HEALTH TIPS

ಆಯ್ದ ಮಾರ್ಗದಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಆರಂಭ

         ನವದೆಹಲಿ; ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದೇಶದ ಆಯ್ದ ನಿಲ್ದಾಣಗಳಲ್ಲಿ ಫೆಬ್ರವರಿ 1ರಿಂದ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ.

         2014ರಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಿತ್ತು. ವೆಬ್ ಸೈಟ್ ಅಥವ ಪೋನ್ ಮೂಲಕ ಪ್ರಯಾಣಿಕರು ಆಹಾರವನ್ನು ಆರ್ಡರ್ ಮಾಡಿ ಪಡೆಯಬಹುದಾಗಿತ್ತು.

               ಆದರೆ, ಕೋವಿಡ್ ಸಮಯದಲ್ಲಿ ಇ-ಕ್ಯಾಟರಿಂಗ್ ಸೇವೆಯನ್ನು ಭಾರತೀಯ ರೈಲ್ವೆ ಸ್ಥಗಿತಗೊಳಿಸಿತ್ತು. ಸುಮಾರು 1 ವರ್ಷದ ಬಳಿಕ ಈ ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ.

         ಫುಡ್ ಆನ್ ಟ್ರಾಕ್ ಅಪ್ಲಿಕೇಶನ್‌ ಮೂಲಕವೂ ಪ್ರಯಾಣಿಕರು ಆಹಾರಕ್ಕಾಗಿ ಮನವಿ ಸಲ್ಲಿಸಬಹುದಾಗಿದೆ. ಭಾರತೀಯ ರೈಲ್ವೆ ಇ-ಕ್ಯಾಟರಿಂಗ್ ಸೇವೆ ಪುನಃ ಆರಂಭಿಸುವ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದೆ.

       ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುತ್ತಲೇ ಇ-ಕ್ಯಾಟರಿಂಗ್ ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಆದರೆ, ನಿಗದಿತ ರೈಲು ನಿಲ್ದಾಣಗಳಲ್ಲಿ ಮಾತ್ರ ಫೆ.1ರಿಂದ ಸೇವೆ ಲಭ್ಯವಿದೆ.

          ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ, ಸೂರತ್, ಅಹಮದಾಬಾದ್, ಪುಣೆ, ಹೌರಾ, ವಿಜಯವಾಡಿ, ಎರ್ನಾಕುಲಂ, ಉಜ್ಜೈನಿ ಸೇರಿದಂತೆ ದೇಶದ 62 ರೈಲು ನಿಲ್ದಾಣಗಳಲ್ಲಿ ಸೋಮವಾರದಿಂದ ಇ-ಕ್ಯಾಟರಿಂಗ್ ಸೇವೆ ಆರಂಭವಾಗಲಿದೆ.

ಬೇಡಿಕೆ ಸಲ್ಲಿಸುವುದು ಹೇಗೆ?; ಪ್ರಯಾಣಿಕರು ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ಬೇಡಿಕೆ ಸಲ್ಲಿಸಬಹುದು. 1323 ನಂಬರ್‌ಗೆ ಕರೆ ಮಾಡುವ ಮೂಲಕವೂ ಆಹಾರಕ್ಕಾಗಿ ಆರ್ಡರ್‌ ಸಲ್ಲಿಸಬಹುದು.

       ಜನರು ಐಆರ್‌ಸಿಟಿಸಿಯ Food on track ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಬೇಡಿಕೆ ಸಲ್ಲಿಸಬಹುದು. ಜನರ ಉಪಯೋಗಕ್ಕಾಗಿ ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆಯನ್ನು ಸಹ ಪುನಃ ಸ್ಥಾಪಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries