಗೆ ಕಾರಣವಾಗಿತ್ತು. ನಾಲ್ವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದರು. ಹೆಚ್ಚಿನ ತೊಂದರೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಕೇಂದ್ರ ಸೇನೆಯು ಸಾರ್ವಜನಿಕವಾಗಿ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿತು.

      ಸಿ.ಆರ್.ಪಿ.ಎಫ್, ಐಟಿಬಿಪಿ ಮತ್ತು ಸಿ.ಐ.ಎಸ್.ಎಫ್ ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ಈ ಹಿಂದೆ ಮುಖ್ಯ ಚುನಾವಣಾ ಅಧಿಕಾರಿ ಟೀಕರಾಮ್ ಮೀನಾ ಅವರು ಕೇರಳ ಪೋಲೀಸರ ಸೇವೆಗಳನ್ನು ಪೀಡಿತ ಬೂತ್‍ಗಳಿಂದ ತೆಗೆದುಹಾಕಲಾಗುವುದು ಎಂದು ಹೇಳಿದ್ದರು. ಕಳೆದ ಚುನಾವಣೆಯಲ್ಲಿ ಕೇಂದ್ರ ಸೇನೆಯ 120 ಘಟಕಗಳನ್ನು ಕೇರಳದಲ್ಲಿ ನಿಯೋಜಿಸಲಾಗಿತ್ತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries