ಮಧೂರು: ಮಧೂರು ಗ್ರಾಮ ಪಂಚಾಯಿತಿಯ 2021-22ನೇ ಸಾಲಿನ ಅಭಿವೃದ್ಧಿ ಕಾರ್ಯಾಗಾರ ಅಟಲ್‍ಜಿ ಕಮ್ಯೂನಿಟಿ ಸಭಾಂಗಣದಲ್ಲಿ ಜರುಗಿತು. ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಕಾರ್ಯಾಗಾರ ಉದ್ಘಾಟಿಸಿದರು. ಉಪಾಧ್ಯಕ್ಷ ಸ್ಮಿಜಾ ವಿನೋದ್ ಅಧ್ಯಕ್ಷತೆ ವಹಿಸಿದ್ದರು.
ಅಭಿವೃದ್ಧಿ ಯೋಜನೆಯ ಕರಡು ಪ್ರತಿಯ ಬಗ್ಗೆ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು ವಿಷದೀಕರಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಯಶೋಧಾ ನಾಯ್ಕ್, ಉಮೇಶ್ ಗಟ್ಟಿ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ಗೀತಾಕುಮಾರಿ ಸ್ವಾಗತಿಸಿ, ಪೂರ್ಣಿಮಾ ವಂದಿಸಿದರು.


