ನವದೆಹಲಿ: ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಿದೇಶಾಂಗ ಸಚಿವಾಲಯವನ್ನು ಗುರಿಯಾಗಿಸಿಕೊಂಡು ಸ್ವಾಮಿ ಬುಧವಾರ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ, ಒಗಟಿಗೆ ಉತ್ತರಿಸಲು ಕೇಳಿಕೊಂಡರು. ಚೀನಾದ ಸೇನಾ ಪಿಎಲ್‌ಎ ಎಲ್‌ಎಸಿ ದಾಟಿ ಭಾರತದ ಗಡಿಯನ್ನು ಪ್ರವೇಶಿಸಿಲ್ಲ ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಹೇಳಿತ್ತು. ಆದರೆ ಈಗ ವಿದೇಶಾಂಗ ಸಚಿವಾಲಯವು ಭಾರತ ಸರ್ಕಾರವು ರಾಜತಾಂತ್ರಿಕ ಮಟ್ಟದಲ್ಲಿ ದೊಡ್ಡ ಜಯ ಸಾಧಿಸಿದೆ ಎಂದು ಹೇಳುತ್ತಿದೆ. ಚೀನಾದ ಸೈನ್ಯವು ಭಾರತೀಯ ಭೂಪ್ರದೇಶದಿಂದ ಹಿಂದೆ ಸರಿಯಲು ಪ್ರಾರಂಭಿಸಿದೆ. ಈ ಎರಡೂ ವಿಷಯಗಳು ಸರಿಯಾಗಿರಬಹುದೇ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿಯ ಹೇಳಿಕೆಯನ್ನು ಉಲ್ಲೇಖಿಸಿ ಪ್ರಶ್ನೆ
ಫೆಬ್ರವರಿ 13ರಂದು ಬಿಜೆಪಿ ನಾಯಕ ಪಿಎಂ ಮೋದಿಯವರಿಗೆ ಇದೇ ರೀತಿಯ ಟ್ವೀಟ್ ಕೇಳಿದ್ದರು. ಚೀನಾ ಸೇನೆ ಭಾರತ ಭೂಗಕ್ಕೆ ಪ್ರವೇಶಿಲ್ಲ ಎಂದು ಹೇಳಿದ್ದರು. ಆದರೆ ಈಗ ರಾಜತಾಂತ್ರಿಕ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಜಯ ಎಂದು ವಿದೇಶಾಂಗ ಸಚಿವಾಲಯ ಹೇಳುತ್ತಿದೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿರುವ ಸ್ವಾಮಿ
ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹಲವಾರು ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಅವರು ತಮ್ಮದೇ ಪಕ್ಷದ ನೀತಿಗಳ ಬಗ್ಗೆ ಬಿಗಿಯಾಗಿ ಮಾತನಾಡುತ್ತಿದ್ದರು. 'ರಾಮನ ಭಾರತದಲ್ಲಿ ಪೆಟ್ರೋಲ್ 93 ರೂ., ಸೀತೆಯ ನೇಪಾಳದಲ್ಲಿ 53 ರೂ. ಮತ್ತು ರಾವಣನ ಲಂಕೆಯಲ್ಲಿ ಪೆಟ್ರೋಲ್ 51 ರೂ. ಎಂದು ಟ್ವೀಟ್ ಮಾಡಿದ್ದರು.






