ಕಾಸರಗೋಡು: ರಾಜ್ಯ ಸರಕಾರದ ನೂರು ಕ್ರಿಯಾದಿನಗಳ ಕಾರ್ಯಕ್ರಮ ಅಂಗವಾಗಿ ಘೋಷಿಸಿದ್ದ 10 ಕರಾವಳಿ ರಸ್ತೆಗಳ ಉದ್ಘಾಟನೆ ಮತ್ತು ನಿರ್ಮಾಣ ನಡೆಯಲಿರುವ 12 ರಸ್ತೆಗಳ ಕಾಮಗಾರಿಗಳ ಉದ್ಘಾಟನೆ ಶುಕ್ರವಾರ ಜರಗಿತು.
ನೀಲೇಶ್ವರ ಅಳಿತ್ತಲದಲ್ಲಿ ಸಮಾರಂಭ ಜರುಗಿತ್ತು. ಕಾಸರಗೋಡು ವಿಧಾನಸಭೆ ಕ್ಷೇತ್ರದ ಬಂಗರಕುನ್ನು ರಸ್ತೆ, ಬೆದ್ರಡ್ಕ- ಕಂಬಾರ್ ರಸ್ತೆ ಸಹಿತ 10 ರಸ್ತೆಗಳು, ಕಾಸರಗೋಡು ವಿಧಾನಸಭೆ ಕ್ಷೇತ್ರದ ಮಂಗಲ್ಪಾಡಿ ಪಂಚಾಯತ್ ನ ಪಳ್ಳತ್ತೊಟ್ಟಿ-ದೀನಾರ್ ರಸ್ತೆ, ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಎನ್.ಎಚ್.ಮೌಲಾನಾ ರಸ್ತೆ ಸಹಿತ 12 ರಸ್ತೆಗಳ ಕಾಮಗಾರಿಯನ್ನು ಅವರು ಉದ್ಘಾಟಿಸಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಉಪಾಧಯಕ್ಷ ಪಿ.ಪಿ.ಮುಹಮ್ಮದ್ ರಾಫಿ, ಸದಸ್ಯರಾದ ಪಿ.ಕೆ.ಲತಾ, ಟಿ.ಅಬೂಬಕ್ಕರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.




