ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೃಷಿ ವಲಯದ ಸಮಗ್ರ ಅಭಿವೃದ್ಧಿ ಉದ್ದೇಶಿಸಿರುವ ಜಿಲ್ಲಾ ಪಂಚಾಯತ್ ನ ನೂತನ ಆಡಳಿತೆ ಸಮಿತಿಯ ಪ್ರಥಮ ಮುಂಗಡಪತ್ರದ ಮಂಡನೆ ಶುಕ್ರವಾರ ನಡೆಯಿತು. ಹಿಂದಿನ ಬಾಕಿ ಸಹಿತ 97,03,24,637 ರೂ. ನಿರೀಕ್ಷತ ಆದಾಯ, 95,37,22,000 ರೂ. ನಿರೀಕ್ಷಿತ ವೆಚ್ಚ ಸಹಿತ 1,66,02,637 ರೂ. ಮಿಗತೆಯ ಬಜೆಟ್ ಮಂಡನೆಯಾಗಿದೆ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು 2021-22 ವರ್ಷದ ಬಜೆಟ್ ಮಂಡಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಬಜೆಟ್ ನ ಪ್ರಧಾನ ಅಂಶಗಳು:
ಕೃಷಿ ವಲಯ: ಪೆರಿಯದಲ್ಲಿ ಬೃಹತ್ ಕೃಷಿಕ ರಖಂ ವ್ಯಾಪಾರ ಮಾರುಕಟ್ಟೆ ಸ್ಥಾಪನೆ. ಜಿಲ್ಲೆಯ ಕೃಷಿ ಉತ್ಪೊನ್ನಗಳ ಖರೀದಿ ಮತ್ತು ಮಾರಾಟ ನಡೆಸಲು ಕೇಂದ್ರೀಕೃತ ಸೌಲಭ್ಯ ಈ ಮೂಲಕ ಜಾರಿಗೊಳ್ಳಲಿದೆ. ಕೃಷಿಕರ ಉತ್ಪ್ನನಗಳಿಗೆ ನ್ಯಾಯಬೆಲೆ ಖಚಿತಪಡಿಸುವದರ ಜೊತೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳು ಜಿಲ್ಲೆಯಲ್ಲಿ ಲಭ್ಯವಾಗಲಿವೆ. ಉತ್ಪನ್ನಗಳನ್ನು ಬ್ರಾಂಡ್ ಆಗಿಸಿ ಮಾರುಕಟ್ಟೆ ಕಂಡುಕೊಳ್ಳಲೂ ಈ ಯೋಜನೆಯ ಮೂಲಕ ಸಾಧ್ಯವಾಗಲಿದೆ.
ಈ ವ್ಯಾಪಾರ ಸಮುಚ್ಚಯದಲ್ಲಿ ಸುಮಾರು 800 ಅಂಗಡಿ ಕೊಠಡಿಗಳು ಇರುವುವು. ಜಿಲ್ಲೆಯ ಅಭಿಮಾನ ಭಾಜನ ಸಮಸ್ಥೆಗಳಾದ ಸಿ.ಪಿ.ಸಿ.ಆರ್.ಐ., ಕೃಷಿ ವಿವಿ ಗಳ ಜೊತೆ ಸೇರಿ ಜಾರಿಗೊಳಿಸುವ ಜಿಲ್ಲೆಯ ಕೃಷಿ ಅಭಿವೃದ್ಧಿ ಯೋಜನೆಗಳಿಗೆ ಬಜೆಟ್ ನಲ್ಲಿ ಮೊಬಲಗು ಮೀಸಲಿರಿಸಿಲಾಗಿದೆ.
* ಕೃಷಿಕರು ಸ್ವಯಂ ಮಾರುಕಟ್ಟೆ ಕಂಡುಕೊಳ್ಳುವ ನಿಟ್ಟಿನಲ್ಲಿ ಇ-ವ್ಯಾಪಾರ, ಮಾಹಿತಿ ಸಂಗ್ರಹ, ಮಾಹಿತಿ ಹಂಚುವಿಕೆ ಇತ್ಯಾದಿಗಳ ಜಾರಿ.
* ಕೃಷಿ ಕಾಲೇಜಿನೊಂದಿಗೆ ಸಹಕರಿಸಿ ಅಗ್ರೋ ಕ್ಲಿನಿಕ್ ಜಾರಿ.
* ಭತ್ತದ ಕೃಷಿಕರಿಗೆ ಆರ್ಥಿಕ ಸಹಾಯ.
* ಪರಂಪರಾಗತ ಕೃಷಿ ಅಭಿವೃದ್ಧಿಗೆ ಯೋಜನೆ.
* ತೆಂಗಿನ ಹಳದಿ ರೋಗ ಪರಿಹಾರ ಮತ್ತು ಸ್ಥಳೀಯ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಯೋಜನೆ.
* ಜಿಲ್ಲಾ ಪಂಚಾಯತ್ ಸೀಡ್ ಫಾರಂ ಗಳನ್ನುಕೇಂದ್ರೀಕರಿಸಿ ಶುದ್ಧ ತೆಂಗಿನೆಣ್ಣೆ ತಯಾರಿ.
ಕಂದಾಯ ಇಲಾಖೆಯೊಂದಿಗೆ ಕೈಜೋಡಿಸಿ ರೀ-ವೆನ್ಯೂ ಜಾರಿ
ರಾಜ್ಯದಲ್ಲಿ ಅತಿ ಹೆಚ್ಚು ಸರಕಾರಿ ಜಾಗ ಹೊಮದಿರುವ ಜಿಲ್ಲೆ ಕಾಸರಗೋಡು ಆಗಿದ್ದು, ಕಂದಾಯ ಇಲಾಖೆಯೊಂದಿಗೆ ಕೈಜೋಡಿಸಿ ರೀ-ವೆನ್ಯೂ ಎಂಬ ಹೆರಸಿನಲ್ಲಿ ಜಿಲ್ಲೆಯ ಸರಕಾರಿ ಜಾಗಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಅಭಿವೃದ್ಧಿಗೆ ಪೂರಕ ಜಾಗಗಳ ಪತ್ತೆ ನಡೆಸುವುದು.
* ಜಿಲ್ಲೆಯಲ್ಲಿ ಸೇವಾ ಸೌಹಾರ್ಧ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಆದ್ಯತೆ. ಮಾಹಿತಿ ಹಕ್ಕು, ಸೇವಾ ಹಕ್ಕು ಕಾಯಿದೆ ಇತ್ಯಾದಿಗಳ ಬಗ್ಗೆ ತರಬೇತಿ.
ವಿಶ್ವ ಕಾಸರಗೋಡು ಸಭಾ
* ಜಿಲ್ಲೆಯನ್ನು ಠೇವಣಿ ಸೌಹಾರ್ದವಾಗಿಸುವ ನಿಟ್ಟಿನಲ್ಲಿ ವಿಶ್ವ ಕಾಸರಗೋಡು ಸಭಾ ನಡೆಸಲಾಗುವುದು.
* ಚಟ್ಟಂಚಾಲ್ ಉದ್ದಿಮೆ ಪಾರ್ಕ್ ನ್ನು ಅತ್ಯಧುನಿಕ ರೀತಿ ಸಜ್ಜುಗೊಳಿಸುವುದು.
* ಕ್ರೀಡಾ ಹಬ್ ಶಾಲೆಗಳ ಸ್ಥಾಪನೆ.
* ಹಾಲು ಉತ್ಪಾದಕರಿಗೆ ಆರ್ಥಿಕ ಸಹಾಯ.
* ಮೇಕೆ ಗ್ರಾಮ ಯೋಜನೆ, ಮೊಟ್ಟೆಕೋಳಿ ಸಾಕಣೆ ಯೂನಿಟ್ ಗಳಿಗೆ ಆರ್ಥಿಕ ಸಹಾಯ.
* ಗ್ರಾಮೀಣ ನೌಕರಿ ಖಾತರಿ ಯೋಜನೆ ಕಾರ್ಮಿಕರಿಗೆ ಹೆಚ್ಚುವರಿ ಕಾರ್ಮಿಕ ದಿನಗಳು.
ಜಲಸಂರಕ್ಷಣೆಗೆ ಆದ್ಯತೆ
* ಜಲಕ್ಷಾಮ ಪರಿಹಾರಕ್ಕೆ ಯೋಜನೆ ರೂಪದಲ್ಲಿ ಜಲಬಜೆಟ್.
* ಜೈವ ವೈವಿಧ್ಯ, ನದಜಲ ಸಂರಕ್ಷಣಕ್ಕೆ ಯೋಜನೆಗಳು.
* ನೈಯಂಕಯಂ ಜೈವ ವೈವಿಧ್ಯ ಕೇಂದ್ರ ಸಂರಕ್ಷಣೆಗೆ ಯೋಜನೆ.
* ಜಲಾಶಯಗಳನ್ನು ತೆಂಗಿನನಾರು ಭೂಬಟ್ಟೆ ಬಳಸಿ ಸಂರಕ್ಷಣೆ.
* ಸುಮಾರು 2 ಸಾವಿರ ಬಾವಿಗಳ ರೀಚಾಜಿರ್ಂಗ್.
* ಬನಗಳ ಜೈವ ಸಂಪತ್ತು ಸಂರಕ್ಷಣೆಗೆ ಯೋಜನೆ ರಚನೆ.
* ಕೆರೆಗಳ ನವೀಕರಣ.
* ರಬ್ಬರೈಸ್ಡ್ ಚೆಕ್ ಡಾಂ ಗಳ ಸ್ಥಾಪನೆ. ಮೀನು ಕಾರ್ಮಿಕರ ಗುಂಪುಗಳಿಗಾಗಿ ಯೋಜನೆ.
* ಬಯೋ ಗ್ಯಸ್ ಫೆÇ್ಲೀಕ್ ಮೀನು ಕೃಷಿಗೆ ಯೋಜನೆ.
* ಆರಿಕ್ಕಾಡಿ ಕಡವತ್ ನಲ್ಲಿ ಮೀನು ಇಳಿಕಾ ಕೇಂದ್ರ ಸ್ಥಾಪನೆ.
* ಕೊಯಿಪ್ಪಾಡಿ ಕಡವತ್ ನಲ್ಲಿ ಬಲೆ ನವೀಕರಣ ಕೇಂದ್ರ ಸ್ಥಾಪನೆ.
ಕಾಸರಗೊಡು ಅಭಿವೃದ್ಧಿ ಅಧ್ಯಯನ ಕೇಂದ್ರ ಸ್ಥಾಪನೆ
* ಕೇಂದ್ರೀಯ ವಿವಿ ಸಂಶೋಧನೆ ಸಹಿತ ಅತ್ಯುತ್ತಮ ಸೌಲಭ್ಯಗಳ ಸಹಿತದ ಕಾಸರಗೋಡು ಅಭಿವೃದ್ಧಿ ಅಧ್ಯಯನ ಕೇಂದ್ರದ ಸ್ಥಾಪನೆ.
* ಅಭಿವೃದ್ಧಿ ನೀತಿ ರಚನೆ ಅಧ್ಯಯನ ಕಾಂಗ್ರೆಸ್ ನಡೆಸುವುದು.
* ಯುವಜನತೆಯ ಅಭಿವೃಧ್ಧಿಗೆ ಇಂಟರ್ನ್ ಶಿಪ್ ಯೋಜನೆ.
* ಯುವ ಜನತೆಗಾಗಿ ಯುವ ಸಂಸತ್ತು, ಯುವ ಕ್ಲೀನಿಕ್ ಗಳು.
* ಜಿಲ್ಲಾ ಆಸ್ಪತ್ರೆ ಅಭಿವೃದ್ಧಿಗೆ ಬಹುಮುಖ ಯೋಜನೆಗಳು.
* ಜಿಲ್ಲಾ ಆಯುರ್ವೇದ, ಹೋಮಿಯೋ ಆಸ್ಪತ್ರೆಗಳಿಗೆ ವಿವಿಧ ಯೋಜನೆಗಳು.
ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಚುರುಕುಗೊಳಿಸಲು ಪೂರಕವಾದ ಬಜೆಟ್ : ಜಿಲ್ಲಾ ಪಂಚಾಯತ್ ಅಧ್ಯಕ್ಷೆ
ಕಾಸರಗೋಡು, ಸೆ.12: ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಚುರುಕುಗೊಳಿಸಲು ಈ ಬಾರಿಯ ಬಜೆಟ್ ಪೂರಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ ಮಂಡನೆಗೆ ಮುನ್ನ ಪ್ರಾಸ್ತಾವಿಕ ಭಾಷಣ ಮಾಡಿದರು.
ಕೃಷಿ ವಲಯಕ್ಕೆ ಆದ್ಯತೆ ನೀಡಿರುವ ಬಜೆಟ್ ಪೆರಿಯದಲ್ಲಿ ಬೃಹತ್ ಕೃಷಿ ರಖಂವ್ಯಾಪಾರ ಮಾರುಕಟ್ಟೆ ಸ್ಥಾಪನೆ ಸಹಿತ ಅನೇಕ ನಿರೀಕ್ಷೆ ಮೂಡಿಸುವ ವಿಚಾರ ತಿಳಿಸಿದೆ ಎಂದರು.
ಎಲ್ಲ ವಲಯಗಳಿಗೂ ಸ್ಪರ್ಶ ನೀಡುವ ಬಜೆಟ್ ಇದಾಗಿದೆ ಎಂದು ಜಿಲ್ಲಾ ಯೋಜನೆ ಸಮಿತಿ ಉಪಧ್ಯಕ್ಷ ಡಾ.ಸಿ.ತಂಬಾನ್ ತಿಳಿಸಿದರು.
ಉತ್ಪಾದನೆ ವಲಯಕ್ಕೆ ಆದ್ಯತೆ ನಿಡುವ , ಉತ್ತಮ ದೃಷ್ಟಿಕೋನದೊಂದಿಗೆ ಮಂಡಿಸಿರುವ ಬಜೆಟ್ ಇದಾಗಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್ ತಿಳಿಸಿದರು.
ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾಗಿರುವ ಕೆ.ಶಕುಂತಲಾ, ಷಿನೋಜ್ ಚಾಕೋ, ನ್ಯಾಯವಾದಿ ಸರಿತಾ ಎಸ್.ಎನ್., ಸದಸ್ಯರಾದ ಗೋಲ್ಡನ್ ಅಬ್ದುಲ್ ರಹಮಾನ್, ಸಿ.ಜೆ.ಸಜಿತ್, ಎಂ.ಶೈಲಜಾ ಭಟ್, ಜೋಮೋನ್ ಜೋಸ್, ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ವಂದಿಸಿದರು.





