ಕಾಸರಗೋಡು: ಕಾಞಂಗಾಡಿನ ಮಡಿಕೈ ಅಂಬಲತ್ತರದಲ್ಲಿ ಶ್ರೀ ಸುಬ್ರಹ್ಮಣ್ಯನ್ ತಿರುಮುಂಬ್ ಸ್ಮಾರಕ ಸಮುಚ್ಚಯದ ಮೊದಲ ಹಂತದ ಉದ್ಘಾಟನೆ ಶುಕ್ರವಾರ ಜರುಗಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆನ್ ಲೈನ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಸರಗೋಡು ಜಿಲ್ಲೆಯ ಸಾಮಸ್ಕøತಿಕ ಪರಂಪರೆಯನ್ನು ಪೆÇೀಷಿಸುವ ನಿಟ್ಟಿನಲ್ಲಿ ಈ ಸಮುಚ್ಚಯ ಪೂರಕವಾಗಲಿದೆ. ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಕವಿಯಾಗಿ ಹೋರಾಟ ನಡೆಸಿದವರು ತಿರುಮುಂಬ್. ಅವರ ಸ್ಮರಣೆಯಲ್ಲಿ ಈ ಸಮುಚ್ಚಯ ಸಾರ್ಥಕವಾಗಲಿದೆ ಎಂದರು.
ಪರಿಶಿಷ್ಟ ಜಾತಿ-ಪಂಗಡ-ಹಿಂದುಳಿದ ಜನಾಂಗಗಳ ಕಲ್ಯಾಣ ಇಲಾಖೆ ಸಚಿವ ಎ.ಕೆ.ಬಾಲನ್ ಅಧ್ಯಕ್ಷತೆ ವಹಿಸಿದ್ದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಣಿ ಜಾರ್ಜ್ ಸ್ವಾಗತಿಸಿದರು. ಕೇರಳ ಚಲನಚಿತ್ರ ಅಭಿವೃದ್ಧಿ ನಿಗಮ ನಿರ್ದೇಶಕಿ ಎನ್.ಮಾಯಾ ವರದಿ ವಾಚಿಸಿದರು. ಕಾರ್ಯದರ್ಶಿ ಆರ್.ಸದಾಶಿವನ್ ವಂದಿಸಿದರು.
ಮಡಿಕೈ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿ.ಪ್ರಕಾಶನ್ ಶಿಲಾಫಲಕ ಅನಾವರಣಗೊಳಿಸಿದರು. ಮಾಜಿ ಅಧ್ಯಕ್ಷರುಗಳಾದ ಸಿ.ಪ್ರಭಾಕರನ್, ಕೆ.ವಿ.ಕುಮಾರನ್, ಪಂಚಾಯತ್ ಸದಸ್ಯೆ ವಿ.ರಮಾ, ಕೇರಳ ಚಲನಚಿತ್ರ ಅಭಿವೃದ್ಧಿ ನಿಗಮ ಯೋಜನೆ ಪ್ರಬಂಧಕ ಕೆ.ಜೆ.ಜೋಸ್ ಉಪಸ್ಥಿತರಿದ್ದರು.

