ಕಾಸರಗೋಡು: ಬಿಜೆಪಿ ಕೇರಳ ರಾಜ್ಯ ಸಹ ಉಸ್ತುವಾರಿ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಫೆ. 6ರಿಂದ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿವಿಧ ವಿಧಾನಸಭಾ ಕ್ಷೇತ ವ್ಯಾಪ್ತಿಯ ಬೂತ್ ಸಮಿತಿ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸುವರು.
ಮಂಜೇಶ್ವರ ಮಂಡಲ ಸಮಿತಿ ಸಭೆ ಫೆ. 6ರಂದು ಬೆಳಗ್ಗೆ 10ಕ್ಕೆ ಪೈವಳಿಕೆ ಕಾಯರ್ ಕಟ್ಟೆ ಕುಲಾಲ್ ಮಂದಿರದಲ್ಲಿ ಜರುಗಲಿದೆ. ಅಂದು ಮಧ್ಯಾಹ್ನ 2ಗಂಟೆಗೆ ಕಾಸರಗೋಡು ಮಂಡಲ ಸಮಿತಿ ಸಭೆ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರುಗಲಿದೆ. ಸಾಯಂಕಾಲ 4ಕ್ಕೆ ಉದುಮ ಮಂಡಲ ಸಮಿತಿ ಸಭೆ ಪೊಯಿನಾಚಿಯ ಆಶ್ರಯ ಸಭಾಂಗಣದಲ್ಲಿ, 7ಕ್ಕೆ ಕಾಞಂಗಾಡು ಮಂಡಲ ಸಮಿತಿ ಸಭೆ ಪುದಿಯಂಗೋಡಿನ ಪಕ್ಷದ ಕಾರ್ಯಾಲಯದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.





