ಕಾಸರಗೋಡು: ಉತ್ತರಪ್ರದೇಶ ಮುಖ್ಯಮಂತ್ರಿ ಕಾಸರಗೋಡಿನಲ್ಲಿ ಫೆ. 21ರಂದು ಭಾಗವಹಿಸಿ ಸಾರ್ವಜನಿಕ ಭಾಷಣ ಮಾಡಲಿರುವ ತಾಳಿಪಡ್ಪು ಮೈದಾನದಲ್ಲಿ ಉತ್ತರಪ್ರದೇಶ ಎಡಿಜಿಪಿ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಶುಕ್ರವಾರ ಸ್ಥಳಪರಿಶೋಧನೆ ನಡೆಸಿತು.
ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ, ವಿಜಯ ಯಾತ್ರೆ ಕನ್ವೀನರ್ ಎಂ.ಟಿ ರಮೇಶ್, ರಾಜ್ಯ ಸಮಿತಿ ಕೋರ್ಡಿನೇಟರ್ ಕೆ. ರಂಜಿತ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿಗಳಾದ ವೇಲಾಯುಧನ್, ಸುಧಾಮ ಗೋಸಾಡ, ಕಾರ್ಯದರ್ಶಿ ಎನ್. ಸತೀಶ್ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಕೇರಳ ಘಟಕ ವತಿಯಿಂದ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಆಯೋಜಿಸಿರುವ ವಿಜಯ ಯಾತ್ರೆಗೆ ಫೆ. 21ರಂದು ಕಾಸರಗೋಡಿನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡುವರು.


