ತಿರುವನಂತಪುರ: ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಯಾವುದೇ ಜಾತಿ ಅಥವಾ ಧರ್ಮಗಳ ಬೇಧವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಭಿವೃದ್ಧಿ ಎಲ್ಲರಿಗೂ ಇರುವುದಾಗಿದೆ. ಅಭಿವೃದ್ಧಿಗೆ ಯಾವುದೇ ಜಾತಿ, ಧರ್ಮ, ಭಾಷೆ ಅಥವಾ ಲಿಂಗಗಳ ತಡೆ ಇಲ್ಲ ಎಂದು ಪ್ರಧಾನಿ ಹೇಳಿದರು.
ಅವರು ಕೇರಳದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಾರಂಭಕ್ಕೆ ಆನ್ ಲೈನ್ ಮೂಲಕ ಶುಕ್ರವಾರ ಚಾಲನೆ ನೀಡಿ ಮಾತನಾಡುತ್ತಿದ್ದರು.
ಖ್ಯಾತ ಕವಿ ಕುಮಾರನಾಶಾನ್ ರ ಪ್ರಸಿದ್ಧ ಕವಿತೆ ಚಂದಲಭಿಕ್ಷುಕಿಯ ಪದ್ಯಗಳನ್ನು ಪ್ರಧಾನಿ ಉಲ್ಲೇಖಿಸಿ ಗಮನ ಸೆಳೆದರು. ಕೇರಳದಲ್ಲಿ 772 ಕೋಟಿ ರೂ.ಮೊತ್ತದ 27 ಯೋಜನೆಗಳು ಪೂರ್ಣಗೊಂಡಿವೆ. ಮತ್ತು ಇದು ಹೆಮ್ಮೆಯ ಕ್ಷಣವಾಗಿದೆ ಎಂದು ಪ್ರಧಾನಿ ಹೇಳಿದರು.
ತಾರತಮ್ಯವಿಲ್ಲದೆ ಅಭಿವೃದ್ಧಿಯನ್ನು ಕಾರ್ಯಗತಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಇದು ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಪರಿಕಲ್ಪನೆಯ ಮೂಲಾಧಾರವಾಗಿದೆ ಎಂದು ಪ್ರಧಾನಿ ಗಮನಸೆಳೆದರು. ಒಟ್ಟಾಗಿ ಕೆಲಸ ಮಾಡಲು ಕೇರಳದ ಜನರ ಸಹಕಾರ ಅತ್ಯಗತ್ಯ ಎಂದು ಪ್ರಧಾನಿ ಮಲಯಾಳಂನಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು ಮತ್ತು ಮುಕ್ತಾಯಗೊಳಿಸಿದರು ಎಂಬುದು ಗಮನಾರ್ಹ.



