HEALTH TIPS

ಕೇರಳದಲ್ಲಿ ಕಮಲ ಅರಳಿಸುವ ಹುರುಪಲ್ಲಿ ಬಿಜೆಪಿ-ಸ್ಟಾರ್ ಪ್ರಚಾರಕರು ರಾಜ್ಯಕ್ಕೆ-ಅಮಿತ್ ಶಾ, ಯೋಗಿ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಫಡ್ನವಿಸ್, ತೇಜಸ್ವಿ ಸೂರ್ಯ ವಿಜಯ ಯಾತ್ರೆಗೆ

             

          ತಿರುವನಂತಪುರ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಕೇರಳದಲ್ಲಿ ಕಮಲದ ಅಲೆಯನ್ನು ಸೃಷ್ಟಿಸಲು ಕೇಂದ್ರ ನಾಯಕರ ಮಹಾ ದಂಡು ರಾಜ್ಯದತ್ತದೌಡಾಯಿಸಲಿದೆ ಎಂುದು ತಿಳಿದುಬಂದಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆ ಮೆರವಣಿಗೆಯ ಸಂದರ್ಭದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರು ಕೇರಳಕ್ಕೆ ಆಗಮಿಸುತ್ತಿದ್ದಾರೆ. ವಿಜಯ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರದ ಆಧುನಿಕ ಚಾಣಕ್ಯರೆಂದೇ ಬಿಂಬಿಸಲ್ಪಡುವ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ,  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇರಳಕ್ಕೆ ಬರುತ್ತಿದ್ದಾರೆ. ಕೇಂದ್ರ ನಾಯಕರ ಆಗಮನದೊಂದಿಗೆ ಸುರೇಂದ್ರನ್ ಮುನ್ನಡೆಸಲಿರುವ  ವಿಜಯ ಯಾತ್ರೆ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಿರುವ ಕಾಳಜಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ.


 

          ಅಮಿತ್ ಶಾ ಅವರಲ್ಲದೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಪ್ರಹ್ಲಾದ್ ಜೋಶಿ, ವಿ.ಕೆ.ಸಿಂಗ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಷ್ಟ್ರೀಯ ವಕ್ತಾರರಾದ ಮೀನಾಕ್ಷಿ ಲೆಖಿ, ಶಾನವಾಸ್ ಹುಸೇನ್, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಪಕ್ಷದ ತಮಿಳುನಾಡು ಮುಖಂಡೆ, ಸಿನಿಮಾ ತಾರೆ ಖುಷ್ಬೂ ಸುಂದರ್ ಅವರಂತಹ ಹೆಚ್ಚಿನ ಸಂಖ್ಯೆಯ ಸ್ಟಾರ್ ಪ್ರಚಾರಕರು ಕೇರಳಕ್ಕೆ ಬರುತ್ತಿದ್ದಾರೆ.

        ಪ್ರವಾಸದ ಸಮಯದಲ್ಲಿ 14 ಮಹಾ ರ್ಯಾಲಿಗಳು ಮತ್ತು 80 ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು. ಮಹಾ ರ್ಯಾಲಿಗಳಿಗೆ ಹಾಜರಾಗಲು ನಾಯಕರು ಬರುತ್ತಿದ್ದಾರೆ. ಇದಲ್ಲದೆ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಕ್ಷೇತ್ರಗಳಿಗೆ ಹೆಚ್ಚಿನ ನಾಯಕರನ್ನು ಕರೆತರುವ ಉದ್ದೇಶವೂ ಬಿಜೆಪಿಗೆ ಇದೆ. ಫೆಬ್ರವರಿ 21(ನಾಳೆ) ಕಾಸರಗೋಡಿನಿಂದ ಆರಂಭಗೊಳ್ಳಲಿರುವ ವಿಜಯ ಯಾತ್ರೆಯ  ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 7 ರಂದು ತಿರುವನಂತಪುರಕ್ಕೆ ಆಗಮಿಸಲಿದ್ದಾರೆ.

ನಾಯಕರು ಮತ್ತು ಆಗಮನದ ಸ್ಥಳಗಳು

ಫೆಬ್ರವರಿ 22 - ಕಣ್ಣೂರು: ಕೇಂದ್ರ ಸಚಿವ ವಿ.ಕೆ.ಸಿಂಗ್

ಫೆಬ್ರವರಿ 24 - ಕೋ ಏozhiಞoಜe ?ಕೋಡ್: ದೇವೇಂದ್ರ ಫಡ್ನವಿಸ್ (ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರ)

ಫೆಬ್ರವರಿ 25 - ಮಲಪ್ಪುರಂ: ಶಹನವಾಜ್ ಹುಸೇನ್ (ರಾಷ್ಟ್ರೀಯ ವಕ್ತಾರ)

ಫೆಬ್ರವರಿ 26 - ಪಾಲಕ್ಕಾಡ್: ಖುಷ್ಬು ಸುಂದರ್

ಫೆಬ್ರವರಿ 27 - ತ್ರಿಶೂರ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಫೆಬ್ರವರಿ 28 - ಎರ್ನಾಕುಲಂ: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್

ಮಾರ್ಚ್ 02 - ಕೊಟ್ಟಾಯಂ: ಕೇಂದ್ರ ಸಚಿವ ಸ್ಮೃತಿ ಇರಾನಿ

ಮಾರ್ಚ್ 03 - ಆಲಪ್ಪುಳ: ತೇಜಸ್ವಿ ಸೂರ್ಯ (ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ)

ಮಾರ್ಚ್ 04 - ಪಥನಮತ್ತಟ್ಟ: ಮೀನಾಕ್ಷಿ ಲೇಖಿ ಸಂಸದ (ರಾಷ್ಟ್ರೀಯ ವಕ್ತಾರ)

ಮಾರ್ಚ್ 05 - ಕೊಲ್ಲಂ: ಅಣ್ಣಾಮಲೈ ಐಪಿಎಸ್ (ರಾಜ್ಯ ಉಪಾಧ್ಯಕ್ಷ, ತಮಿಳುನಾಡು) 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries