HEALTH TIPS

ಪ್ಯಾಂಡೆಮಿಕ್ ಟು ಎಂಡೆಮಿಕ್; ಮಾರಕ ಕೊರೋನಾ ವೈರಸ್ ನ ಹೆಡೆಮುರಿಕಟ್ಟಿದ ಭಾರತ..! ಇಷ್ಟಕ್ಕೂ ತಜ್ಞರು ಹೇಳಿದ್ದೇನು?

      ನವದೆಹಲಿ: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಮಾರಕ ಕೊರೋನಾ ವೈರಸ್ ಇದೀಗ ಭಾರತದಲ್ಲಿ ಸಾಂಕ್ರಾಮಿಕ ರೋಗವಾಗಿ ಉಳಿದಿಲ್ಲ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

       ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನ ಹಾವಳಿ ಗಣನೀಯವಾಗಿ ತಗ್ಗಿದ್ದು, ದಿನಂಪ್ರತಿ ಪತ್ತೆಯಾಗುತ್ತಿರುವ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿ ಹೋಗಿದೆ. ಇದು ಕೊರೋನಾ ವೈರಸ್ ಭಾರತದಲ್ಲಿ ಸಾಂಕ್ರಾಮಿಕವಾಗಿ ಉಳಿದಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. 

      ಈ ಬಗ್ಗೆ ಮಾಹಿತಿ ನೀಡಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ವೈರಾಲಜಿಸ್ಟ್‌ಗಳು, 'ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕವು ಈಗ ಸ್ಥಳೀಯ ಹಂತದತ್ತ ಸಾಗಿದೆ. ಭಾರತವು ಒಂದು ಅಥವಾ ಎರಡು ತಿಂಗಳಲ್ಲಿ ಸಾಂಕ್ರಾಮಿಕದಿಂದ ಸ್ಥಳೀಯ ಹಂತಕ್ಕೆ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

      ಈ ನಿಟ್ಟಿನಲ್ಲಿ ಇನ್ನಷ್ಟು ಹೇಳಿರುವ ಖ್ಯಾತ ವೈರಾಲಜಿಸ್ಟ್ ಹಾಗೂ  ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (ವೆಲ್ಲೂರು) ನ ನಿವೃತ್ತ ಪ್ರಾಧ್ಯಾಪಕ ಮತ್ತು ಕ್ಲಿನಿಕಲ್ ವೈರಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗಗಳ ಮುಖ್ಯಸ್ಥ ಡಾ. ಜಾಕೋಬ್ ಜಾನ್ ಅವರು, ಭಾರತದಲ್ಲಿ ಕೋವಿಡ್ ಸೋಂಕು ಸಾಂಕ್ರಾಮಿಕದಿಂದ ಸ್ಥಳೀಯ ಹಂತದತ್ತ ಸಾಗುತ್ತಿದೆ. ಸ್ಥಳೀಯ ಹಂತದ ಎಂದರೆ ಈಗ ಕೆಲ ಋತುಗಳಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸುತ್ತದೆ. ಶೀತ, ವೈರಾಣು ಜ್ವರ, ಮಲೇರಿಯಾ, ಡೆಂಗ್ಯೂ ಇಂತಹ ಆರೋಗ್ಯ ಸಮಸ್ಯೆಗಳು ಕೆಲ ನಿರ್ಧಿಷ್ಟ ಸಮಯದಲ್ಲಿ ಮಾತ್ರ ಆಗಾಗ ಕಾಣಿಸಿಕೊಳ್ಳುತ್ತವೆ. ಇದೀಗ ಭಾರತದಲ್ಲಿ ಕೊರೋನಾ ಸೋಂಕು ಕೂಡ ಅದೇ ಹಾದಿಯಲ್ಲಿ ಸಾಗಿದ್ದು, ಈ ಪಟ್ಟಿಗೆ ಕೊರೋನಾ ಸೋಂಕು ಕೂಡ ಸೇರ್ಪಡೆಯಾಗುವ ಕಾಲ ದೂರವಿಲ್ಲ ಎಂದು ಹೇಳಿದ್ದಾರೆ.

     'ಸ್ಥಳೀಯ ಕಾಯಿಲೆ ಎಂದರೆ ಅದು ಎಂದಿಗೂ ಹೋಗುವುದಿಲ್ಲ ಮತ್ತು ನಿರ್ದಿಷ್ಟ ಋತುವಿನಲ್ಲಿ ಅಥವಾ ಪ್ರದೇಶದಲ್ಲಿ ನಿಯತಕಾಲಿಕವಾಗಿ ಮರಳುತ್ತದೆ. ಸೈದ್ಧಾಂತಿಕವಾಗಿ, ಪ್ರತಿ ಸೋಂಕಿತ ವ್ಯಕ್ತಿಯು ಅದನ್ನು ಇನ್ನೊಬ್ಬ ವ್ಯಕ್ತಿಗೆ ರವಾನಿಸಿದರೆ ಸೋಂಕು ಸ್ಥಳೀಯವಾಗಿರುತ್ತದೆ. ಸೋಂಕು ಪ್ರಸರಣ ಸಾಮರ್ಥ್ಯ ಒಂದಕ್ಕೇ ಸೀಮಿತವಾಗಿದ್ದರೆ ಅಗ ಅದನ್ನು ವೈಜ್ಞಾನಿಕ ಭಾಷೆಯಲ್ಲಿ ಎಂಡೆಮಿಕ್ ಅಥವಾ ಸ್ಥಳೀಯ ಹಂತ ಎನ್ನಲಾಗತ್ತದೆ ಎಂದು ಹೇಳಿದ್ದಾರೆ.

      ಆದರೆ ಇದೇ ವಿಚಾರವಾಗಿ ಮಾತನಾಡಿರುವ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಸಂಸ್ಥೆಯ ನಿರ್ದೇಶಕ ಡಾ.ಎನ್.ಮಂಜುನಾಥ್ ಅವರು, 'ಸ್ಥಳೀಯ ಹಂತದ ರೋಗಗಳಲ್ಲಿ ಹಲವಾರು ಮಾದರಿಗಳನ್ನು ಗಮನಿಸಬಹುದು. ಕೆಲವು ವರ್ಷದುದ್ದಕ್ಕೂ ಕಡಿಮೆ ಮಟ್ಟದಲ್ಲಿ ಅಸ್ತಿತ್ವದಲ್ಲಿರಬಹುದು, ಅಂತೆಯೇ ಕೆಲವರಲ್ಲಿ  ಕಡಿಮೆ ಪ್ರಸರಣದ ಸಾಮರ್ಥ್ಯ ಮತ್ತೆ ಕೆಲವರಲ್ಲಿ ಅಧಿಕ ಪ್ರಸರಣದ ಸಾಮರ್ಥ್ಯವಿರುತ್ತದೆ. ಇದರರ್ಥ ಕೋವಿಡ್ ಇಲ್ಲೇ ಉಳಿಯಲು ಬಂದಿದೆ. ಇಂತಹ ಸಮಸ್ಯೆಗಳನ್ನು ಪೋಲಿಯೊ ಮಾದರಿಯಂತೆ ಲಸಿಕೆಗಳ ಮೂಲಕ ನಿರ್ಮೂಲನೆ ಮಾಡುವವರೆಗೆ ಇದು ವರ್ಷಕ್ಕೊಮ್ಮೆ ಹಿಂತಿರುಗಬಹುದು. ಹೀಗಾಗಿ ಕೋವಿಡ್ ಅನ್ನು ಪೋಲಿಯೊದಂತಹ ಲಸಿಕೆಗಳೊಂದಿಗೆ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ.

       ಅಂತೆಯೇ ಕೋವಿಡ್ ಲಸಿಕೆಯ ಪರಿಣಾಮಕಾರಿತ್ವವು ಎರಡನೇ ಡೋಸೇಜ್ ಪೂರ್ಣಗೊಂಡ ನಂತರವೇ ತಿಳಿಯುತ್ತದೆ. ಅಂದರೆ ಮಾರ್ಚ್ ಎರಡನೇ ವಾರದ ನಂತರ ವ್ಯಾಕ್ಸಿನೇಷನ್ ಡ್ರೈವ್‌ನ ಪರಿಣಾಮಕಾರಿತ್ವ ತಿಳಿಯುತ್ತದೆ ತಜ್ಞರು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries