ಕಾಸರಗೋಡು: ರಾಜ್ಯ ಸರಕಾರದ ವಿದ್ಯಾಶ್ರೀ ಲಾಪ್ ಟಾಪ್ ವಿತರಣೆ ಯೋಜನೆ ಉದ್ಘಾಟನೆ ಶುಕ್ರವಾರ ನಡೆಯಿತು. ಕಂದಾಯ ಸಚಿವ ಇ.ಚಂದ್ರಶೇಖರನ್ ಆನ್ ಲೈನ್ ಮೂಲಕ ಉದ್ಘಾಟಿಸಿದರು. ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ 10 ಮಂದಿ ಪರಿಶಿಷ್ಟ ಜಾತಿ ಜನಾಂದ ವಿದ್ಯಾರ್ಥಿಗಳಿಗೆ ಲಾಪ್ ಟಾಪ್ ವಿತರಿಸಿದರು. ಕೆ.ಎಸ್.ಎಫ್.ಇ. ಕಣ್ನೂರು ವಲಯ ಸಹಾಯಕ ಪ್ರಧಾನ ಪ್ರಬಂಧಕಿ ಮೇರಿಕುಟ್ಟಿ ಸೆಬಾಸ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಕುಟುಂಬಢಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಎ.ಡಿ.ಎಂ.ರಾದ ಪ್ರಕಾಶನ್ ಪಾಲಾಯಿ, ಇಕ್ಬಾಲ್ ಉಪಸ್ಥಿತರಿದ್ದರು. ಕೆ.ಎಸ್.ಎಫ್.ಇ. ಕಣ್ಣೂರು ವಲಯ ಪ್ರಧಾನ ಪ್ರಬಂಧಕ ಎಚ್.ಕುಂuಟಿಜeಜಿiಟಿeಜಕಣ್ಣನ್ ಸ್ವಾಗತಿಸಿದರು. ಕುಟುಂಬಶ್ರೀ ಎ.ಡಿ.ಎಂ.ಸಿ.ಡಿ.ಹರಿದಾಸ್ ವಂದಿಸಿದರು.

