HEALTH TIPS

ರಾಜ್ಯದಲ್ಲಿ ಸರ್ಕಾರಿ, ಖಾಸಗಿ, ಮೊಬೈಲ್ ಮತ್ತು ಅಂಕಿಅಂಶ ಪ್ರಯೋಗಾಲಯಗಳಲ್ಲಿ ನಡೆಸುವ ಕೋವಿಡ್ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗಳಿಗೆ ಹೊಸ ಮಾರ್ಗಸೂಚಿಗಳ ಪ್ರಕಟ

   

        ತಿರುವನಂತಪುರ: ರಾಜ್ಯದ ಸರ್ಕಾರಿ, ಖಾಸಗೀ, ಮೊಬೈಲ್ಸ್ಟೇಟಿಕ್ ಪ್ರಯೋಗಾಲಯಗಳಲ್ಲಿ ನಡೆಸುವ ಕೋವಿಡ್ ಸಂಬಂಧಿ ಆರ್.ಟಿ.ಪಿ.ಸಿ.ಆರ್ ಪರಿಶೀಲನೆಗಳಿಗಾಗಿರುವ ಮಾರ್ಗನಿರ್ದೇಶನಗಳನ್ನು ಆರೋಗ್ಯ ಇಲಾಖೆ ನವೀಕರಿಸಿದೆ. ಪ್ರಸ್ತುತ ಸರ್ಕಾರಿ, ಅಂಗೀಕೃತ ಖಾಸಗೀ ಲ್ಯಾಬೋರೇಟರಿಗಳಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದರೂ ಪರೀಕ್ಷೆಗಳನ್ನು ಇನ್ನಷ್ಟು ನಿಖರಗೊಳಿಸಲು ಹೊಸ ಮಾರ್ಗನಿರ್ದೇಶನಗಳನ್ನು ಹೊರಡಿಸಲಾಗಿದೆ. 


         ಸರ್ಕಾರಿ ಲ್ಯಾಬ್‍ಗಳ ಪರೀಕ್ಷಾ ಸಾಮಥ್ರ್ಯಗಳನ್ನು ಮೀರಿ ಆರ್‍ಟಿಪಿಸಿಆರ್‍ಪಿ ಪರೀಕ್ಷೆಗಳಿಗಾಗಿ ಅಗತ್ಯವಾದರೆ ಮಾನ್ಯತೆ ಪಡೆದ ಖಾಸಗಿ ಲ್ಯಾಬ್‍ಗಳಿಗೆ ಕಳುಹಿಸಬಹುದು. ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ಆರ್‍ಟಿಪಿಸಿಆರ್ ಪರಿಶೋಧನೆಯನ್ನು ಸರ್ಕಾರ ಉಚಿತಗೊಳಿಸಿತ್ತು. 

       ಈ ಸೇವೆಯನ್ನು ಒದಗಿಸುವ ಮಾನ್ಯತೆ ಪಡೆದ ಲ್ಯಾಬ್‍ಗಳ ಎಲ್ಲಾ ವೆಚ್ಚಗಳನ್ನು ಒಳಗೊಂಡಂತೆ 448. ರೂ.ವಿನಂತೆ ಸರ್ಕಾರ ಪಾವತಿಸುತ್ತದೆ. ಈ ಎಲ್ಲಾ ಲ್ಯಾಬ್‍ಗಳು 24 ಗಂಟೆಗಳ ಒಳಗೆ ಪರೀಕ್ಷಿಸಿ ಮಾಹಿತಿಯನ್ನು ಅಪ್ ಲೋಡ್ ಮಾಡಬೇಕಾಗುತ್ತದೆ.  

       ಕೋವಿಡ್ ತೀವ್ರ ಸ್ವರೂಪದಲ್ಲಿರುವ ಪ್ರದೇಶಗಳಲ್ಲಿ ಅತಿ ವೇಗದಲ್ಲಿ ಪರೀಕ್ಷೆಗಳನ್ನು ನಡೆಸಿ ಸೋಂಕಿತರನ್ನು ಗುರುತಿಸಲು ಕೆಎಂಎಸ್ಸಿಎಲ್ ಮುಖೇನ ಆರ್.ಟಿ.ಪಿ.ಸಿ.ಆರ್ ಮೊಬೈಲ್ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಗಳ ಹಾಟ್ ಸ್ಪೋಟ್ ಗಳನ್ನು ಗುರುತಿಸಿ ಮೊಬೈಲ್ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತವೆ. 

       ವಿಮಾನ ನಿಲ್ದಾಣ, ಕಂಟೈನ್‍ಮೆಂಟ್ ವಲಯಗಳು, ಕ್ಲಸ್ಟರ್‍ಗಳು, ಉದ್ಯೋಗ ಸ್ಥಳಗಳು ಪ್ರಾಥಮಿಕ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿ ಮೊಬೈಲ್ ಪ್ರಯೋಗಾಲಯಗಳು ಕಾರ್ಯನಿರ್ವಹಿಸಲಿವೆ. ಮಾದರಿ ಸಂಗ್ರಹಿಸುವ ಜೊತೆಗೆ ಪರಿಶೀಲನೆ, ರಿಸಲ್ಟ್ ಅಫ್ ಲೋಡ್, ತ್ಯಾಜ್ಯ ನಿರ್ವಹಣೆಗಳಲ್ಲೂ ನಿಖರವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕು.

        ಪರೀಕ್ಷಾ ಫಲಿತಾಂಶಗಳನ್ನು 24 ಗಂಟೆಗಳ ಒಳಗೆ ಅಪ್‍ಲೋಡ್ ಮಾಡಬೇಕು. ಸಕಾರಾತ್ಮಕವಾಗಿದ್ದರೆ ಅತಿಶೀಘ್ರವಾಗಿ ತಿಳಿಯಪಡಿಸಿ ಕಣ್ಗಾವಲು ತಂಡ ಆ ಬಳಿಕದ ನಿರ್ವಹಣೆಯನ್ನು ನೋಡಿಕೊಳ್ಳುವುದು. ಆರ್.ಟಿ.ಪಿ.ಸಿ.ಆರ್ ಪರಿಶೀಲನೆಗಾಗಿ ಎಲ್ಲಾ ಖರ್ಚುಗಳು ಮತ್ತಿತರ ವ್ಯವಸ್ಥೆಯನ್ನು ಮೊಬೈಲ್ ಲ್ಯಾಬೋರೇಟರಿಗಳು 448 ರೂ.ಗಳನ್ನು ಮಾತ್ರ  ಶುಲ್ಕ ಪಡೆಯಬಹುದಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries