ಪಾಲಕ್ಕಾಡ್: ಅಟ್ಟಪ್ಪಾಡಿಯಲ್ಲಿ ಒಂದೂವರೆ ವರ್ಷದ ಮಗುವಲ್ಲಿ ಶಿಗೆಲ್ಲಾ ಸೋಂಕು ಖಚಿತಪಡಿಸಲಾಗಿದ್ದು ಮತ್ತೆ ಆತಂಕ ಮೂಡಿಸಿದೆ. ಅಗಳಿ ಮೇಲೊ ಎಂಬಲ್ಲಿ ಆದಿವಾಸಿ ದಂಪತಿಯ ಮಗುವಿನಲ್ಲಿ ಈ ಸೋಂಕು ದೃಢಪಟ್ಟಿದೆ. ಮಗುವನ್ನು ಕೋಝಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಜ್ವರ ಮತ್ತು ಅತಿಸಾರದ ಕಾರಣ ಮಗುವನ್ನು ಕಳೆದ ಶುಕ್ರವಾರ ಅಟ್ಟಪ್ಪಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಗೆಲ್ಲಾದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋಝಿಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.
ಮಗುವಿನ ಪೋಷಕರಲ್ಲಿ ಸೋಂಕು ಕಂಡುಬಂದಿಲ್ಲ. ಪ್ರಸ್ತುತ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.



